ಎಐ ಚಿತ್ರ
ಮನುಷ್ಯ ಬದುಕಲು ಆಹಾರ ಅತಿ ಮುಖ್ಯ. ಆಹಾರ ದೇಹಕ್ಕೆ ಶಕ್ತಿಯ ಮೂಲವಾಗಿದೆ. ಜಗತ್ತಿನಲ್ಲಿ ಕೇವಲ ಹಸಿವಿನಿಂದ ಮಾತ್ರವಲ್ಲದೇ, ಆಪೌಷ್ಟಿಕ ಆಹಾರದ ಅಲಭ್ಯತೆಯಿಂದ ಲಕ್ಷಾಂತರ ಮಂದಿ ವಂಚಿತರಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ. ಆಹಾರದ ಮಹತ್ವವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ’ವಿಶ್ವ ಆಹಾರ ದಿನ’ವನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿಯ ಆಹಾರ ದಿನದ ಘೋಷ ವಾಕ್ಯ ಎನು? ಇದರ ಇತಿಹಾಸ ಹಾಗೂ ಉದ್ದೇಶಗಳೇನು? ಎಂಬ ಮಾಹಿತಿಯನ್ನು ತಿಳಿಯೋಣ.
‘ಒಂದು ತುತ್ತಿನ ಅನ್ನದ ಹಿಂದೆ ಸಾವಿರಾರು ಕೈಗಳ ಶ್ರಮ’ವಿರುತ್ತದೆ ಎಂಬ ಮಾತಿದೆ. ಇಂದು ಉತ್ಪಾದನೆಯಾದ ಆಹಾರದಲ್ಲಿ ಮೂರನೇ ಒಂದು ಭಾಗ ವ್ಯರ್ಥವಾಗುತ್ತಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ. ಜಗತ್ತಿಗೆ ಆಹಾರದ ಮಹತ್ವ ಹಾಗೂ ಅನಿವಾರ್ಯತೆಯನ್ನು ಮನದಟ್ಟು ಮಾಡುವ ಉದ್ದೇಶದಿಂದ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.
2025ರ ಆಹಾರ ದಿನದ ಘೋಷ ವಾಕ್ಯ:
‘ನೀರೇ ಬದುಕು, ನೀರೇ ಆಹಾರ, ಸರ್ವರ ಒಳಗೊಳ್ಳುವಿಕೆ’ (Water is Life, Water is Food. Leave no one behind)
ವಿಶ್ವ ಆಹಾರ ದಿನದ ಇತಿಹಾಸ:
2ನೇ ಮಹಾಯುದ್ದದ ವೇಳೆ ಪ್ರಪಂಚದಾದ್ಯಂತ ಹಸಿವು ಹಾಗೂ ಅಪೌಷ್ಟಿಕತೆಯ ವಿರುದ್ಧ ಹೋರಾಡಲು 1945ರಲ್ಲಿ ರೋಮ್‌ನಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯೊಂದು ಸ್ಥಾಪನೆಯಾಯಿತು. ನಂತರ 1981ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವನ್ನಾಗಿ ಷೋಷಣೆ ಮಾಡಲಾಯಿತು.
ವಿಶ್ವ ಆಹಾರ ದಿನದ ಆಚರಣೆಯ ಉದ್ದೇಶವೇನು?
ಹಸಿವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದೆ.
ಪೌಷ್ಟಿಕ ಆಹಾರದ ಪ್ರಾಮುಖ್ಯತೆ ಹಾಗೂ ಆಹಾರ ವ್ಯರ್ಥ ಎಷ್ಟು ಹಾನಿಕಾರಕ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಗುರಿಯನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.