ADVERTISEMENT

ಗಿನ್ನಿಸ್‌ ರೆಕಾರ್ಡ್‌ ಆಯ್ತು ಐಟಿಸಿ ಚಾಕೋಲೆಟ್‌: ಇದರ ಬೆಲೆ ಬರೋಬ್ಬರಿ ₹4.3 ಲಕ್ಷ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:13 IST
Last Updated 23 ಅಕ್ಟೋಬರ್ 2019, 11:13 IST
   

ನವದೆಹಲಿ: ಐಟಿಸಿ ಗ್ರೂಪ್‌ ಕಂಪನಿಯು ದುಬಾರಿ ಬೆಲೆಯ ಚಾಕೋಲೆಟ್‌ ಪರಿಚಯಿಸಿದ್ದು ಒಂದು ಕೆ.ಜಿ. ಚಾಕೋಲೆಟ್‌ ಬೆಲೆ ಬರೋಬ್ಬರಿ ₹ 4.3 ಲಕ್ಷ!

ಹೌದು, ದುಬಾರಿ ಬೆಲೆಯ ಫಬೆಲ್ಲಾಎಕ್ಸ್‌ಕ್ಯೂಸೈಟ್‌ ಚಾಕೋಲೆಟ್‌ ಅನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಇದು ವಿಶ್ವದ ಅತ್ಯಂತ ದುಬಾರಿ ಚಾಕೋಲೆಟ್‌ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್‌ ರೆಕಾರ್ಡ್‌ ಆಗಿದೆ.

ಐಟಿಸಿಯ ಜನಪ್ರಿಯ ಫಬೆಲ್ಲಾ ಚಾಕೋಲೆಟ್‌ ಬ್ರ್ಯಾಂಡ್‌ ಅಡಿಯಲ್ಲಿ ಈ ದುಬಾರಿ ಚಾಕೋಲೆಟ್‌ ತಯಾರಿಸಲಾಗಿದೆ. ಭಾರತದಲ್ಲೂ ಸಹ ಹೊಸ ದಾಖಲೆ ಬರೆಯುವ ಮೂಲಕ ಗಿನ್ನಿಸ್‌ ರೆಕಾರ್ಡ್‌ ಮಾಡಿರುವುದು ಸಂತಸದ ಸಂಗತಿ ಎಂದು ಐಟಿಸಿ ಗ್ರೂಪ್‌ನ ಆಹಾರ ವಿಭಾಗದ ಮುಖ್ಯಸ್ಥರಾದ ಅಂಜು ರುಸ್ತಾಗಿ ತಿಳಿಸಿದ್ದಾರೆ.

ADVERTISEMENT

ಫಬೆಲ್ಲಾ ಚಾಕೋಲೆಟ್‌ ತಯಾರಿಸುವ ಮುಖ್ಯಬಾಣಸಿಗ ಫಿಲಿಪ್ಪಿ ಕಂಟೆಸಿನಿಯ ನೆತೃತ್ವದಲ್ಲಿ ಈ ದುಬಾರಿ ಚಾಕೋಲೆಟ್‌ ತಯಾರು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.