
ನವದೆಹಲಿ: ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ನಿರ್ಮಿಸಿರುವ ‘ಹೋಮ್ಬೌಂಡ್’ ಹಿಂದಿ ಭಾಷಾ ಚಲನಚಿತ್ರವು ಈ ವರ್ಷದ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗ’ದಲ್ಲಿ ನಾಮ ನಿರ್ದೇಶನ ಪಡೆಯುವಲ್ಲಿ ವಿಫಲವಾಗಿದೆ.
ಲಾಸ್ ಏಂಜಲೀಸ್ನಲ್ಲಿ ಗುರುವಾರ ನಡೆದ 98ನೇ ಅಕಾಡೆಮಿ ಪ್ರಶಸ್ತಿಗಳ ನಾಮ ನಿರ್ದೇಶನಗಳನ್ನು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್’ ಪ್ರಕಟಿಸಿತು.
ಭಾರತದ ‘ಹೋಮ್ಬೌಂಡ್’ ಚಿತ್ರವು 15 ಚಿತ್ರಗಳ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ ಅಂತಿಮ ಐದರಲ್ಲಿ ಸ್ಥಾನ ಪಡೆಯುವಲ್ಲಿ ಅದು ವಿಫಲವಾಯಿತು.
ಪತ್ರಕರ್ತ ಬಶಾರತ್ ಪೀರ್ ಅವರ ‘ಟೇಕಿಂಗ್ ಅಮೃತ್ ಹೋಮ್’ ಎಂಬ ಶೀರ್ಷಿಕೆಯ ಲೇಖನದಿಂದ ಪ್ರೇರಿತವಾದ ಈ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಠ್ವಾ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಸ್ಲಿಂ ಮತ್ತು ದಲಿತ ವ್ಯಕ್ತಿಯ ನಡುವಿನ ಬಾಲ್ಯದ ಸ್ನೇಹದ ಕಥಾವಸ್ತುವಿನ ಸಿನಿಮಾ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.