ಚಿತ್ರ ಕೃಪೆ : ಯೂಟ್ಯೂಬ್
ಹಬ್ಬದಲ್ಲಿ ಮಹಿಳೆಯರಿಗೆ ಸಿಹಿ ತಿನಿಸುಗಳನ್ನು ಮಾಡಿ ಬಡಿಸುವುದೇ ಒಂದು ಸಂಭ್ರಮ. ಎಲ್ಲಾ ಹಬ್ಬಗಳಲ್ಲೂ ವಿಶೇಷ ಸಿಹಿತಿನಿಸು ಎನಿಸಿಕೊಂಡಿರುವ ಮೋತಿಚೂರ್ ಲಡ್ಡನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ ಬನ್ನಿ.
ಮೋತಿಚೂರ್ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು
ಒಂದು ಕಪ್ ಕಡಲೆ ಹಿಟ್ಟು
ಅದೇ ಪ್ರಮಾಣದ ಸಕ್ಕರೆ
ಒಣಹಣ್ಣುಗಳು
ಅಡುಗೆಗೆ ಬಳಸುವ ಕೇಸರಿ ಬಣ್ಣ
ಅಡುಗೆ ಎಣ್ಣೆ
ಮೋತಿಚೂರ್ ಲಡ್ಡು ಮಾಡುವ ವಿಧಾನ
ಹಂತ 1 : ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಪ್ರಮಾಣದ ಕೇಸರಿ ಬಣ್ಣ ಹಾಗೂ ನೀರು ಸೇರಿಸಿ ಗಂಟು ಇಲ್ಲದಂತೆ ಸ್ವಲ್ಪ ತೆಳ್ಳಗೆ ಕಲಸಿಕೊಳ್ಳಿ. ನಂತರ ಸಣ್ಣ ಸಣ್ಣ ಬೂಂದಿಕಾಳುಗಳನ್ನು ತಯಾರಿಸಿ.
ಹಂತ 2: ಅಡುಗೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಕಾಯಲು ಇಡಿ.
ಹಂತ 3: ಕಾದ ಎಣ್ಣೆಗೆ ತೇಳುವಾಗಿ ಕಲಸಿಟ್ಟ ಕಡಲೆ ಹಿಟ್ಟನ್ನು ಜರಡಿ ಅಥವಾ ಸಣ್ಣ ರಂಧ್ರ ಇರುವ ಪಾತ್ರೆಯ ಮೂಲಕ ಎಣ್ಣೆಗೆ ಬಿಡಿ. ಅದು ಸಣ್ಣ ಬೂಂದಿಕಾಳು ಆಗುತ್ತವೆ.
ಹಂತ 4: ಕಾದ ಸಣ್ಣ ಬೂಂದಿ ಕಾಳುಗಳನ್ನು ಒಂದು ಪಾತ್ರೆಯಲ್ಲಿ ಎತ್ತಿಡಿ.
ಹಂತ 5: ಒಂದು ಕಪ್ ಸಕ್ಕರೆ, ನೀರು ಹಾಗೂ ಒಂದು ಚಿಟಿಕೆಯಷ್ಟು ಕೇಸರಿ ಬಣ್ಣವನ್ನು ಹಾಕಿ ಒಂದು ಬಾಣಲೆಯಲ್ಲಿ ಕಾಯಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿಕೊಳ್ಳುವುದು ಉತ್ತಮ.
ನಿಂಬೆ ರಸ ಬೆರೆಸುವುದರಿಂದ ಸಕ್ಕರೆ ಪಾನಕ ಗಟ್ಟಿಯಾಗುವುದಿಲ್ಲ.
ಹಂತ 6: ಕಾದ ಸಕ್ಕರೆ ಪಾನಕದಲ್ಲಿ ತಯಾರಿಸಿಟ್ಟ ಬೂಂದಿಕಾಳುಗಳನ್ನು ಸೇರಿಸಿ ಹದಕ್ಕೆ ಬೇಯಿಸಿಕೊಳ್ಳಿ.
ಹಂತ 7: ಪಾನಕದಲ್ಲಿ ಕಾದ ಬೂಂದಿಗೆ ಒಣಹಣ್ಣುಗಳನ್ನು ಮಿಶ್ರಣ ಮಾಡಿ. ಬಳಿಕ ಅರ್ಧ ಗಂಟೆಗಳ ಕಾಲ ಬಿಸಿ ಆರಲು ಬಿಡಿ.
ಹಂತ 8: ತಣ್ಣಾಗಾದ ಬೂಂದಿ ಕಾಳನ್ನು ಮಧ್ಯಮ ಆಕಾರದಲ್ಲಿ ಉಂಡೆಯನ್ನು ಕಟ್ಟಿ. ನಂತರ ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.