ಬೆಂಗಳೂರು: ಡ್ರಗ್ಸ್ ಪ್ರಕರಣವೂ ಸೇರಿದಂತೆ,ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ ಹಿನ್ನೆಲೆಯುಳ್ಳ ಸಂಬರಗಿ, ಟೆಲಿಕಾಂ ಕ್ಷೇತ್ರ, ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ವಂತ ಉದ್ಯಮ ಆರಂಭಿಸಿರುವ ಪ್ರಶಾಂತ್ ಸಂಬರಗಿ, ಈ ಬಾರಿಯ ಬಿಗ್ಬಾಸ್ ನ ಹದಿನಾಲ್ಕನೇ ಸ್ಪರ್ಧಿ.
ಇತ್ತೀಚೆಗೆ ಡ್ರಗ್ಸ್ ಮಾಫಿಯಾ ವಿರುದ್ಧ ದನಿ ಎತ್ತುವ ಜತೆಗೆ, ಅದೇ ವಿಷಯಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.
‘ವ್ಯಕ್ತಿತ್ವಗಳ ಪರಸ್ಪರ ಪರಿಚಯಕ್ಕಾಗಿ ಬಿಗ್ಬಾಸ್ಗೆ ಬಂದಿದ್ದೇನೆ‘ ಎಂದು ಪ್ರಶಾಂತ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.