
ಜಾಹ್ನವಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ 65ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಭಾನುವಾರದ ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್‌ಬಾಸ್‌ನಿಂದ ಆಚೆಬಂದ ಜಾಹ್ನವಿ ಅವರನ್ನು ಕುಟುಂಬದ ಸದಸ್ಯರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಬರೋಬ್ಬರಿ 63 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಜಾಹ್ನವಿ ಅವರು ಅಳುತ್ತಲೇ ಮುಖ್ಯದ್ವಾರದ ಮೂಲಕ ಆಚೆ ಬಂದು ಕಿಚ್ಚ ಸುದೀಪ್ ಅವರನ್ನ ಭೇಟಿಯಾಗಿದ್ದರು. ಈಗ ಬಿಗ್‌ಬಾಸ್‌ನಿಂದ ಮರಳಿ ತಮ್ಮ ಮನೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು ಮನೆಗೆ ಸ್ವಾಗತಿಸಿದ ವಿಡಿಯೊವನ್ನು ಜಾಹ್ನವಿ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆ ವಿಡಿಯೊದಲ್ಲಿ ಮರಳಿ ಮನೆಗೆ ಬಂದ ಜಾಹ್ನವಿ ಅವರನ್ನು ಆರತಿ ಎತ್ತಿ ಬರಮಾಡಿಕೊಂಡಿದ್ದಾರೆ. ಬಳಿಕ ಕೇಕ್ ಕಟ್ ಮಾಡುವ ಮೂಲಕ ಅವರ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ. ಆ ವಿಡಿಯೊ ಜೊತೆಗೆ ‘ಇದ್ದಷ್ಟು ದಿನ ಪ್ರಬಲವಾಗಿ ಆಡಿ, ಎಲ್ಲಾ ಏಳು-ಬೀಳುಗಳನ್ನು ದಾಟಿ, ನಗು-ನಗುತ್ತಲೇ ಮರಳಿ ತನ್ನ ಗೂಡಿಗೆ ಸೇರಿದ ಜಾನುಗೆ ಸಿಕ್ಕಿತು ಮನೆಯವರಿಂದ ಅಕ್ಕರೆಯ ಸ್ವಾಗತ’ ಎಂದು ಬರೆದಿಕೊಂಡಿದ್ದಾರೆ.
ಸದ್ಯ ಈಗ ಬಿಗ್‌ಬಾಸ್ ಮನೆಯಲ್ಲಿ 14 ಮಂದಿ ಉಳಿದುಕೊಂಡಿದ್ದಾರೆ. ಈ 14ರಲ್ಲಿ ಮುಂದಿನ ವಾರ ಮತ್ತೊಬ್ಬರು ಆಚೆ ಬರಲಿದ್ದಾರೆ. ಅವರು ಯಾರೆಂದು ಮತ್ತೆ ಭಾನುವಾರದ ಸಂಚಿಕೆಯಲ್ಲಿ ಅಧಿಕೃತವಾಗಿ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.