ಸಂಜೆ ಕಾಫಿ ಜತೆ ತಿನ್ನಲು ಏನಾದರೂ ತಿಂಡಿ ಮಾಡುವ ಯೋಜನೆಯಲ್ಲಿ ಇದ್ದರೆ ಖಾರ ಅವಲಕ್ಕಿ ಮಾಡಿ ಸವಿಯಬಹುದು. ಹಾಗಿದ್ದರೆ ಸುಲಭವಾಗಿ ಖಾರ ಅವಲಕ್ಕಿ ಮಾಡುವುದು ಹೇಗೆ ಎಂಬುದನ್ನು ನೋಡೊಣ.
ಖಾರ ಅವಲಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು
5 ಕಪ್ ಪೇಪರ್ ಅವಲಕ್ಕಿ
2 ಚಮಚ ಖಾರ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1/4 ಚಮಚ ಅರಶಿನ ಪುಡಿ
1/4 ಚಮಚ ಸಾಸಿವೆ
1/4 ಚಮಚ ಉದ್ದಿನ ಬೇಳೆ
ಕರಿ ಬೇವು
ಸ್ವಲ್ಪ ಬೆಲ್ಲ ಅಥವಾ ಸಕ್ಕರೆ
ಕೊಬ್ಬರಿ ತುರಿ
ಅಡುಗೆ ಎಣ್ಣೆ
2 ಈರುಳ್ಳಿ
ಮಾಡುವ ವಿಧಾನ
ಹಂತ: ಒಂದು ಪಾತ್ರೆಗೆ 4 ಚಮಚ ಅಡುಗೆ ಎಣ್ಣೆ, ಕರಿ ಬೇವು, ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ, ಅರಶಿನ, ಖಾರದ ಪುಡಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ನಂತರ ಅದಕ್ಕೆ ಪೇಪರ್ ಅವಲಕ್ಕಿ ಹಾಗೂ ತೆಂಗಿನ ಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ ತಣ್ಣಗಾಗಲು ಬಿಡಿ.
ಹಂತ 2: ತಣ್ಣಗಾದ ಒಗ್ಗರಣೆ ಅವಲಕ್ಕಿಗೆ ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ ಮತ್ತೆ ಮಿಶ್ರಣ ಮಾಡಿ.
ಬಿಸಿ ಕಾಫಿ ಜತೆ ಸವಿಯಲು ಸಿದ್ದ ಖಾರ ಅವಲಕ್ಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.