ADVERTISEMENT

ರಸಸ್ವಾದ: ಹಾಗಲದ ಖಾದ್ಯಗಳು

ಕೆ.ವಿ.ರಾಜಲಕ್ಷ್ಮಿ
Published 17 ನವೆಂಬರ್ 2023, 23:30 IST
Last Updated 17 ನವೆಂಬರ್ 2023, 23:30 IST
<div class="paragraphs"><p>ಹಾಗಲಕಾಯಿ ರಾಯತ</p></div>

ಹಾಗಲಕಾಯಿ ರಾಯತ

   
ತಿನ್ನಲು  ಕಹಿ, ಆರೋಗ್ಯಕ್ಕೆ ಸಿಹಿ ಎಂದೇ  ಹಾಗಲಕಾಯಿಯನ್ನು ಗುರುತಿಸುವುದು.  ಕೆಲವು ಪ್ರದೇಶಗಳಲ್ಲಿ ಪಿತೃಪಕ್ಷ ಕಾಲದಲ್ಲಿ ಹಾಗಲದಿಂದ ತಯಾರಾದ ಅಡುಗೆಗಳಿಗೆ  ವಿಶೇಷ ಮಾನ್ಯತೆ. ಎಳೆಯ ಹಾಗಲ ಕಾಯಿಯಲ್ಲಿ ಹೀಗೂ, ರುಚಿಯಾದ ಖಾದ್ಯಗಳನ್ನು  ದಿನನಿತ್ಯದ ಅಡುಗೆಯ ಭಾಗವಾಗಿಸಬಹುದು.  ಇದರ ರೆಸಿಪಿಯನ್ನು ಕೆ.ವಿ.ರಾಜಲಕ್ಷ್ಮಿ ನೀಡಿದ್ದಾರೆ. 

ಹಾಗಲಕಾಯಿ ರಾಯತ

ಬೇಕಾಗುವ  ಸಾಮಗ್ರಿ: ಸಣ್ಣಗೆ ಹೆಚ್ಚಿ  ಬೇಯಿಸಿದ ಹಾಗಲ ಕಾಯಿ  1/2 ಕಪ್, ಹಸಿಶುಂಠಿ ತುರಿ 1/2 ಚಮಚ, ತೆಂಗಿನ ತುರಿ 1 ಚಮಚ, ಮೊಸರು 1 ಕಪ್, 1/2ಚಮಚ  ಸಕ್ಕರೆ, ರುಚಿಗೆ ತಕ್ಕಷ್ಟುಉಪ್ಪು.

ಮಾಡುವ ವಿಧಾನ: ತೆಂಗಿನತುರಿ, ಶುಂಠಿ, ಸಕ್ಕರೆ, ಉಪ್ಪು ಸೇರಿಸಿ ಅರೆದು ಮೊಸರಿನೊಂದಿಗೆ  ಮಿಶ್ರಣ ಮಾಡಿಕೊಳ್ಳಿ. ನಂತರ  ಇದನ್ನು ಬೆಂದ ಹಾಗಲಕ್ಕೆ  ಸೇರಿಸಿ ಚೆನ್ನಾಗಿ ಕೈಯಾಡಿಸಿ, ಕೊತ್ತಂಬರಿ ಸೊಪ್ಪು  ಉದುರಿಸಿ,  ಜೀರಿಗೆ-ಇಂಗಿನ ಒಗ್ಗರಣೆ ಕೊಡಿ.  

ADVERTISEMENT

ಹಾಗಲದ ಪೋಹಾ

ಬೇಕಾಗುವ  ಸಾಮಗ್ರಿ: ಮೀಡಿಯಂ ಅವಲಕ್ಕಿ 2 ಕಪ್,ಸಣ್ಣಗೆ ಹೆಚ್ಚಿ  ಬೇಯಿಸಿದ ಹಾಗಲ ಕಾಯಿ  1/2 ಕಪ್,  ಹಸಿರುಮೆಣಸಿನಕಾಯಿ ಸೀಳು 8-10,ಕರಿಬೇವು  ಸ್ವಲ್ಪ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು.(ನಿಂಬೆರಸ 1/2 ಚಮಚ ಐಚ್ಚಿಕ )

ಮಾಡುವ ವಿಧಾನ: ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಬಸಿದುಕೊಳ್ಳಿ. ಬಾಣಲಿಯಲ್ಲಿ ಸಾಸಿವೆ ಸಿಡಿಸಿ, ಅರಿಶಿನ, ಹಸಿಮೆಣಸಿನಕಾಯಿ,ಬೇಯಿಸಿದ ಹಾಗಲ ಕಾಯಿ,ಕರಿಬೇವು ಹಾಕಿ ಬಾಡಿಸಿ,  ನಂತರ ಅವಲಕ್ಕಿ, ಉಪ್ಪು ಸೇರಿಸಿ  ಎರಡು ನಿಮಿಷ ಸಣ್ಣ ಉರಿಯಲ್ಲಿ ಕೈಯಾಡಿಸಿ, ಉರಿ ಆರಿಸಿ ನಿಂಬೆ ರಸ ಬೆರಸಿ ಮಿಶ್ರಣ ಮಾಡಿ.

 ಹಾಗಲ- ಬೇಳೆ ಪಲ್ಯ

ಬೇಕಾದ  ಸಾಮಗ್ರಿ: ಬೇಯಿಸಿದ  ಕಡಲೆಬೇಳೆ 1 ಕಪ್,ಬೇಯಿಸಿದ ಹಾಗಲ ಕಾಯಿ 1ಕಪ್,ತೆಂಗಿನ ತುರಿ 1/2 ಕಪ್, 3-4 ಒಣಮೆಣಸಿನಕಾಯಿ, ರುಚಿಗೆ ತಕ್ಕಷ್ಟು  ಉಪ್ಪು. 

ಮಾಡುವ ವಿಧಾನ:  ದಪ್ಪ ತಳದ ಬಾಣಲೆಗೆ ಸಾಸಿವೆ,ಉದ್ದಿನಬೇಳೆ, ಇಂಗು ಒಗ್ಗರಿಸಿ,ಮೆಣಸಿನಕಾಯಿ ಹುರಿದು, ಕಡಲೆಬೇಳೆ,ಹಾಗಲ ಕಾಯಿ, ತೆಂಗಿನ ತುರಿ ಮತ್ತು ಉಪ್ಪು ಸೇರಿಸಿ ಐದು ನಿಮಿಷ ಬಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.