ಚಿತ್ರ: colorskannadaofficial
ಕಲರ್ಸ್ ಕನ್ನಡ ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಅದರಲ್ಲಿ ಪಕ್ಕಾ ಕಾಮಿಡಿ ಅಡುಗೆ ಶೋ 'ಕ್ವಾಟ್ಲೆ ಕಿಚನ್’ ಕೂಡ ಒಂದಾಗಿದೆ. ಇದೇ ಶನಿವಾರ ‘ಕ್ವಾಟ್ಲೆ ಕಿಚನ್' ಗ್ರ್ಯಾಂಡ್ ಫಿನಾಲೆ ಇದ್ದು, ಸೆ. 27ರ ಸಂಜೆ 6ರಿಂದ ರಾತ್ರಿ 10ರವರೆಗೆ ಕುತೂಹಲಭರಿತ ಕುಕ್ಕಿಂಗ್ ಶೋನ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ.
ಚಿತ್ರ: colorskannadaofficial
ಅಡುಗೆ ಶೋ 'ಕ್ವಾಟ್ಲೆ ಕಿಚನ್' ನ ಈ ಸಂಚಿಕೆಯಲ್ಲಿ ‘ಸು ಫ್ರಮ್ ಸೋ‘ ಸಿನಿಮಾದ ನಟರಾದ ರಾಜ್ ಬಿ ಶೆಟ್ಟಿ, ರವಿಯಣ್ಣ, ಜೆಪಿ ತೂಮಿನಾಡ್ ಅತಿಥಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ. 6 ಮಂದಿ ಫೈನಲಿಸ್ಟ್‌ಗಳಲ್ಲಿ ಎರಡು ಸುತ್ತಿನ ಮಹಾ ಪೈಪೋಟಿ ನಡೆಯಲಿದೆ. ಈ ಮೂಲಕ ಕೊನೆಯಲ್ಲಿ ಒಬ್ಬರನ್ನು ವಿಜೇತರಾಗಿ ಘೋಷಿಸಲಿದ್ದಾರೆ.
ಚಿತ್ರ: colorskannadaofficial
ಬಾಣಸಿಗರಾಗಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ಕಾವ್ಯ ಗೌಡ, ಶರ್ಮಿತ ಗೌಡ, ರಾಘವೇಂದ್ರ ಫೈನಲಿಸ್ಟ್ ಗಳಾಗಿದ್ದಾರೆ. ಈ 6 ಮಂದಿಯಲ್ಲಿ ವಿನ್ನರ್ ಯಾರು, ಟ್ರೋಫಿ ಮತ್ತು ಐದು ಲಕ್ಷ ಗೆಲುವ ಅದೃಷ್ಟಶಾಲಿ ಯಾರಾಗಲಿದ್ದಾರೆ ಎಂಬುವುದು ತಿಳಿಯಲಿದೆ.
ಇನ್ನು, ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟಿವಿಯ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಚೆಫ್ ಕೌಶಿಕ್ ಇರಲಿದ್ದಾರೆ. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ನಡೆಸಿಕೊಡಲಿದ್ದಾರೆ.
ಚಿತ್ರ: colorskannadaofficial
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.