ADVERTISEMENT

ಸಾಂಬರ್, ಪಲ್ಯ ಮಾತ್ರವಲ್ಲ ಹೀಗೆ ತಯಾರಿಸಿ ಗರಿ–ಗರಿ ಬೆಂಡೆಕಾಯಿ ಚಿಪ್ಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 13:19 IST
Last Updated 15 ಡಿಸೆಂಬರ್ 2025, 13:19 IST
   

ಬೆಂಡೆಕಾಯಿಯಿಂದ ಸಾಂಬಾರ್, ಪಲ್ಯ ಮಾತ್ರವಲ್ಲದೆ ಅದರಿಂದ ಸ್ನ್ಯಾಕ್ಸ್ ಕೂಡ ತಯಾರಿಸಬಹುದು. ಕಾಫಿ ಜತೆ ಸವಿಯಲು  ಬೆಂಡೆಕಾಯಿಯ ಚಿಪ್ಸ್ ಕೂಡ ತಯಾರಿಸಬಹುದು. ಬಹು ಬೇಗನೆ ಬೆಂಡೆಕಾಯಿಯ ಚಿಪ್ಸ್ ತಯಾರಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಕತ್ತರಿಸಿಕೊಂಡ ಬೆಂಡೆಕಾಯಿ –1ರಿಂದ2  ಕಪ್
ಅಕ್ಕಿಹಿಟ್ಟು– ಕಾಲು ಕಪ್
ಅರಿಶಿನ ಪುಡಿ– ಅರ್ಧ ಚಮಚ
ಖಾರದ ಪುಡಿ–ಒಂದು ಚಮಚ
ಜೀರಿಗೆ ಪುಡಿ– ಅರ್ಧ ಚಮಚ
ಧನಿಯಾ ಪುಡಿ– ಒಂದು ಚಮಚ
ಕಡಲೆ ಹಿಟ್ಟು– 1ರಿಂದ 2 ಕಪ್
ಉಪ್ಪು– ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ

ಮಾಡುವ ವಿಧಾನ: ಬೆಂಡೆಕಾಯಿಯನ್ನು ತೊಳೆದು ಉದ್ದವಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು,ಅಕ್ಕಿಹಿಟ್ಟು, ಖಾರದಪುಡಿ, ಜೀರಿಗೆ, ಧನಿಯಾ ಪುಡಿ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಉಪ್ಪು ಹಾಗೂ ಕತ್ತರಿಸಿಕೊಂಡ ಬೆಂಡೆಕಾಯಿಯನ್ನು ಸೇರಿಸಿಕೊಳ್ಳಿ. 4–5 ಚಮಚ ನೀರು ಸೇರಿಸಿಕೊಳ್ಳಿ.

ಬೆಂಡೆಕಾಯಿ ಮಿಶ್ರಣವನ್ನು 10ರಿಂದ15 ನಿಮಿಷ ಮಸಾಲೆ ಹೀರಿಕೊಳ್ಳಲು ಬಿಡಿ. ಬಳಿಕ ಬೆಂಡೆಕಾಯಿ ಮಿಶ್ರಣವನ್ನು ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.