ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬ ಎಂದರೆ ಸಿಹಿ ಪದಾರ್ಥಗಳನ್ನು ಮಾಡಿ ಬಡಿಸುವುದೇ ಒಂದು ಸಂಭ್ರಮ. ಹಬ್ಬದ ಸಂದರ್ಭದಲ್ಲಿ ಸುಲಭವಾಗಿ ಮಾಡುವ ಸಿಹಿ ಪದಾರ್ಥಗಳ ಸಾಲಿನಲ್ಲಿ ಕರ್ಜಿಕಾಯಿ ಒಂದಾಗಿದೆ. ಎಲ್ಲಾ ಹಬ್ಬಗಳಿಗೂ ಸಿಹಿ ಪದಾರ್ಥವಾಗಿರುವ ಕರ್ಜಿಕಾಯಿಯನ್ನು ಮನೆಯಲ್ಲಿ ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ.
ಕರ್ಜಿಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಅರ್ಧ ಕೆ.ಜಿ ಮೈದಾ ಹಿಟ್ಟು
ಒಂದು ಕಪ್ ಬಿಳಿ ಎಳ್ಳು
ಎಣ್ಣೆ
ಒಂದು ಕಪ್ ಸಕ್ಕರೆ, ಅಥವಾ ಬೆಲ್ಲ
ಕೊಬ್ಬರಿ ತುರಿ
ತುಪ್ಪ
ಮಾಡುವ ವಿಧಾನ
ಹಂತ 1 : ಮೈದಾ ಹಿಟ್ಟನ್ನು ಸ್ವಲ್ಪ ತುಪ್ಪ ಹಾಗೂ ನೀರು ಬೆರಸಿ ಚಪಾತಿ ಹದಕ್ಕೆ ಕಲಸಿಕೊಳ್ಳಿ.
ಹಂತ 2: ಬಿಸಿ ಮಾಡಿದ ಎಳ್ಳು, ಏಲಕ್ಕಿ, ಸಕ್ಕರೆ ಅಥವಾ ಬೆಲ್ಲವನ್ನು ಕಲಸಿಕೊಳ್ಳಿ
ಹಂತ 3: ಕಲಸಿಟ್ಟ ಮೈದಾ ಹಿಟ್ಟನ್ನು ಪೂರಿ ಆಕಾರಕ್ಕೆ ಮಾಡಿಕೊಳ್ಳಿ.
ಹಂತ 4 : ಪೂರಿ ಆಕಾರಕ್ಕೆ ಮಾಡಿದ ಮೈದಾ ಹಿಟ್ಟಿನ ಒಳಗೆ ಸಕ್ಕರೆ ಮಿಶ್ರಣ ಹಾಕಿ, ಅಚ್ಚು ಅಥವಾ ಕೈಯಿಂದ ಕರ್ಜಿಕಾಯಿ ಆಕಾರ ಮಾಡಿ.
ಹಂತ 5: ಒಂದು ಬಾಣಲೆಯಲ್ಲಿ ಕಾಯಲು ಇಟ್ಟ ಎಣ್ಣೆ ಒಳಗೆ ಕರ್ಜಿಕಾಯಿ ಹಾಕಿ ಕರಿದುಕೊಳ್ಳಿ. ಇಗ ಕರ್ಜಿಕಾಯಿ ಸವಿಯಲು ಸಿದ್ದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.