ಮಲೆನಾಡು ಅಂದರೆ ಪ್ರಕೃತಿ ಸೌಂದರ್ಯದ ಜತೆಗೆ ಮಾಂಸಹಾರ ಊಟಕ್ಕೂ ಹೆಸರುವಾಸಿ. ಇಲ್ಲಿನ ಬಹುತೇಕ ಹಬ್ಬಗಳಲ್ಲಿ ಮಾಂಸಹಾರ ಇದ್ದು, ಅದರಲ್ಲೂ ವಿಶೇಷವಾಗಿ ಚಿಕನ್ ಫ್ರೈ ಇರುವುದನ್ನು ನೋಡಬಹುದು. ಹಾಗಿದ್ದರೇ ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ಮಲೆನಾಡ ಶೈಲಿಯಲ್ಲಿ ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
1⁄2 ಕೆಜಿ ಚಿಕನ್
2 ಚಮಚ ಕಾರಪುಡಿ
1 1⁄2 ಚಮಚ ಗರಂ ಮಸಾಲ
1 1⁄2 ಚಮಚ ಧನಿಯಾ ಪುಡಿ
ಅಗತ್ಯಕ್ಕೆ ತಕ್ಕಷ್ಟು ಚಕ್ಕೆ, ಲವಂಗ
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಅರಶಿಣ
ಉಪ್ಪು
ಹುಳಿ
ಕೊತ್ತಂಬರಿ ಸೊಪ್ಪು
ಪುದೀನಾ ಸೊಪ್ಪು
ಈರುಳ್ಳಿ
ರುಬ್ಬಿಕೊಂಡ ಟೊಮೆಟೊ ಪೇಸ್ಟ್
ಅಡುಗೆ ಎಣ್ಣೆ
ಹಸಿರು ಮೆಣಸಿನಕಾಯಿ
ಮಾಡುವ ವಿಧಾನ
ಹಂತ1 : ಮೊದಲು 1 ಈರುಳ್ಳಿ, 2 ಟೊಮೆಟೊ, 4 ಹಸಿರು ಮೆಣಸಿನಕಾಯಿಯನ್ನು ತೊಳೆದು ಹೆಚ್ಚಿಕೊಳ್ಳಿ.
ಹಂತ 2: ಕಾರಪುಡಿ, ಗರಂ ಮಸಾಲ, ಧನಿಯಾ ಪುಡಿಯನ್ನು ಮಿಶ್ರಣ ಮಾಡಿ ಒಂದು ಬಾಣಲೆಯಲ್ಲಿ ಕಂದು ಬಣ್ಣಕ್ಕೆ ಬರುವ ತನಕ ಬಿಸಿಮಾಡಿಕೊಳ್ಳಿ.
ಹಂತ 3: ಸ್ಟವ್ ಅಥವಾ ಒಲೆಯ ಮೇಲೆ ಒಂದು ಬಾಣಲೆ ಇಟ್ಟು, 2 ಚಮಚ ಅಡುಗೆ ಎಣ್ಣೆ ಹಾಕಿ. ಕಟ್ ಮಾಡಿಕೊಂಡ ಈರುಳ್ಳಿ, ಹಸಿ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹಸಿ ವಾಸನೆ ಹೋಗುವಷ್ಟು ಫ್ರೈ ಮಾಡಿಕೊಳ್ಳಿ.
ಹಂತ 4: ಈರುಳ್ಳಿ ಫ್ರೈ ಆದ ಬಳಿಕ ಅದೇ ಬಾಣಲಿಗೆ ಶುಚಿಯಾಗಿ ತೊಳೆದಿಟ್ಟ ಚಿಕನ್, ಚಕ್ಕೆ– ಲವಂಗ, ಅರಶಿಣ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಬ್ಬಿಕೊಂಡ ಟೊಮೆಟೊ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಅಗತ್ಯ ಇರುವಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10–15 ನಿಮಿಷಗಳ ಕಾಲ ಕುದಿಯಲು ಬಿಡಿ.
ಹಂತ 5: ಚಿಕನ್ ಬೆಂದ ಬಳಿಕ ಕಂದು ಬಣ್ಣಕ್ಕೆ ಬರುವ ತನಕ ಬಿಸಿ ಮಾಡಿಕೊಂಡ ಮಿಶ್ರಣ ಪುಡಿ, ಹಾಗೂ ರುಚಿಗೆ ತಕ್ಕಷ್ಟು ಹುಳಿ (ನಿಂಬೆ ಅಥವಾ ಹುಣಸೆ ಹಣ್ಣು) ಹಾಕಿ 10 ನಿಮಿಷಗಳ ಕಾಲ ಹದಕ್ಕೆ ಬರುವವರೆಗೂ ಫ್ರೈ ಮಾಡಿಕೊಳ್ಳಿ.
ಹಂತ 6 : ನಂತರ ಶುಚಿಯಾಗಿ ತೊಳೆದುಕೊಂಡು ಹೆಚ್ಚಿಟ್ಟ ಕೊತ್ತಂಬರಿ ಹಾಗೂ ಪುದೀನಾ ಸೊಪ್ಪುನ್ನು ಚಿಕನ್ ಫ್ರೈಗೆ ಹಾಕಿ ಒಲೆಯಿಂದ ಇಳಿಸಿಕೊಳ್ಳಿ.
ನಂತರ ಅನ್ನ, ಅಥವಾ ರೊಟ್ಟಿ, ಚಪಾತಿ, ದೋಸೆಯೊಂದಿಗೆ ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.