ADVERTISEMENT

ಝೀ ಬಳಗದಿಂದ ಯುವಜನರಿಗಾಗಿ ಹೊಸ ಕನ್ನಡ ಚಾನೆಲ್ - 'ಝೀ ಪವರ್'

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 13:36 IST
Last Updated 18 ಜುಲೈ 2025, 13:36 IST
   

ಬೆಂಗಳೂರು: ಎರಡು ಹೊಸ ಚಾನೆಲ್‌ಗಳನ್ನು ಆರಂಭಿಸುವುದಾಗಿ ಝೀ ಬಳಗ ತಿಳಿಸಿದೆ. 'Z What's Next' ಮೂಲಕ 'ಝೀ ಪವರ್' ಮತ್ತು 'ಝೀ ಸೋನಾರ್ ಬಾಂಗ್ಲಾ' ಎನ್ನುವ ಎರಡು ಚಾನೆಲ್‌ಗಳು ಶೀಘ್ರವೇ ಆರಂಭವಾಗಲಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಝೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಹೈಬ್ರಿಡ್ ಚಾನೆಲ್ ಆಗಿದೆ. ಆಗಸ್ಟ್‌ನಲ್ಲಿ ಈ ಚಾನೆಲ್‌ಗೆ ಅಧಿಕೃತ ಚಾಲನೆ ದೊರಕಲಿದೆ. ಆರಂಭದಲ್ಲಿ 5 ಧಾರಾವಾಹಿಗಳು, 1ದೈನಂದಿನ ರಿಯಾಲಿಟಿ ಶೋ, ಸಿನೆಮಾ ಪ್ರಸಾರ ನಡೆಯಲಿದೆ.

ಝೀ ಸಂಸ್ಥೆಯು 208 ಮಿಲಿಯನ್ ಮನೆಗಳ ಮೂಲಕ 854 ಮಿಲಿಯನ್ ವೀಕ್ಷಕರನ್ನು ತಲುಪಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.