ಬೆಂಗಳೂರು: ಪ್ರಭಾವಶಾಲಿ ಮತ್ತು ಅರ್ಥಪೂರ್ಣ ಕಥೆಗಳನ್ನು ಬರೆಯಬಲ್ಲ ಯುವ ಕಥೆಗಾರರಿಗೆ ಝೀ ಕನ್ನಡ ವಾಹಿನಿ ಸುವರ್ಣಾವಕಾಶ ಕಲ್ಪಿಸುತ್ತಿದೆ. ಅದರೊಟ್ಟಿಗೆ, ಡ್ಯಾನ್ಸರ್‌ಗಳು ಹಾಗು ಹಾಸ್ಯ ಕಲಾವಿದರಿಗೂ ವೇದಿಕೆ ಕಲ್ಪಿಸಲು ಸಜ್ಜಾಗಿದೆ.
'ಝೀ ರೈಟರ್ಸ್ ರೂಮ್', 'ಡಾನ್ಸ್ ಕರ್ನಾಟಕ ಡಾನ್ಸ್' ಮತ್ತು 'ಕಾಮಿಡಿ ಖಿಲಾಡಿಗಳು' ಶೋಗಳಿಗೆ ಸೆಪ್ಟೆಂಬರ್ 7ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
'ಝೀ ರೈಟರ್ಸ್ ರೂಮ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಲಿಖಿತ ಪರೀಕ್ಷೆ ಇರಲಿದೆ. ಅದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಸುತ್ತಿಗೆ ಪ್ರವೇಶ ಸಿಗುತ್ತದೆ. ಅಲ್ಲಿ ಆಯ್ಕೆಯಾದವರಿಗೆ, ವೃತ್ತಿಪರರಿಂದ ಮಾರ್ಗದರ್ಶನ ದೊರೆಯಲಿದೆ. ಝೀ ವಾಹಿನಿಯ ಮುಂದಿನ ಯೋಜನೆಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.
ಆಡಿಷನ್ಸ್ ವಿವರ ಇಲ್ಲಿದೆ
'ಝೀ ರೈಟರ್ಸ್ ರೂಮ್'
ಸ್ಥಳ: ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್
#6, 10th ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು
ದಿನಾಂಕ: 7ನೇ ಸೆಪ್ಟೆಂಬರ್, 2025
ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 2
ದೂರವಾಣಿ ಸಂಖ್ಯೆ: 9900207711
'ಡಾನ್ಸ್ ಕರ್ನಾಟಕ ಡಾನ್ಸ್' ಮತ್ತು 'ಕಾಮಿಡಿ ಖಿಲಾಡಿಗಳು'
ಸ್ಥಳ: ಹೈಯರ್ ಸೆಕೆಂಡರಿ ಸ್ಕೂಲ್, ಆರ್.ವಿ. ರೋಡ್, ಬಸವನಗುಡಿ, ಬೆಂಗಳೂರು
ದಿನಾಂಕ: 7ನೇ ಸೆಪ್ಟೆಂಬರ್, 2025
ಸಮಯ: ಬೆಳಿಗ್ಗೆ 9 ರಿಂದ ಸಂಜೆ 6
ದೂರವಾಣಿ ಸಂಖ್ಯೆ: 9513134434
ಇನ್ನೇಕೆ ತಡ, ಭಾಗವಹಿಸಲು ಸಜ್ಜಾಗಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.