ADVERTISEMENT

ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 10:48 IST
Last Updated 2 ಫೆಬ್ರುವರಿ 2026, 10:48 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿ ಫೆಬ್ರುವರಿ 15ರಂದು ಬಂದಿದ್ದು, ಶಿವನನ್ನು ನಂಬುವ ಲಕ್ಷಾಂತರ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಮಾತ್ರವಲ್ಲ, ಈ ದಿನ ಅನೇಕರು ಉಪವಾಸ ಇರುವುದು ವಾಡಿಕೆ.

ಶಿವರಾತ್ರಿಯ ದಿನ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಂದಿನ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜೊತೆಗೆ ಅನೇಕರು ಶಿವರಾತ್ರಿಯ ದಿನದಂದು ಉಪವಾಸ ಇರುತ್ತಾರೆ. ಈ ವೇಲೆ ದೇಹಕ್ಕೆ ಹಗುರವೆನಿಸುವ ಹಾಗೂ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಕೆಲವು ಉಪಹಾರಗಳ ಪಟ್ಟಿ ಇಲ್ಲಿವೆ.

ADVERTISEMENT

ಸೇಬು ಹಣ್ಣಿನ ಜ್ಯೂಸ್‌ ಮತ್ತು ಕಲ್ಲಂಗಡಿ

ಸಾಮಾನ್ಯವಾಗಿ ಉಪವಾಸ ದಿನದಂದು ಹಣ್ಣುಗಳನ್ನು ತಿಂದರೆ ದೇಹಕ್ಕೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಉಪವಾಸದ ದಿನ ಸೇಬು ಹಣ್ಣಿನ ರಸ, ಕಲ್ಲಂಗಡಿ ಹಣ್ಣಿನ ರಸ, ಅಥವಾ ಹೋಳುಗಳನ್ನು ತಿನ್ನಬಹುದು. ಜೊತೆಗೆ ಕಲ್ಲಂಗಡಿ ಹಣ್ಣನ್ನು ತುಂಡಾಗಿ ಕತ್ತರಿಸಿ, ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಲವಂಗ ಪುಡಿ, ತೆಂಗಿನ ಹಾಲು ಬೆರೆಸಿ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ಸಿಹಿ ಗೆಣಸು‌‌

ಸಿಹಿ ಗೆಣಸು ಒಂದು ಪೌಷ್ಟಿಕಾಂಶ ಭರಿತ, ಬೇರು ಜಾತಿಯ ತರಕಾರಿ. ಇದರಲ್ಲಿ ವಿಟಮಿನ್ A, C, ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ. ಇದನ್ನು ಉಪವಾಸದ ಸಮಯದಲ್ಲಿ ಬೇಯಿಸಿ ತಿನ್ನಬಹುದು. ಅಷ್ಟೇ ಅಲ್ಲದೇ ಮಿತವಾದ ಸೇವನೆಯು ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದಾಗಿದೆ.  

ಮಖಾನ ಪಾಯಸ

ಮಖಾನದ ಪಾಯಸವು ಅತ್ಯಂತ ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವ ಇದು ಹಗುರವಾದ ಆಹಾರದ ಉತ್ಪನ್ನವಾಗಿದೆ. ಇದು ದೇಹದ ಆರೋಗ್ಯಕ್ಕೆ ಅತ್ಯುತ್ತಮವಾದದ್ದು, ಇದರಲ್ಲಿ ಪೊಟ್ಯಾಸಿಯಂ, ಕಾರ್ಬೋಹೈಡ್ರೇಟ್, ಪ್ರೋಟಿನ್‍ಗಳು ಸಮೃದ್ಧವಾಗಿವೆ. ಹೀಗಾಗಿ ಇದನ್ನು ಉಪವಾಸದ ಸಮಯದಲ್ಲಿ ಲಘು ಉಪಹಾರವಾಗಿ ಸೇವಿಸಬಹುದು.

ಸಾಬುದಾನ ಖಿಚಡಿ

ಸಾಬುದಾನ ಖಿಚಡಿಯೂ ಉಪವಾಸ ಇದ್ದಾಗ ಸೇವಿಸುವ ಪ್ರಮುಖ ಖಾದ್ಯವಾಗಿದೆ. ಇದನ್ನು ಒಂದು ದಿನ ಮುಂಚಿತವಾಗಿಯೇ ನೀರಿನಲ್ಲಿ ನೆನೆಸಿಟ್ಟು ಅದಕ್ಕೆ ಕಡಲೆಕಾಯಿ ಪುಡಿ ಮತ್ತು ಆಲೂಗಡ್ಡೆ ಹಾಕಿ ಜೊತೆಗೆ ಸಬ್ಬಕ್ಕಿ ಹಾಕಿ ತಯಾರಿಬಹುದು. ಇದು ಇಡೀ ದಿನ ನಮ್ಮ ಹಸಿವನ್ನು ತಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.