
ಸಾಂದರ್ಭಿಕ ಚಿತ್ರ
ಚಿತ್ರ: ಎಐ
ಬಹುತೇಕರು ಮಾಂಸಾಹಾರವನ್ನು ಇಷ್ಟಪಟ್ಟು ಸೇವಿಸುತ್ತಾರೆ. ಚಿಕನ್ ಬಳಸಿಕೊಂಡು ಏನಾದರೂ ಹೊಸದಾಗಿ ರುಚಿ ರುಚಿಯಾದ ಅಡುಗೆ ತಯಾರಿಸಬೇಕು ಎನ್ನುವವರಿಗೆ ಇಲ್ಲಿದೆ ಬೆಸ್ಟ್ ರೆಸಿಪಿ. ಪಾರ್ಸಿ ಶೈಲಿಯ ‘ಚಿಕನ್ ಫರ್ಚಾ’ವನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಾದರೆ ಚಿಕನ್ ಫರ್ಚಾವನ್ನು ತಯಾರಿಸುವ ಸುಲಭ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು
ಮೂಳೆ ರಹಿತ ಚಿಕನ್
ಶುಂಠಿ-ಬೆಳ್ಳುಳ್ಳಿ ಮಿಶ್ರಣ
ಅರಿಶಿನ ಪುಡಿ
ಖಾರದ ಪುಡಿ
ಜೀರಿಗೆ ಪುಡಿ
ಕೊತ್ತಂಬರಿ
ಉಪ್ಪು
ನಿಂಬೆ ರಸ
ಮೊಟ್ಟೆ
ಬ್ರೆಡ್ ಕ್ರಂಬ್ಸ್ (ಪುಡಿ ಮಾಡಿದ ಬ್ರೆಡ್)
ಚಿಕನ್ ಫರ್ಚಾ ತಯಾರಿಸುವ ವಿಧಾನ:
ಮೊದಲಿಗೆ ಚಿಕನ್ ಅನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಚಿಕನ್, ಹಾಕಿಕೊಂಡು ಜೊತೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆಗಳು, ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 10 ರಿಂದ 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
ಬಳಿಕ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಗಳನ್ನು ಒಡೆದು ಇಟ್ಟುಕೊಳ್ಳಿ. ಮತ್ತೊಂದು ಬಟ್ಟಲಲ್ಲಿ ಬ್ರೆಡ್ ಕ್ರಂಬ್ಸ್ ಹಾಕಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ತೆಗೆದುಕೊಂಡು ಬ್ರೆಡ್ ಕ್ರಂಬ್ಸ್‌ನಲ್ಲಿ ಹಾಕಿ, (ಚೆನ್ನಾಗಿ ಮಾಂಸದ ಮೇಲೆ ಒದಿಕೆ ಯಾಗಬೇಕು) ನಂತರ ಒಡೆದ ಮೊಟ್ಟೆಯಲ್ಲಿ ಅದ್ದಿ ಬಾಣೆಲೆಗೆ ಬಿಡಿ.
ನಂತರ ಮಧ್ಯಮ ಉರಿಯಲ್ಲಿ ಚಿಕನ್ ತುಂಡುಗಳು ಚಿನ್ನದ ಬಣ್ಣವಾಗುವವರೆಗೂ ಬೇಯಿಸಿದರೆ ಚಿಕನ್ ಫರ್ಚಾ ಸಿದ್ಧವಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚು ರೋಸ್ಟ್ ಕೂಡಾ ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.