ADVERTISEMENT

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ಪುಷ್ಪ ದಿ ರೈಸ್‌'!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 9:28 IST
Last Updated 24 ಮಾರ್ಚ್ 2022, 9:28 IST
'ಪುಷ್ಪ ದಿ ರೈಸ್‌' ಚಿತ್ರ
'ಪುಷ್ಪ ದಿ ರೈಸ್‌' ಚಿತ್ರ    

‘ಪುಷ್ಪ ದಿ; ರೈಸ್‌ ...’ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮಾರ್ಚ್‌ 27ರಂದು ಮಧ್ಯಾಹ್ನ 12ಕ್ಕೆ ಪ್ರಸಾರವಾಗಲಿದೆ.

ಚಿತ್ರದ ಕನ್ನಡ ಅವತರಣಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ. ಜೊತೆಗೆ ಚಿತ್ರದ ಮೇಕಿಂಗ್‌, ಒಳಹೊರಗಿನ ಸ್ವಾರಸ್ಯಗಳು ಕೂಡಾ ಪ್ರಸಾರವಾಗಲಿವೆ ಎಂದು ವಾಹಿನಿ ಹೇಳಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ಅಭಿನಯಿಸಿದ ಚಿತ್ರ ತೆಲುಗಿನಲ್ಲಿ ಭರ್ಜರಿ ಗಳಿಕೆಯ ದಾಖಲೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.