ADVERTISEMENT

ನೀರ್ ದೋಸೆಯಷ್ಟೇ ರುಚಿ ಈ ತರಕಾರಿ ದೋಸೆ: ಇಲ್ಲಿದೆ ರೆಸಿಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2025, 12:15 IST
Last Updated 23 ಡಿಸೆಂಬರ್ 2025, 12:15 IST
   

ನೀರ್ ದೋಸೆ, ಉದ್ದಿನ ದೋಸೆ, ಮಸಾಲ ದೋಸೆ, ಬೆಣ್ಣೆ ದೋಸೆ ಸೇರಿದಂತೆ ಅನೇಕ ವಿಧದ ದೋಸೆಗಳನ್ನು ಸೇವಿಸಿರುತೇವೆ. ಅದೇ ರೀತಿ ತರಕಾರಿಗಳಿಂದಲೂ ದೋಸೆಗಳನ್ನು ತಯಾರಿಸಬಹುದಾಗಿದೆ. ಈ ದೋಸೆಯನ್ನು ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ

ತರಕಾರಿ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

ರುಬ್ಬಿಕೊಂಡ ಹಿಟ್ಟು – ಅಗತ್ಯಕ್ಕೆ ತಕ್ಕಷ್ಟು

ADVERTISEMENT

ತುರಿದ ಕ್ಯಾರೆಟ್ - 1ಕಪ್

ಕತ್ತರಿಸಿಕೊಂಡ ಈರುಳ್ಳಿ– 1 ಕಪ್

ಕತ್ತರಿಸಿಕೊಂಡ ಎಲೆ ಕೋಸು– 1 ಕಪ್

ಕತ್ತರಿಸಿಕೊಂಡ ಕ್ಯಾಪ್ಸಿಕಮ್ – 1 ಕಪ್

ಟೊಮೆಟೊ–ಅರ್ಧ ಕಪ್

ಹಸಿರು ಮೆಣಸಿನಕಾಯಿ– 3ರಿಂದ4

ಕೊತ್ತಂಬರಿ ಸೊಪ್ಪು– 1 ಕಪ್

ಅಡುಗೆ ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಉಪ್ಪು– ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಟೊಮೆಟೊ, ಈರುಳ್ಳಿಯನ್ನು ಬಿಟ್ಟು ಉಳಿದ ಎಲೆ ಕೋಸು, ತುರಿದ ಕ್ಯಾರೆಟ್,ಕ್ಯಾಪಿಸಿಕಮ್ ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಿ 10–15 ನಿಮಿಷ ಬೇಯಿಸಿಕೊಳ್ಳಿ.

ನಂತರ ತರಕಾರಿಗಳನ್ನು ಬಸಿದುಕೊಂಡು, ಬೇಯಿಸಿ ಕೊಂಡ ತರಕಾರಿಯ ನೀರನ್ನು ತೆಗೆದು ಚಟ್ನಿಗೆ ಅಥವಾ ಸಾಂಬಾರ್‌ಗೆ ಬಳಸಿಕೊಳ್ಳಿ.

ಬಳಿಕ ರುಬ್ಬಿಕೊಂಡ ಹಿಟ್ಟಿಗೆ ಬೇಯಿಸಿಕೊಂಡ ತರಕಾರಿ, ಕೊತ್ತಂಬರಿ ಸೊಪ್ಪು, ಟೊಮೆಟೊ, ಈರುಳ್ಳಿಯನ್ನು ಸೇರಿಸಿ ಮಿಶ್ರಣ ಮಾಡಿ ದೋಸೆ ತಯಾರಿಸಿ. ಬಳಿಕ ಚಟ್ನಿ ಜತೆ ಸೇವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.