ADVERTISEMENT

ಬೇಸಿಗೆಯಲ್ಲಿ ಆರೋಗ್ಯದ ಸ್ಥಿರತೆಗೆ ಸಹಕಾರಿ ಪಾಲಕ್ ಸೂಪ್; ಮಾಡುವ ವಿಧಾನ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 10:03 IST
Last Updated 20 ಫೆಬ್ರುವರಿ 2026, 10:03 IST
   

ಬೇಸಿಗೆ ಆರಂಭವಾಗುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ದೇಹವನ್ನು ತಂಪಾಗಿರಿಸುವ ಆಹಾರ ಸೇವನೆ ಮಾಡಬೇಕು. ಬಿಸಿಲಿನ ಬೇಗೆಗೆಯಲ್ಲಿ ದೇಹವನ್ನು ತಣ್ಣಾಗಿಡಲು ಪಾಲಾಕ್‌ ಸಹಕಾರಿಯಾಗಲಿದೆ.

ಪಾಲಾಕ್‌ನಲ್ಲಿ ಕ್ಯಾರೋಟಿನೈಡ್, ವಿಟಮಿನ್ ಬಿ.ಸಿ.ಇ ಅಂಶಗಳನ್ನು ‌ಹೊಂದಿದೆ. ಈ ಸೊಪ್ಪಿನಿಂದ ತಯಾರಿಸಬಹುದಾದ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೂ ಉಪಯೋಗವಾಗಲಿದೆ. ಪಾಲಕ್ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಪಾಲಕ್ ಸೂಪ್ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.

ಪಾಲಕ್ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು

  • ಪಾಲಕ್ ಸೊಪ್ಪು– 1 ಕಟ್ಟು

    ADVERTISEMENT
  • ಹಸಿರು ಮೆಣಸಿನಕಾಯಿ –4ರಿಂದ5

  • ಕತ್ತರಿಸಿಕೊಂಡ ಈರುಳ್ಳಿ–2

  • ಬೆಣ್ಣೆ– 2 ಚಮಚ

  • ಕುದಿಸಿದ ಹಾಲು –1 ಕಪ್

  • ಜೀರಿಗೆ ಪುಡಿ – 1–2 ಚಮಚ

  • ಕಾಳು ಮೆಣಸಿನ ಪುಡಿ– 1 ಚಮಚ

  • ಉಪ್ಪು– ರುಚಿಗೆ ತಕ್ಕಷ್ಟು

  • ಬೆಲ್ಲ – ಅರ್ಧ ಕಪ್

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಶುಚಿಮಾಡಿ ಕತ್ತರಿಸಿಕೊಂಡ ಪಾಲಕ್ ಸೊಪ್ಪು, ಹಸಿರು ಮೆಣಸಿನಕಾಯಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 1–2 ಲೋಟ ನೀರು ಸೇರಿಸಿ ಕುದಿಸಿಕೊಳ್ಳಿ.

ನಂತರ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ.. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.  

ನಂತರ ಬಸಿದುಕೊಂಡ ಪಾಲಕ್ ಸೊಪ್ಪು ಮತ್ತು ಫ್ರೈ ಮಾಡಿಕೊಂಡ ಈರುಳ್ಳಿಯನ್ನು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ. 

ಆದಾದ ಬಳಿಕ ಒಂದು ಬಾಣಲೆಗೆ ರುಬ್ಬಿಕೊಂಡ ಪಾಲಾಕ್ ಮಾಸಲೆ, ಬೆಲ್ಲ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿ 5ರಿಂದ10 ನಿಮಿಷ ಬೇಯಿಸಿಕೊಳ್ಳಿ.

ಬಿಸಿಬಿಸಿಯಾಗಿ ಸವಿಯಲು ಸಿದ್ಧ ಪಾಲಕ್ ಸೂಪ್..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.