ADVERTISEMENT

ಬಿಗ್‌ಬಾಸ್‌ನಿಂದ ಹೊರಬಂದ ರಾಶಿಕಾಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 7:32 IST
Last Updated 13 ಜನವರಿ 2026, 7:32 IST
<div class="paragraphs"><p>ರಾಶಿಕಾ ಶೆಟ್ಟಿ</p></div>

ರಾಶಿಕಾ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಂ

ಇನ್ನೇನು ಫಿನಾಲೆಗೆ ಕಾಲಿಡುವ ಹೊತ್ತಲ್ಲೇ ಕಳೆದ ವಾರ (ಭಾನುವಾರ) ರಾಶಿಕಾ ಶೆಟ್ಟಿ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಟಾಸ್ಕ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿರುವ ರಾಶಿಕಾ ಶೆಟ್ಟಿಗೆ ಕುಟುಂಬಸ್ಥರು, ಸ್ನೇಹಿತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ADVERTISEMENT

ಬಿಗ್‌ಬಾಸ್‌ ಫಿನಾಲೆಗೂ ಮೊದಲೇ ರಾಶಿಕಾ ಶೆಟ್ಟಿ ಹೊರ ನಡೆದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಅದ್ಭುತವಾಗಿ ಟಾಸ್ಕ್ ಆಡುತ್ತಿದ್ದರು. ಯಾವುದೇ ಟಾಸ್ಕ್‌ ಕೊಟ್ಟರು ತಮ್ಮ ಶ್ರಮ ಹಾಕಿ ಆಡುತ್ತಿದ್ದರು. 16 ವಾರಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದ ರಾಶಿಕಾ ಅವರು ಮೊದಲ ಮಹಿಳಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಗ್‌ಬಾಸ್‌ ಮನೆಗೆ ವಿದಾಯ ಹೇಳಿ ಹೊರ ಬಂದಿದ್ದಾರೆ.

ಬಿಗ್‌ಬಾಸ್‌ ಶೋಗೆ ವಿದಾಯ ಹೇಳಿ ಬೇಸರದಿಂದ ಹೊರಬಂದಿದ್ದ ರಾಶಿಕಾಗೆ ಕುಟುಂಬಸ್ಥರು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ್ದಾರೆ. ಕುಟುಂಬದವರು ರಾಶಿಕಾಗೋಸ್ಕರ ವಿಶೇಷವಾದ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಟಾಸ್ಕ್‌ ಕ್ವೀನ್‌ಗೆ ಸ್ವಾಗತ ಎಂದು ಕೇಕ್‌ ಮೇಲೆ ಬರೆಸಿ ಕಟ್‌ ಮಾಡಿಸಿದ್ದಾರೆ. ಜೊತೆಗೆ ಆ ಸುಂದರ ಕ್ಷಣವನ್ನು ರಾಶಿಕಾ ಸಂಭ್ರಮಿಸಿದರು. ಅದೇ ವಿಡಿಯೊವನ್ನು ರಾಶಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ‘ನನ್ನ ಬಿಗ್ ಬಾಸ್ ಜರ್ನಿಯಲ್ಲಿ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಎಂದಿಗೂ ನಿಮ್ಮವಳೇ.. ನಿಮ್ಮ ರಾಶಿಕಾ ಶೆಟ್ಟಿ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.