ADVERTISEMENT

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ರಾಯಿಟರ್ಸ್
Published 8 ನವೆಂಬರ್ 2023, 10:10 IST
Last Updated 8 ನವೆಂಬರ್ 2023, 10:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜಿನೆವಾ: ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ. 

ಪೆಸಿಫಿಕ್ ಸಾಗರದ ಪೂರ್ವ ಹಾಗೂ ಕೇಂದ್ರ ಭಾಗದ ಮೇಲ್ಮೈನ ತಾಪಮಾನ ಏರಿಕೆಯಾಗುವುದರಿಂದ ಎಲ್‌ ನಿನೊ ಕಂಡುಬಂದಿದೆ. ಇದರಿಂದ ತಾಪಮಾನ ವಿಪರೀತ ಹೆಚ್ಚಳವಾಗಿ ಜಾಗತಿಕ ಮಟ್ಟದಲ್ಲಿ ಕಾಳ್ಗಿಚ್ಚು, ಚಂಡಮಾರುತ ಮತ್ತು ಬರದ ಪರಿಸ್ಥಿತಿ ಮುಂದುವರಿಯಲಿದೆ. ಈಗಾಗಲೇ ಇಂಥ ಘಟನೆಗಳು ಜಗತ್ತಿನ ವಿವಿಧ ಬಾಗಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಆಹಾರ ಮತ್ತು ಇಂಧನ ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಲಿದೆ

ADVERTISEMENT

ನೈಸರ್ಗಿಕವಾಗಿ ಸಂಭವಿಸುವ ಘಟನೆಗಳು ಉತ್ತರ ಗೋಳಾರ್ಧದಲ್ಲಿ ಮುಂದುವರಿಯಲಿದೆ. ಅಮೆರಿಕ ಸರ್ಕಾರದ ಹವಾಮಾನ ಇಲಾಖೆ ಹೇಳಿದಂತೆ ಶೇ 90ರಷ್ಟು ಮುನ್ಸೂಚನೆ ಇರಲಿದೆ. 2026ರಲ್ಲೂ ಇಂಥದ್ದೇ ಪರಿಸ್ಥಿತಿ ಇತ್ತು. ಪಳಿಯುಳಿಕೆ ಇಂಧನಗಳನ್ನು ಹೆಚ್ಚಾಗಿ ಸುಡುವುದೂ ಸಹ ಎಲ್‌ ನಿನೊ ಹಾಗೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.