ADVERTISEMENT

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಆಚೆಬಂದ ಮಾಯಾ: ನಟಿ ರುಹಾನಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 11:21 IST
Last Updated 24 ಅಕ್ಟೋಬರ್ 2025, 11:21 IST
<div class="paragraphs"><p>ನಟಿ ರುಹಾನಿ</p></div>

ನಟಿ ರುಹಾನಿ

   

ಚಿತ್ರ: ಇನ್‌ಸ್ಟಾಗ್ರಾಮ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಮಾಯಾ ಪಾತ್ರದಲ್ಲಿ ನಟಿಸುತ್ತಿದ್ದ ರುಹಾನಿ ಶೆಟ್ಟಿ ಹೊರ ಬಂದಿದ್ದಾರೆ. ನಾ ನಿನ್ನ ಬಿಡಲಾರೆ ಧಾರಾವಾಹಿ ಸಂಚಿಕೆಗಳು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿತ್ತು.

ADVERTISEMENT

ಆದರೆ, ಈಗ ದಿಢೀರನೇ ಧಾರಾವಾಹಿಯಿಂದ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಆಚೆ ಬಂದಿದ್ದು, ಆ ಪಾತ್ರಕ್ಕೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಖ್ಯಾತಿಯ ಕೋಳಿ ರಮ್ಯಾ ಬಂದಿದ್ದಾರೆ. ಇನ್ನು, ನಟಿ ರುಹಾನಿ ಶೆಟ್ಟಿ ಧಾರಾವಾಹಿಯಿಂದ ಆಚೆ ಬರುತ್ತಿದ್ದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಗಳ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ.

ನಟಿ ರುಹಾನಿ

ಹೀಗಾಗಿ ನಟಿ ರುಹಾನಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ, ‘ಪ್ರತಿಯೊಬ್ಬರ ಕಾಮೆಂಟ್ ಮತ್ತು ಸಂದೇಶಗಳನ್ನು ನೋಡುತ್ತಿದ್ದೇನೆ. ನೀವು ನನ್ನ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಎಂದೆಂದಿಗೂ ಧನ್ಯವಾದಗಳು. ಅಬ್ಬರದೊಂದಿಗೆ ಮತ್ತೆ ಪರದೆಯ ಮೇಲೆ ಬರುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಸಂಚಿಕೆಯಲ್ಲಿ ಮಾಯಾ, ಶರತ್‌ ಜೊತೆಗೆ ಮದುವೆ ಆಗಲೇಬೇಕೆಂದು ಪಣ ತೊಟ್ಟಿದ್ದಳು. ಆದರೆ ಕೊನೆಯ ಕ್ಷಣದಲ್ಲಿ ಧಾರಾವಾಹಿ ದೊಡ್ಡ ತಿರುವು ಪಡೆದುಕೊಂಡಿತ್ತು. ಮಾಯಾಗೆ ಕಟ್ಟಬೇಕಿದ್ದ ತಾಳಿಯನ್ನು ಶರತ್ ದುರ್ಗಾಗೆ ಕಟ್ಟಿಬಿಡುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.