ಚಿತ್ರ ಕೃಪೆ: sanjjanaagalrani
ಕನ್ನಡದ ಬಿಗ್‌ಬಾಸ್‌ನ 12ನೇ ಆವೃತ್ತಿ ಸೆ.28ಕ್ಕೆ ಆರಂಭವಾಗುತ್ತಿದೆ. ಹೀಗಾಗಿ ಈ ಬಾರಿಯ ಆವೃತ್ತಿಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಪ್ರವೇಶ ಪಡೆಯಲಿದ್ದಾರೆ ಎಂದು ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಇದರ ಮಧ್ಯೆ ಅಚ್ಚರಿ ಎಂಬಂತೆ ತೆಲುಗು ಬಿಗ್‌ಬಾಸ್ 9ನೇ ಆವೃತ್ತಿಗೆ ಬಹುಭಾಷಾ ನಟಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟಿದ್ದಾರೆ.
ತೆಲುಗು ಬಿಗ್‌ಬಾಸ್‌ನ 9ನೇ ಆವೃತ್ತಿಯು ಸೆ. 5ರಿಂದ ಆರಂಭವಾಗಿದೆ. 9ನೇ ಆವೃತ್ತಿಯ ಬಿಗ್‌ಬಾಸ್‌ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿದ್ದಾರೆ ಎಂಬುದು ಬಹಿರಂಗವಾಗಿದೆ. ವಿಶೇಷ ಏನೆಂದರೆ ಈ ಬಾರಿಯ ತೆಲುಗು ಬಿಗ್‌ಬಾಸ್‌ಗೆ ಬಹುಭಾಷಾ ನಟಿ ಸಂಜನಾ ಗಲ್ರಾನಿ ಪ್ರವೇಶಿಸಿದ್ದಾರೆ.
ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಸಂಜನಾ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡದ ಗಂಡ ಹೆಂಡತಿ ಸಿನಿಮಾ ಮೂಲಕ ಖ್ಯಾತಿ ಪಡೆದ ಸಂಜನಾ, ಐದು ವರ್ಷಗಳ ಹಿಂದೆ (2020ರ ಸೆ. 8) ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಜೈಲು ಸೇರಿದ್ದರು.
ಮೂರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇದಾದ ಬಳಿಕ ನಟಿ ಸಂಜನಾ ಗಲ್ರಾನಿ ಲಾಕ್‌ಡೌನ್ ಸಮಯದಲ್ಲಿ ವೈದ್ಯರಾದ ಅಜೀಜ್ ಪಾಷಾ ಅವರ ಜೊತೆಗೆ ಮದುವೆಯಾದರು. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕಳೆದ ಮೇನಲ್ಲಿ ನಟಿ ತಮ್ಮ 2ನೇ ಪುತ್ರನಿಗೆ ಜನ್ಮ ನೀಡಿದ್ದು, ಮಗುವನ್ನು ಬಿಟ್ಟು ಈಗ ಬಿಗ್‌ಬಾಸ್ ಮನೆ ಸೇರಿದ್ದಾರೆ.
ಈ ಹಿಂದೆಯೂ ಸಂಜನಾ ಗಲ್ರಾನಿ ಕನ್ನಡ ಬಿಗ್ ಬಾಸ್ 1ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ್ದರು. ಆಗ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ‘ಬಿಗ್‌ಬಾಸ್ ಮನೆಯಲ್ಲಿ ಇರುವುದು ಕಷ್ಟ‘ ಎಂದು ಕಣ್ಣಿರಿಟ್ಟಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಅವಕಾಶ ನಟಿ ಸಂಜನಾ ಅವರಿಗೆ ಸಿಕ್ಕಿದೆ. ಅಲ್ಲದೇ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಈ ವಿಡಿಯೊವನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಒಟ್ಟು 15 ಸ್ಪರ್ಧಿಗಳು ಈ ಬಾರಿಯ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರಲ್ಲಿ ಇಬ್ಬರು ಕನ್ನಡದ ನಟಿಯರು ಬಂದಿದ್ದಾರೆ. ಸಂಜನಾ ಗಲ್ರಾನಿ ಒಬ್ಬರಾದರೆ, ಮತ್ತೊಬ್ಬರು 6-5=3 ಸಿನಿಮಾದಲ್ಲಿ ನಾಯಕಿಯಾಗಿದ್ದ ತನುಜಾ ಗೌಡ. ಇದಾದ ಬಳಿಕ ನಟಿ ತನುಜಾ ಗೌಡ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ತನುಜಾ ಜನಪ್ರಿಯತೆ ಪಡೆದುಕೊಂಡರು.
ತೆಲುಗು ಬಿಗ್‌ಬಾಸ್‌ನ 9ನೇ ಆವೃತ್ತಿಯಲ್ಲಿ ಪ್ರವೇಶ ಪಡೆದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ...
ತನುಜಾ ಪುಟ್ಟಸ್ವಾಮಿ
ಸಂಜನಾ ಗಲ್ರಾಣಿ
ಫ್ಲೋರಾ ಸೈನಿ
ಕಲ್ಯಾಣ್ ಪದಲ
ಜಬರ್‌ದಸ್ತ್ ಇಮ್ಯಾನ್ಯುಯೆಲ್
ಶಾಸ್ತ್ರಿ ವರ್ಮ
ಹರಿತಾ ಹರೀಶ್
ಭರಣಿ ಶಂಕರ್
ರಿತು ಚೌಧರಿ
ಡೆಮನ್ ಪವನ್
ಶ್ರೀಜಾ ದಮ್ಮು
ರಾಮು ರಾಥೋಡ್
ಸುಮನ್ ಶೆಟ್ಟಿ
ಡಾ ಪ್ರಿಯಾ ಶೆಟ್ಟಿ
ಮನೀಶ್ ಮರ್ಯಾದಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.