ADVERTISEMENT

ಟೇಬಲ್‌ ಟಾಪ್‌ ರನ್‌ವೇ ಅಪಾಯಕ್ಕೆ ಆಹ್ವಾನವೇ?

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 22:58 IST
Last Updated 11 ಆಗಸ್ಟ್ 2020, 22:58 IST

ಕೋಯಿಕ್ಕೋಡ್‌ನಲ್ಲಿ ನಡೆದ ವಿಮಾನ ಅಪಘಾತಕ್ಕೆ ಆ ವಿಮಾನ ನಿಲ್ದಾಣದ ರನ್‌ವೇಯ ‘ಟೇಬಲ್‌ ಟಾಪ್‌’ ರಚನೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. 2010ರಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ 158 ಜನರು ಮೃತಪಟ್ಟಿದ್ದರು. ಮಂಗಳೂರು ವಿಮಾಣ ನಿಲ್ದಾಣವೂ ಟೇಬಲ್‌ ಟಾಪ್‌ ರನ್‌ವೇಯನ್ನು ಹೊಂದಿದೆ. ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿಯೂ ಇಂತಹುದೇ ರನ್‌ವೇ ಇದೆ. ಪರ್ವತ ಪ್ರದೇಶಗಳನ್ನು ಹೊಂದಿರುವ ದೇಶಗಳು ಮತ್ತು ದ್ವೀಪ ರಾಷ್ಟ್ರಗಳಲ್ಲಿ ಟೇಬಲ್‌ ಟಾಪ್‌ ರನ್‌ವೇ ಹೊಂದಿರುವ ಹಲವು ವಿಮಾನ ನಿಲ್ದಾಣಗಳಿವೆ. ಹವಾಮಾನವು ವಿಮಾನ ಇಳಿಸಲು ಪರಿಪೂರ್ಣ ಎನಿಸುವ ಹಾಗೆ ಇದ್ದರೂ ಇಂತಹ ರನ್‌ವೇಗಳಲ್ಲಿ ವಿಮಾನಗಳನ್ನು ಇಳಿಸುವುದು ಅತ್ಯಂತ ಕ್ಲಿಷ್ಟಕರ. ಇಂತಹ ರನ್‌ವೇಗಳಲ್ಲಿ ಅಪಾಯದ ಹಾದಿ ಸದಾ ತೆರೆದೇ ಇರುತ್ತದೆ ಎಂದು ವಾಯುಯಾನ ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT