ಸಾಂದರ್ಭಿಕ ಚಿತ್ರ
ಚಳಿಗಾಲ ಹೆಚ್ಚಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅಸ್ತಮಾ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ವರದಿ ಬಂದಿದೆ. ಅಸ್ತಮಾ ಸಮಸ್ಯೆಯು ಮಕ್ಕಳಲ್ಲಿ ಹಾಗೂ ಮಧ್ಯ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ಅಸ್ತಮಾಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಅಸ್ತಮಾ ಬರಲು ಕಾರಣಗಳು
ವಾಯು ಮಾಲಿನ್ಯ
ಕಟ್ಟಡ ನಿರ್ಮಾಣ
ಧೂಮಪಾನ
ಅನುವಂಶಿಕತೆ
ಪರಿಸರ ಮಾಲಿನ್ಯ
ಇದರ ಲಕ್ಷಣಗಳು
ವಿಪರೀತ ಸೀನುವಿಕೆ
ಉಸಿರಾಟದ ತೊಂದರೆ
ಕೆಮ್ಮು
ಉಬ್ಬಸ
ಪರಿಹಾರಗಳು
ಸಾಧ್ಯವಾದಷ್ಟು ಧೂಳಿನಿಂದ ದೂರ ಇರುವುದು
ಟ್ರಾಫಿಕ್‌ನಲ್ಲಿ , ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಅಥವಾ ಸಂಚರಿಸುವಾಗ ಮಾಸ್ಕ್ ಧರಿಸುವುದು
ಬೆಚ್ಚಗಿನ ಉಡುಪು ಧರಿಸುವುಸುದು
ಬೆಳಿಗ್ಗೆ ಎದ್ದ ಕೂಡಲೆ ಬಿಸಿ ನೀರು ಕುಡಿಯುವುದು
ಪ್ರತಿನಿತ್ಯ ಪ್ರಾಣಾಯಾಮ ಮಾಡುತ್ತಿರಬೇಕು
ರಾತ್ರಿ ಮಲಗುವ ಮುನ್ನ ಒಂದು ಲವಂಗ ಅಗಿದು ತಿನ್ನಬೇಕು ಅಥವಾ ಅದರ
ಪುಡಿಯನ್ನು ಚಿಟಿಕೆಯಷ್ಟು ಬಾಯಲ್ಲಿ ಇಟ್ಟುಕೊಂಡು ಮಲಗಬೇಕು.
ತಂಪು ಪಾನೀಯಗಳನ್ನು ಸೇವಿಸಬಾರದು.
ತಣ್ಣೀರು ಕುಡಿಯಬಾರದು
ಅಸ್ತಮಾ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಇದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.