ADVERTISEMENT

ರಾಮಾಚಾರಿ ಧಾರಾವಾಹಿಯ ಕೊನೆ ದಿನದ ಶೂಟಿಂಗ್: ಮೌನ ಗುಡ್ಡೆಮನೆ ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2025, 6:01 IST
Last Updated 26 ಸೆಪ್ಟೆಂಬರ್ 2025, 6:01 IST
<div class="paragraphs"><p>ನಟಿ ಮೌನ ಗುಡ್ಡೆಮನೆ ಹಾಗೂ ನಟ  ಋತ್ವಿಕ್ ಕೃಪಾಕರ್.</p></div>

ನಟಿ ಮೌನ ಗುಡ್ಡೆಮನೆ ಹಾಗೂ ನಟ ಋತ್ವಿಕ್ ಕೃಪಾಕರ್.

   

ಚಿತ್ರ: mouna_guddemane

‌ಕನ್ನಡ ಕಿರುತೆರೆಯಲ್ಲಿ ಚಾರು ಅಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ.

ADVERTISEMENT

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಮೌನ ಗುಡ್ಡೆಮನೆ ಹಾಗೂ ನಟ ಋತ್ವಿಕ್ ಕೃಪಾಕರ್ ನಟಿಸಿದ್ದಾರೆ.

ನಟಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ನಟಿಸಿದರೆ, ನಟ ಋತ್ವಿಕ್ ಕೃಪಾಕರ್ ರಾಮಾಚಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು, ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭವಾಗುವ ಹೊತ್ತಲ್ಲೇ ರಾಮಾಚಾರಿ ಧಾರಾವಾಹಿ ಅಂತ್ಯ ಕಂಡಿದೆ.

ರಾಮಾಚಾರಿ ಧಾರಾವಾಹಿ ಕೊನೆಯ ದಿನದ ಚಿತ್ರೀಕರಣದ ಚಿತ್ರಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ತುಂಬು ಗರ್ಭಿಣಿಯಾಗಿದ್ದ ಚಾರುಗೆ ಕುಟುಂಬಸ್ಥರು ಸೇರಿಕೊಂಡು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

ಈ ಸುಂದರ ಕ್ಷಣಗಳ ಬಗ್ಗೆ ನಟಿ ಮೌನ ಗುಡ್ಡೆಮನೆ,  'ಪ್ರತಿಯೊಂದು ಪಾತ್ರವೂ ಒಂದು ಗುರುತನ್ನು ನೀಡುತ್ತದೆ. ಆದರೆ ಈ ಪಾತ್ರವು ನನಗೆ ತೃಪ್ತಿಯನ್ನು ನೀಡಿದೆ. ಎಲ್ಲಾ ಖ್ಯಾತ ನಟ, ನಟಿಯರ ಅಭಿನಯವು ನನಗೆ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದ ಮೌನ ಗುಡ್ಡೆಮನೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.