ADVERTISEMENT

ಚಳಿಗಾಲ: ಮಕ್ಕಳ ನೆಚ್ಚಿನ ಆಹಾರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 9:30 IST
Last Updated 22 ನವೆಂಬರ್ 2025, 9:30 IST
   

ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರಗಳ ಸೇವನೆ ಉತ್ತಮ ಅನುಭವ ನೀಡುತ್ತದೆ. ಮನೆಗೆ ಸ್ನೇಹಿತರು ಅಥವಾ ಸಂಬಂಧಿಕರು ಬಂದಾಗ ಅವರಿಗೆ ಚಳಿಗಾಲದಲ್ಲಿ ಯಾವ ರೀತಿಯ ಅಡುಗೆ ಮಾಡಿ ಬಡಿಸಬೇಕು ಎಂಬ ಚಿಂತೆ ನಿಮಗಿದ್ದರೆ, ಇಲ್ಲಿದೆ ನಿಮಗಾಗಿ ಸರಳ ಆಹಾರಗಳು.

ಕೊರಿಯನ್ ಕ್ರೀಮ್ ಚೀಸ್: 

ಕೊರಿಯನ್ ಕ್ರೀಮ್ ಚೀಸ್, ಕೊರಿಯ ದೇಶದ ಪ್ರಮುಖ ಬೇಕರಿ ತಿನಿಸಾಗಿದೆ. ಈ ತಿನಿಸನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಬ್ರೇಡ್ ಒಳಗೆ ಸಿಹಿಯಾದ ಕ್ರೀಮ್, ಬೆಣ್ಣೆ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ ಒಲೆಯ ಮೇಲೆ ಸಣ್ಣ ಉರಿಯಿಂದ ಬೇಹಿಸಿ ತಯಾರಿಸಲಾಗುತ್ತದೆ. 

ADVERTISEMENT

ಕೊರಿಯನ್ ಕ್ರೀಮ್ ಚೀಸ್


ಆಲೂಗಡ್ಡೆ ಕಪ್‌ಗಳು: 

ಆಲೂಗಡ್ಡೆಯಿಂದ ತಯಾರಿಸಲಾಗುವ ಕಪ್‌ ಆಕಾರದ ಖಾದ್ಯವಾಗಿದೆ. ಆಲೂಗಡ್ಡೆ ಜೊತೆಗೆ ಬಟಾಣಿ, ತರಕಾರಿ ಮತ್ತು ಮೊಟ್ಟೆ ಬಳಸಿ ತಯಾರಿಸಲಾಗುತ್ತದೆ. ಮಸಾಲೆ ಭರಿತ ಖಾದ್ಯಗಳ ಪೈಕಿ ಆಲೂಗಡ್ಡೆ ಕಪ್‌ ಪ್ರಮುಖವಾಗಿದೆ.

ಆಲೂಗಡ್ಡೆ ಕಪ್‌ಗಳು

ಪೆಸ್ಟೊ: 

ಇದು ಇಟಾಲಿಯನ್ ಖಾದ್ಯವಾಗಿದೆ. ತುಳಸಿ, ಪಾರ್ಮಿಜಿಯಾನೊ ಚೀಸ್, ಆಲಿವ್ ಎಣ್ಣೆ, ಪೈನ್ ಬೀಜಗಳು ಮತ್ತು ಬೆಳ್ಳುಳ್ಳಿ ಸೇರಿಸಿ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಇದನ್ನು ಪಾಸ್ಟಾ, ಬ್ರೆಡ್ ಸೇರಿದಂತೆ ಇತರೆ ಖಾದ್ಯಗಳ ಜೊತೆ ಸೇರಿಕೊಂಡು ಸೇವಿಸಬಹುದು.

ಪೆಸ್ಟೊ

ರಾಗಿ ಮಸಾಲಾ:

ರಾಗಿ ಮಸಾಲಾ ದಕ್ಷಿಣ ಭಾರತದ ಪ್ರಮುಖ ಖಾದ್ಯಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ರಾಗಿ ಹಿಟ್ಟಿನ ಜೊತೆಗೆ ತರಕಾರಿ ಹಾಗೂ ಬೇಳೆ ಕಾಳುಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ತುಪ್ಪ, ಜೀರಿಗೆ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೇಟ್, ಬ್ರೊಕೊಲಿ ಹಾಗೂ ಭಾರತೀಯ ಸಾಂಪ್ರದಾಯಿಕ ಮಸಾಲೆಗಳಿಂದ ತಯಾರಿಸಲಾಗುತ್ತದೆ.

ರಾಗಿ ಮಸಾಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.