ADVERTISEMENT

Pulao Recipe: ಸಬ್ಬಸಿಗೆ ಸೊಪ್ಪಿನಲ್ಲಿ ಪಲ್ಯ, ಮಾತ್ರವಲ್ಲ..ಪಲಾವ್‌ ಮಾಡಬಹುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 13:22 IST
Last Updated 24 ಡಿಸೆಂಬರ್ 2025, 13:22 IST
   

ಸಬ್ಬಸಿಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶ ಇರುವುದರಿಂದ ಆರೋಗ್ಯಕ್ಕೆ ಉಪಯುಕ್ತ ಆಹಾರವಾಗಿದೆ. ಈ ಸೊಪ್ಪಿನಲ್ಲಿ ಅನೇಕ ಖಾದ್ಯಗಳನ್ನು ತಯಾರಿಸಬಹುದು. ನಾವಿಂದು ಈ ಸೊಪ್ಪಿನಿಂದ ಮಾಡಬಹುದಾದ ಪಲಾವ್ ರೆಸಿಪಿ ಬಗ್ಗೆ ತಿಳಿಯೋಣ

ಸಬ್ಬಸಿಗೆ ಸೊಪ್ಪಿನ ಪಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು
ಸಬ್ಬಸಿಗೆ ಸೊಪ್ಪು – 1 ಕಟ್
ಅಕ್ಕಿ– ಅಗತ್ಯಕ್ಕೆ ತಕ್ಕಷ್ಟು
ಚಕ್ಕೆ, ಲವಂಗ– ಅಗತ್ಯಕ್ಕೆ ತಕ್ಕಷ್ಟು
ಖಾರದ ಪುಡಿ– 2 ಚಮಚ
ಗರಂ ಮಸಾಲ- 2ರಿಂದ3 ಚಮಚ
ಕತ್ತರಿಸಿಕೊಂಡ ಈರುಳ್ಳಿ– 1
ಹಸಿರು  ಮೆಣಸಿನಕಾಯಿ– 4ರಿಂದ5
ನಿಂಬೆರಸ– 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ

ಮಾಡುವ ವಿಧಾನ

ಸಬ್ಬಸಿಗೆ ಸೊಪ್ಪನ್ನು ಕತ್ತರಿಸಿಕೊಂಡ ತೊಳೆದುಕೊಳ್ಳಿ
ಮೊದಲು  ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ 2–3 ಚಮಚ ಎಣ್ಣೆ ಹಾಕಿ ಕಾಯಿಸಿಕೊಳ್ಳಿ . ನಂತರ ಅದಕ್ಕೆ  ಕತ್ತರಿಸಿಕೊಂಡ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಗರಂ ಮಸಾಲ, ಖಾರದ ಪುಡಿ ಉಪ್ಪು ಹಾಗೂ ಕತ್ತರಿಸಿ ತೊಳೆದುಕೊಂಡ ಸಬ್ಬಸಿಗೆ ಸೊಪ್ಪು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ತೊಳೆದುಕೊಂಡ ಅಕ್ಕಿ ಹಾಗೂ 1 ಚಮಚ ನಿಂಬೆ ರಸ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.