
ವಾರಾಂತ್ಯದಲ್ಲಿ ಮಾಂಸಾಹಾರ ಊಟ ಸೇವಿಸಲು ಬಯಸುವವರಿಗೆ ಒಂದೇ ರೀತಿಯ ಚಿಕನ್ ಫ್ರೈ ತಿಂದು ಬೇಜಾರಾಗಿದ್ದರೆ ಆಂಧ್ರ ಸ್ಟೈಲ್‌ನಲ್ಲಿ ಚಿಕನ್ ಫ್ರೈ ತಯಾರಿಸಿ, ರೊಟ್ಟಿ, ಚಪಾತಿ ಜೊತೆ ಸೇವಿಸಬಹುದು.
ಟೊಮೊಟೊ– ಅರ್ಧ ಕಪ್
ಚಕ್ಕೆ, ಲವಂಗ, ಜೀರಿಗೆ, ಲವಂಗ – ಅಗತ್ಯಕ್ಕೆ ತಕ್ಕಷ್ಟು
ಈರುಳ್ಳಿ – 1ರಿಂದ2
ಚಿಕನ್ –ಅರ್ಧ ಕೆ.ಜಿ
ಅರಿಶಿಣ ಪುಡಿ– ಅರ್ಧ ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ
ಮೊಸರು –ಅರ್ಧ ಕಪ್
ಖಾರದ ಪುಡಿ–1ರಿಂದ 2 ಚಮಚ
ಕೊತ್ತಂಬರಿ ಸೊಪ್ಪು
ಉಪ್ಪು –ರುಚಿಗೆ ತಕ್ಕಷ್ಟು
ಧನಿಯಾ ಪುಡಿ–1ರಿಂದ2 ಚಮಚ
ಅಡುಗೆ ಎಣ್ಣೆ
ಹುಳಿ– ಅಗತ್ಯಕ್ಕೆ ತಕ್ಕಷ್ಟು
ಚಿಕನ್ ಚೆನ್ನಾಗಿ ತೊಳೆದುಕೊಳ್ಳಿ...
ಒಂದು ಬಾಣಲೆಗೆ 2ರಿಂದ 3 ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ, ಜೀರಿಗೆ, ಚಕ್ಕೆ,ಲವಂಗ,ಕತ್ತರಿಸಿಕೊಂಡ 1 ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಅರ್ಧ ಚಮಚ ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ತೊಳೆದ ಚಿಕನ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ 10 ರಿಂದ 15 ನಿಮಿಷ ಬೇಯಿಸಿಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿನಲ್ಲಿ ಫ್ರೈ ಮಾಡಿಕೊಂಡ ಈರುಳ್ಳಿ ಹಾಗೂ ಅರ್ಧ ಕಪ್ ಮೊಸರು ಸೇರಿಸಿ ರುಬ್ಬಿಕೊಳ್ಳಿ.
ನಂತರ ರುಬ್ಬಿಕೊಂಡ ಮೊಸರು, ಈರುಳ್ಳಿ ಮಿಶ್ರಣ, ಟೊಮೊಟೊ ಪೇಸ್ಟ್, ಖಾರದ ಪುಡಿ, ಧನಿಯಾ ಪುಡಿ, ಹುಳಿ ಸೇರಿಸಿ ಮಿಶ್ರಣ ಮಾಡಿ. 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ..
ಸವಿಯಲು ಸಿದ್ಧ ಆಂಧ್ರ ಸ್ಟೈಲ್ ಚಿಕನ್ ಫ್ರೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.