
ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿತಿಭಾ ಕೌಲ್
ಚಿತ್ರ: ಇನ್‌ಸ್ಟಾಗ್ರಾಂ
ಹಿಂದಿ ಬಿಗ್‌ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಿತಿಭಾ ಕೌಲ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿತಿಭಾ ಕೌಲ್
ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಬಹುಕಾಲದ ಗೆಳೆಯ ಜಗ್ಸ್ ಬಾಗ್ ಅವರು ಅಚ್ಚರಿಯ ರೀತಿಯಲ್ಲಿ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ನಿತಿಭಾ ಕೌಲ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿತಿಭಾ ಕೌಲ್
ನಿತಿಭಾ ಕೌಲ್ ಅವರು ಫೋಟೊಗಳ ಜೊತೆಗೆ ‘ಈ ಸುಂದರ ದಿನದಂದು, ನನ್ನ ಜೀವನದ ಪ್ರೀತಿಯು ನನ್ನನ್ನು ಶಾಶ್ವತವಾಗಿ ಅವನಾಗಿರಲು ಕೇಳಿಕೊಂಡಿತು. ಹಲವು ವರ್ಷಗಳ ರಾತ್ರಿಯ ಕರೆಗಳು, ವಿಮಾನ ನಿಲ್ದಾಣದ ವಿದಾಯಗಳು, ಅಂತ್ಯವಿಲ್ಲದ ಕಣ್ಣೀರು ಮತ್ತು ಪರಸ್ಪರ ಪ್ರೀತಿಸಿದ ನಂತರ, ಈ ಕ್ಷಣವು ಪ್ರತಿ ಸೆಕೆಂಡ್ ಅನ್ನು ಸಾರ್ಥಕಗೊಳಿಸಿತು’ ಎಂದು ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿತಿಭಾ ಕೌಲ್
ನಿತಿಭಾ ಕೌಲ್ ಅವರು ಬಾಚ್ಯುಲರ್ ಆಫ್ ಬಿಸಿನೆಸ್ ಸ್ಟಡೀಸ್ ಪದವಿ ಪಡೆದಿದ್ದಾರೆ. ಕ್ಯಾಂಪಸ್ ಸಂದರ್ಶನದ ಮೂಲಕ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆದರೆ ಏಕಾಏಕಿ ಉದ್ಯೋಗ ತೊರೆದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ ಜನಪ್ರಿಯತೆ ಪಡೆದುಕೊಂಡರು. ಬಳಿಕ ಹಿಂದಿ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು.
ಸದ್ಯ ನಿಶ್ಚಿತಾರ್ಥದ ಫೋಟೊಗಳನ್ನು ನೋಡಿದ ಅಭಿಮಾನಿಗಳು, ಬಿಗ್‌ಬಾಸ್ 10ರ ಸಹ ಸ್ಪರ್ಧಿಗಳು ನಿತಿಭಾ ಕೌಲ್ ಅವರಿಗೆ ಶುಭಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.