ಕಳೆದ ಮೂರು ದಶಕಗಳಿಂದ ಹಲವು ಭಾಷೆಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿರುವ, ದೇಶದ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ZEE ಎಂಟರ್‌ಟೇನ್ಮೆಂಟ್ ಎಂಟರ್‌ಪ್ರೈಸಸ್ ಲಿ.(ZEEL) ಹೊಸ ಹೆಜ್ಜೆಯೊಂದನ್ನು ಇರಿಸಿದೆ.
ಕರ್ನಾಟಕದಲ್ಲಿ ಈ ಸಂಸ್ಥೆಯ Z ಕನ್ನಡ ವಾಹಿನಿ ಮನೆಮಾತಾಗಿದೆ. Z ಕನ್ನಡದ ಯಶಸ್ಸಿನ ಬಳಿಕ ತನ್ನ ಮಹತ್ವಾಕಾಂಕ್ಷೆಯ ‘Z ಪವರ್’ ಚಾನಲ್ ಆರಂಭಿಸುವ ಮೂಲಕ ಮನರಂಜನೆಯ ಹೊಸ ಪರ್ವಕ್ಕೆ ನಾಂದಿ ಹಾಡಲಿದೆ. ‘Z ಪವರ್’ ಇದೇ ಆ.23ರಂದು ಪ್ರಾರಂಭವಾಗಲಿದೆ.
ಹೊಸ ಯೋಚನೆ, ಹೊಸ ಭಾವನೆ ಹಾಗೂ ಹೊಸ ಬಗೆಯ ಮನರಂಜನೆ ನೀಡಲು ಸಜ್ಜಾಗಿರುವ ‘Z ಪವರ್’ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ. ‘ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ ಮತ್ತು ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ. ಪ್ರಬಲ ಕಥಾನಾಯಕಿಯರು ಮತ್ತು ಕಥಾನಾಯಕರಿರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಚಲನಚಿತ್ರಗಳು, ಹಬ್ಬದ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ‘Z ಪವರ್’ ಆಧುನಿಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಲಿದೆ’ ಎಂದಿದೆ ಸಂಸ್ಥೆ.
‘Z ಪವರ್’ ಪ್ರತಿ ಪೀಳಿಗೆಯನ್ನೂ ಆಕರ್ಷಿಸುತ್ತದೆ. ಮಹಿಳಾ ಪ್ರಧಾನ ಕಥೆಗಳು ಇದ್ದರೂ ಯುವಕರು ಮತ್ತು ಪುರುಷರ ಭಾವನೆಗಳಿಗೂ ಒತ್ತುಕೊಟ್ಟಿರುವುದರಿಂದ ಎಲ್ಲಾ ಪೀಳಿಗೆಯವರನ್ನೂ ತನ್ನತ್ತ ಸೆಳೆಯುವಲ್ಲಿ ‘Z ಪವರ್’ ಯಶಸ್ವೀ ಆಗಲಿದೆ. ಪ್ರತಿಯೊಂದು ಧಾರಾವಾಹಿಯೂ ತನ್ನ ವಿಭಿನ್ನವಾದ ಕಥಾಹಂದರ ಹಾಗೂ ಸಂಭಾಷಣೆಯಿಂದ ಮೊದಲ ದಿನದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ’ ಎಂದಿದೆ ZEEL.
ಈ ವಾಹಿನಿಯಲ್ಲಿ ನಾಲ್ಕು ಧಾರಾವಾಹಿಗಳಾದ ‘ರಾಜಕುಮಾರಿ’, ‘ಶುಭಸ್ಯ ಶೀಘ್ರಂ’, ‘ಜೋಡಿ ಹಕ್ಕಿ’ ಮತ್ತು ‘ಗೌರಿ’ ಹಾಗೂ ಒಂದು ರಿಯಾಲಿಟಿ ಶೋ- ‘ಹಳ್ಳಿ ಪವರ್’ ಇರಲಿವೆ. ಜೊತೆಗೆ ಭಕ್ತಿ ಕಾರ್ಯಕ್ರಮ-ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ. ವಾಹಿನಿಯಲ್ಲಿ ಎಲ್ಲಾ ವಯಸ್ಸಿನ ಗುಂಪುಗಳನ್ನು ಸೆಳೆಯುವ ಕಥೆಗಳಿರಲಿದ್ದು ಕುಟುಂಬದವರು ಒಟ್ಟಾಗಿ ಕುಳಿತು ನೋಡುತ್ತಾ ಕಳೆದುಹೋದ ಕೌಟುಂಬಿಕ ಕ್ಷಣಗಳನ್ನು ಮರುಕಳಿಸುವಂತೆ ಮಾಡುತ್ತದೆ ಎಂದಿದೆ ಸಂಸ್ಥೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25ರಿಂದ ಪ್ರಾರಂಭವಾಗಲಿದ್ದು, ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮ 23ರಿಂದ ಪ್ರಸಾರ ಆಗಲಿದೆ.
ಪ್ರತಿ ದಿನ ಬೆಳಗ್ಗೆ 7.30ರಿಂದ 9 ಗಂಟೆಯವರೆಗೆ ‘ಭವಿಷ್ಯ ದರ್ಶನ’ ನಡೆಯಲಿದ್ದು, ಇದನ್ನು ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಶರ್ಮ ನಡೆಸಿಕೊಡಲಿದ್ದಾರೆ.
‘ರಾಜಕುಮಾರಿ’ ಧಾರಾವಾಹಿ ನಗರ ಜೀವನಕ್ಕೆ ಹೊಂದಿಕೊಳ್ಳುವ ಧೈರ್ಯಶಾಲಿ ಹಳ್ಳಿ ಹುಡುಗಿಯ ಕಥೆಯನ್ನು ಹೊತ್ತು ಬರಲಿದೆ. ಹಳ್ಳಿ ಹುಡುಗಿ ಹೇಗೆ ತನ್ನ ಆಸೆ, ಕನಸಿನಂತೆ ಚಾಣಾಕ್ಷತನದಿಂದ ಯಶಸ್ವಿ ಮಹಿಳಾ ಉದ್ಯಮಿಯಾಗುತ್ತಾಳೆ ಎನ್ನುವ ಕಥೆ ಇದರಲ್ಲಿದ್ದು, ಇದು ಆ.25ರಿಂದ ಸಂಜೆ 7ಕ್ಕೆ ಪ್ರಸಾರ ಆಗಲಿದೆ.
‘ಗೌರಿ’ ಧಾರಾವಾಹಿ ಸಂಬಂಧಗಳನ್ನೇ ಸರ್ವಸ್ವ ಅಂದುಕೊಂಡಿರುವ ತಂಗಿ ಮತ್ತು ಸಂಬಂಧಕ್ಕೆ ಬೆಲೆಯೇ ಕೊಡದ ಅಕ್ಕನ ಕಥೆ. ಇದು ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಶಿಕ್ಷಣವೇ ಸರ್ವಸ್ವ ಎಂಬ ‘ಅಕ್ಷರಾ’ ಮತ್ತು ಹಣವೇ ಸರ್ವಸ್ವ ಎಂದು ನಂಬುವ ಗ್ರಾಮದ ಮುಖ್ಯಸ್ಥೆ ‘ಭುವನೇಶ್ವರಿ’ ನಡುವಿನ ಸೈದ್ಧಾಂತಿಕ ಘರ್ಷಣೆಯ ಬಗೆಗಿನ ಧಾರಾವಾಹಿಯೇ ‘ಜೋಡಿ ಹಕ್ಕಿ’. ಈ ಧಾರಾವಾಹಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ರಾತ್ರಿ 8:30ಕ್ಕೆ ಪ್ರಸಾರವಾಗುವ ‘ಶುಭಸ್ಯ ಶೀಘ್ರಂ’, ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮವಾದ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿಯ ಕುರಿತಾದ ಕೌಟುಂಬಿಕ ಧಾರಾವಾಹಿ.
ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಗೆ ಪ್ರಸಾರ ಆಗಲಿರುವ ‘ಹಳ್ಳಿ ಪವರ್’ ರಿಯಾಲಿಟಿ ಶೋವನ್ನು ಅಕುಲ್ ಬಾಲಾಜಿ ನಿರೂಪಣೆ ಮಾಡಲಿದ್ದು, ಇದರಲ್ಲಿ ಸಿಟಿ ಹುಡುಗಿಯರು ಹಳ್ಳಿ ಜೀವನವನ್ನು ಹೇಗೆ ನಡೆಸಲಿದ್ದಾರೆ ಹಾಗೂ ಅವರು ಎದುರಿಸುವ ಸವಾಲುಗಳು ಏನೆಂದು ತೋರಿಸಲಿದೆ.
ಈ ಮೂಲಕ ‘Z ಪವರ್’ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಕಾಲಿಡಲು ಕ್ಷಣಗಣನೆ ಶುರುವಾಗಿದ್ದು ಇದೇ 23 ರಂದು ಕರುನಾಡಿನ ಮನೆಮನಗಳಿಗೆ ಲಗ್ಗೆ ಇಡಲಿದೆ.
‘Z ಪವರ್’ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ನಮ್ಮ ಕಥೆಗಳು ಸಂಕ್ಷಿಪ್ತ ಮತ್ತು ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿವೆ. ‘Z ಪವರ್’ ಮೂಲಕ ಕರುನಾಡ ಜನರಿಗೆ ಹಿಂದೆದೂ ಕಾಣದ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ.–ರಾಘವೇಂದ್ರ ಹುಣಸೂರ್ ಚೀಫ್ ಕಂಟೆಂಟ್ ಆಫೀಸರ್ ZEEL
ಇದು ಕರ್ನಾಟಕದಲ್ಲಿನ ನಮ್ಮ ಪಯಣಕ್ಕೆ ಒಂದು ಮಹತ್ವದ ಮೈಲುಗಲ್ಲು. ಪ್ರೇಕ್ಷಕರ ಅಭಿರುಚಿಯನ್ನು ನಾವು ಅರ್ಥಮಾಡಿಕೊಂಡಿದ್ದು ಈ ವಾಹಿನಿಯ ಮೂಲಕ ಎಲ್ಲ ವಯಸ್ಕರಿಗೂ ತಲುಪುವಂತಹ ಕಥೆಗಳನ್ನು ನೀಡಲಿದ್ದೇವೆ.–ಸಿಜು ಪ್ರಭಾಕರನ್ ಸೌತ್ ಆ್ಯಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್ ZEEL
‘Z ಪವರ್’ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಾಂಟೆಂಟ್ ಇರಲಿದೆ. ಈ ವಾಹಿನಿಯಲ್ಲಿ ಬರಲಿರುವ 4 ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದರೂ ಅಲ್ಲಿ ಪುರುಷರು ಹಾಗೂ ಯುವಜನತೆಯ ಭಾವನೆಗಳಿಗೂ ಬೆಲೆ ಕೊಡಲಾಗಿದೆ. ಈ ವಾಹಿನಿಯಲ್ಲಿ ಕರುನಾಡಿನ ಸಂಸ್ಕೃತಿ ಶ್ರೀಮಂತ ಪರಂಪರೆಗೆ ಒತ್ತು ನೀಡಿದ್ದೇವೆ.–ಭಾಸ್ಕರ್ ಅಯ್ಯರ್ ಬಿಸಿನೆಸ್ ಹೆಡ್ ಜೀ಼ ಪವರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.