ADVERTISEMENT

ನಳ ಪಾಕ | ರಾಕ್‌, ಫುಡ್ಜ್‌ ಚಾಕೊಲೆಟ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 20:00 IST
Last Updated 8 ಜುಲೈ 2022, 20:00 IST
ರಾಕ್‌ ಚಾಕೊಲೆಟ್‌
ರಾಕ್‌ ಚಾಕೊಲೆಟ್‌   

ರಾಕ್‌ ಚಾಕೊಲೆಟ್‌

ಡಾರ್ಕ್ ಹಾಗೂ ಮಿಲ್ಕ್‌ ಚಾಕೊಲೆಟ್‌ಗಳ ಜೊತೆಗೆ, ಒಂದಷ್ಟು ಒಣಹಣ್ಣುಗಳ ಚೂರಿನ ಜೊತೆಗೆ, ಜೇನುತುಪ್ಪ ಬೆರೆಸಿ ತಯಾರಿಸುವ ಚಾಕೊಲೆಟ್‌ ರಾಕ್‌ ಚಾಕೊಲೇಟ್‌.

ಬೇಕಾಗುವ ಸಾಮಗ್ರಿಗಳು: 250 ಗ್ರಾಂ ಡಾರ್ಕ್‌ ಚಾಕೊಲೆಟ್‌, 250 ಗ್ರಾಂ ಮಿಲ್ಕ್‌ ಚಾಕೊಲೆಟ್‌, 100 ಗ್ರಾಂ ಹುರಿದ ಗೋಡಂಬಿ (ಸಣ್ಣಗೆ ಹೆಚ್ಚಿದ ಚೂರುಗಳು), 100 ಗ್ರಾಂ ಹುರಿದ ಬಾದಾಮಿ (ಸಣ್ಣಗೆ ಹೆಚ್ಚಿದ ಚೂರುಗಳು), 100 ಗ್ರಾಂ ಕಪ್ಪುಒಣ ದ್ರಾಕ್ಷಿ, 100 ಗ್ರಾಂ ಅಂಜೂರ (ಸಣ್ಣಗೆ ಹೆಚ್ಚಿದ ಚೂರುಗಳು) 50 ಗ್ರಾಂ ಕೆಂಪು ಚೆರ್‍ರಿ, 50 ಗ್ರಾಂ ಎಪ್ರಿಕಾಟ್‌, 10 ಎಂಎಲ್‌ ಜೇನುತುಪ್ಪ.

ADVERTISEMENT

ತಯಾರಿಸುವ ವಿಧಾನ: ಮೊದಲಿಗೆ ಒಂದು ಬೌಲ್‌ನಲ್ಲಿ ಜೇನುತುಪ್ಪ ಹಾಕಿ ಅದರಲ್ಲಿ ಮೇಲೆ ತಿಳಿಸಿರುವ ಎಲ್ಲ ಒಣಹಣ್ಣುಗಳನ್ನು 10 ರಿಂದ 15 ನಿಮಿಷ ನೆನೆಸಿಡಿ. ಡಬಲ್‌ ಬೌಲರ್‌ನಲ್ಲಿ ಎರಡೂ ಬಗೆಯ ಚಾಕೊಲೆಟ್‌ಗಳನ್ನು ಕರಗಿಸಿ(ಮೆಲ್ಟ್‌ ಮಾಡಿಕೊಳ್ಳಿ). ಚಾಕೊಲೆಟ್‌ ಕರಗಿದ ನಂತರ ಅದಕ್ಕೆ ಜೇನುತುಪ್ಪದಲ್ಲಿ ನೆನೆಸಿದ ಒಣ ಹಣ್ಣುಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಬಟರ್ ಪೇಪರ್‌ ಮೇಲೆ ನಿಮಗೆ ಇಷ್ಟವಾದ ಆಕಾರದಲ್ಲಿ, ಹಾಕಿಡಬೇಕು. ಇದನ್ನು ಸ್ವಲ್ಪ ಹೊತ್ತು ಹಾಗೇ ಬಿಡಬೇಕು. ಈಗ ರಾಕ್‌ ಚಾಕೊಲೆಟ್‌ ಸಿದ್ಧ. ಈ ಚಾಕೊಲೆಟ್ ಅನ್ನು ಸ್ವಲ್ಪ ಹೊತ್ತು ಬಿಟ್ಟು ಗಾಳಿಯಾಡದಂತಹ ಡಬ್ಬದಲ್ಲಿ ಶೇಖರಿಸಿಡಿ.

ಚಾಕೊಲೆಟ್‌ ಫುಡ್ಜ್‌

ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಡಾರ್ಕ್‌ ಚಾಕೊಲೆಟ್‌, 500 ಗ್ರಾಂ ಮಿಲ್ಕ್‌ ಚಾಕೊಲೆಟ್‌, 400 ಗ್ರಾಂ ಮಿಲ್ಕ್‌ಮೇಡ್‌, 100 ಗ್ರಾಂ ಬೆಣ್ಣೆ, 200 ಗ್ರಾಂ ಅಂಜೂರ (ಸಣ್ಣಗೆ ಹೆಚ್ಚಿದ ಚೂರುಗಳು), ಸ್ವಲ್ಪ ಜೇನುತುಪ್ಪ.

ತಯಾರಿಸುವ ವಿಧಾನ: ಅಂಜೂರವನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಂದು ಗಂಟೆ ಬಿಡಬೇಕು. ನಂತರ ಡಬರ್‌ ಬೌಲರ್‌ನಲ್ಲಿ ಚಾಕೊಲೆಟ್‌ಗಳನ್ನು ಕರಗಿಸಿ(ಮೆಲ್ಟ್‌)ಕೊಳ್ಳಬೇಕು. ಇದಾದನಂತರ ಮಿಲ್ಕ್‌ಮೇಡ್‌ ಮತ್ತು ಬೆಣ್ಣೆಯನ್ನು ಹಾಕಿ ಮಿಶ್ರ ಮಾಡಿಕೊಳ್ಳಬೇಕು. ಈ ಮಿಶ್ರಣಕ್ಕೆ ಅಂಜೂರವನ್ನು ಸೇರಿಸಬೇಕು. ಇದನ್ನು ಒಂದು ಟ್ರೇ ಮೇಲೆ ಬಟರ್‌ ಪೇಪರ್‌ ಹಾಕಿ ಅದರ ಮೇಲೆ ಚಾಕೊಲೆಟ್‌ ಮಿಶ್ರಣವನ್ನು ಹಾಕಿ ಎರಡು ತಾಸು ಫ್ರಿಡ್ಜ್‌ನಲ್ಲಿ ಇಡಬೇಕು. ನಂತರ ಬೇಕಾದ ಆಕಾರದಲ್ಲಿ ಕಟ್‌ ಮಾಡಿಕೊಂಡರೆ ಚಾಕೊಲೆಟ್‌ ಫುಡ್ಜ್‌ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.