ತಂಗಳನ್ನ ಮಸಾಲಾ ಮಜ್ಜಿಗೆ
ಬೇಕಾಗುವ ಸಾಮಗ್ರಿ: ತಂಗಳನ್ನ 1 ಕಪ್, ತಾಜಾ ಮಜ್ಜಿಗೆ 2 ಕಪ್, ಸಣ್ಣದಾಗಿ ಕತ್ತರಿಸಿದ ಪುದೀನಾ ಎಲೆ ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು,
ಮಾಡುವ ವಿಧಾನ : ತಂಗಳನ್ನವನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಮೆತ್ತಗೆ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಎರಡು ಗಂಟೆಗಳ ಕಾಲ ಪಕ್ಕಕ್ಕಿಡಿ. ನಂತರ ಕಡೆದ ಮಜ್ಜಿಗೆಯನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕದಡಿ, ಪುದಿನಾಸೊಪ್ಪನ್ನು ಉದುರಿಸಿ.
ರಾಗಿ ಸಿಹಿ ಮಜ್ಜಿಗೆ
ಬೇಕಾಗುವ ಸಾಮಗ್ರಿ: ರಾಗಿ ಹುರಿಹಿಟ್ಟು 1 ಚಮಚ, ತಾಜಾ ಮಜ್ಜಿಗೆ 1 ಲೋಟ, ಸಿಹಿಗೆ ತಕ್ಕಷ್ಟು ಬೆಲ್ಲ, ಚಿಟಿಕಿ ಏಲಕ್ಕಿ ಪುಡಿ, ಸಣ್ಣದಾಗಿ ತುಂಡರಿಸಿದ ಗೋಡಂಬಿ,ಬಾದಾಮಿ ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಹುರಿಹಿಟ್ಟನ್ನು ಸ್ವಲ್ಪ ಮಜ್ಜಿಗೆ ಸೇರಿಸಿ ಗಂಟಿಲ್ಲದAತೆ ಕಲೆಸಿ ನಂತರ ಉಳಿದ ಮಜ್ಜಿಗೆ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ರಾಗಿ ಮಸಾಲಾ ಮಜ್ಜಿಗೆ
ಬೇಕಾಗುವ ಸಾಮಗ್ರಿ: ರಾಗಿ ಹುರಿಹಿಟ್ಟು 1 ಚಮಚ, ತಾಜಾ ಮಜ್ಜಿಗೆ 1 ಲೋಟ,ಚಿಟಿಕೆ ಶುಂಠಿಪುಡಿ, ಚಿಟಿಕಿ ಜೀರಿಗೆ ಪುಡಿ,ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಮೊದಲಿಗೆ ಹುರಿಹಿಟ್ಟನ್ನು ಸ್ವಲ್ಪ ಮಜ್ಜಿಗೆ ಸೇರಿಸಿ ಗಂಟಿಲ್ಲದAತೆ ಕಲೆಸಿ ನಂತರ ಉಳಿದ ಮಜ್ಜಿಗೆ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ತಂಗಳನ್ನ ಸಿಹಿಮಜ್ಜಿಗೆ
ಬೇಕಾಗುವ ಸಾಮಗ್ರಿ: ತಂಗಳನ್ನ 1 ಕಪ್, ತಾಜಾ ಮಜ್ಜಿಗೆ 2 ಕಪ್, ಸಿಹಿಗೆ ತಕ್ಕಷ್ಟು ಸಕ್ಕರೆ, ಚಿಟಿಕಿ ಏಲಕ್ಕಿ ಪುಡಿ, ಸಣ್ಣದಾಗಿ ತುಂಡರಿಸಿದ ಗೋಡಂಬಿ,ಬಾದಾಮಿ ಸ್ವಲ್ಪ. ಮಾಡುವ ವಿಧಾನ: ತಂಗಳನ್ನವನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಮೆತ್ತಗೆ ಮಾಡಿ ಎರಡು ಗಂಟೆಗಳ ಕಾಲ ಪಕ್ಕಕ್ಕಿಡಿ. ನಂತರ ಸಕ್ಕರೆ, ಚಿಟಿಕಿ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಬಾದಾಮಿ,ಗೋಡಂಬಿ ತುಂಡುಗಳನ್ನು ಉದುರಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.