ADVERTISEMENT

ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಗಿಡಗಳನ್ನು ಬೆಳೆಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 6:10 IST
Last Updated 8 ನವೆಂಬರ್ 2025, 6:10 IST
<div class="paragraphs"><p>ಚಿತ್ರ: ಡೆಕ್ಕಾನ್ ಹೆರಾಲ್ಡ್‌</p></div>
   

ಚಿತ್ರ: ಡೆಕ್ಕಾನ್ ಹೆರಾಲ್ಡ್‌

ಅತಿಯಾದ ವಾಹನಗಳ ಬಳಕೆ, ಕಾರ್ಖಾನೆಯಿಂದ ಹೊರಸೂಸುವ ಅನಿಲಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ. ಈ ನಡುವೆ ಮನೆಯೊಳಗಿನ ವಾತವಾರಣ ಉತ್ತಮವಾಗಿಡುವುದು ಕೂಡ ಸವಾಲಿನ ಕೆಲಸವಾಗಿದೆ. ಆದರೆ ಕೆಲವು ಗಿಡಗಳನ್ನು ಮನೆಯೊಳಗೆ ಇಡುವುದರಿಂದ ಮನೆಯ ವಾತಾವರಣ ಉತ್ತಮವಾಗಿರುತ್ತೆ ಎಂದು ಡೆಕ್ಕಾನ್‌ ಹೆರಾಲ್ಡ್‌ ವರದಿ ಮಾಡಿದೆ. 

ಸ್ನೇಕ್ ಪ್ಲಾಂಟ್ (Snake Plant):

ADVERTISEMENT

ಮನೆಯೊಳಗೆ ಬೆಳೆಸುವ ಪ್ರಮುಖ ಗಿಡವಾದ ಸ್ನೇಕ್ ಪ್ಲಾಂಟ್ ಕಡಿಮೆ ನೀರು ಹಾಗೂ ಕಡಿಮೆ ನಿರ್ವಹಣೆಯಿಂದ ಬೆಳೆಸಬಹುದಾದ ಗಿಡವಾಗಿದೆ. ಈ ಸಸ್ಯವು ಫಾರ್ಮಾಲ್ಡಿಹೈಡ್, ಬೆಂಜೀನ್, ಕ್ಸೈಲೀನ್, ಟೊಲ್ಯೂನ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ಹಾನಿಕಾರಕ ವಸ್ತುಗಳನ್ನು ಗಾಳಿಯಿಂದ ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ರಬ್ಬರ್ ಪ್ಲಾಂಟ್ (Rubber Plant):

ಗಾಳಿಯನ್ನು ಶುದ್ಧೀಕರಿಸಲು ಮತ್ತೊಂದು ಉತ್ತಮ ಸಸ್ಯವೆಂದರೆ ರಬ್ಬರ್ ಪ್ಲಾಂಟ್. ಇದು ಫಾರ್ಮಾಲ್ಡಿಹೈಡ್‌ನ ಪರಿಣಾಮಗಳನ್ನು ಎದುರಿಸುವ ಗುಣ ಹೊಂದಿದೆ. ಈ ಸಸ್ಯ ಬೆಳೆಯಲು ಸೂರ್ಯನ ಬೆಳಕು ಅಗತ್ಯವಾಗಿದೆ. ಸ್ವಲ್ಪ ಪ್ರಮಾಣದ ನೀರನ್ನು ಈ ಸಸ್ಯಕ್ಕೆ ಹಾಕಬೇಕು.

ಅಲೋವೆರಾ (Aloe Vera):

ಇದನ್ನು ಮನೆಯೊಳಗೆ ಬೆಳೆಸುವ ಅತ್ಯಂತ ಸೂಕ್ತ ಸಸ್ಯವೆಂದು ಪರಿಗಣಿಸಲಾಗಿದೆ. ಇದು ಫಾರ್ಮಾಲ್ಡಿಹೈಡ್ ಮತ್ತು ಬೆಂಜೀನ್‌ನಂತಹ ಗಾಳಿಯಲ್ಲಿರುವ ವಿಷ ಪದಾರ್ಥಗಳನ್ನು ಪರಿಣಾಮಕಾರಿಯಾಗಿ ತೆಗೆದು ಹಾಕುತ್ತದೆ. ಈ ಸಸ್ಯ ಸೂರ್ಯನ ಬೆಳಕು ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ ಹಾಗೂ ಇದರ ನಿರ್ವಹಣೆಗೆ ಸ್ವಲ್ಪ ನೀರು ಸಾಕಾಗುತ್ತದೆ.

ಪೀಸ್ ಲಿಲಿ (Peace Lily) : 

ಪೀಸ್ ಲಿಲಿಯು ಗಾಳಿ ಶುದ್ಧೀಕರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಸಸ್ಯ ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್, ಬೆಂಜೀನ್, ಟ್ರೈಕ್ಲೋರೋಇಥಿಲೀನ್, ಕ್ಸೈಲೀನ್ ಮತ್ತು ಅಮೋನಿಯಾವನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಸೂರ್ಯನ ಬೆಳಕು ಹಾಗೂ ತೇವಾಂಶಯುಕ್ತ ಮಣ್ಣು ಈ ಸಸ್ಯಕ್ಕೆ ಅಗತ್ಯ. 

ಬಿದಿರು ತಾಳೆ (Bamboo Palm):

ಬಿದಿರು ತಾಳೆ ಮರವು ಫಾರ್ಮಾಲ್ಡಿಹೈಡ್, ಬೆಂಜೀನ್, ಟ್ರೈಕ್ಲೋರೋಎಥಿಲೀನ್ ಮತ್ತು ಕ್ಸೈಲೀನ್‌ನಂತಹ ಗಾಳಿಯಲ್ಲಿರುವ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಸೂರ್ಯನ ಬೆಳಕು ರಹಿತ ಮತ್ತು ನಿಯಮಿತ ನೀರು  ಅಗತ್ಯವಿರುವುದರಿಂದ ಇದು ಮನೆಯೊಳಗೆ ಬೆಳೆಸಲು ಅತ್ಯುತ್ತಮ ಆಯ್ಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.