ADVERTISEMENT

ಬ್ಲ್ಯಾಕ್ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:59 IST
Last Updated 20 ನವೆಂಬರ್ 2025, 6:59 IST
<div class="paragraphs"><p>ಚಿತ್ರ:ಎಐ</p></div>
   

ಚಿತ್ರ:ಎಐ

ಅನೇಕರು ಹಾಲು ಮಿಶ್ರಿತ ಕಾಫಿ ಕುಡಿಯುವುದಕ್ಕಿಂತ ಹೆಚ್ಚಾಗಿ ಬ್ಲ್ಯಾಕ್ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಇದನ್ನು ಕಾಫಿ ಪುಡಿ ಮತ್ತು ಬಿಸಿ ನೀರು ಬಳಸಿ ತಯಾರಿಸಲಾಗುತ್ತದೆ. ಹಾಲಿನ ಕೆನೆ ಅಥವಾ ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಹಾಗಾದರೆ ಇದನ್ನು ಕುಡಿಯುವುದರಿಂದಾಗುವ ಪ್ರಯೋಜನ ಹಾಗೂ ದಿನಕ್ಕೆ ಎಷ್ಟು ಬಾರಿ ಸೇವಿಸಬೇಕು ಎಂಬುದನ್ನು ತಿಳಿಯೋಣ.

  • ಶಕ್ತಿ ಮತ್ತು ಗಮನ ಹೆಚ್ಚಳ: ಬ್ಲ್ಯಾಕ್ ಕಾಫಿ ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಒದಗಿಸುವುದರಿಂದ ಇದನ್ನು ಜನ ಹೆಚ್ಚು ಇಷ್ಟಪಟ್ಟು ಕುಡಿಯುತ್ತಾರೆ. ಇದರಲ್ಲಿರುವ ಕೆಫೀನ್ ನಿಮ್ಮನ್ನು ಹೆಚ್ಚು ಸಮಯದ ವರೆಗೆ ಎಚ್ಚರಗೊಳಿಸುತ್ತದೆ. ನಿಮ್ಮ ಗಮನ ಒಂದೆಡೆ ಕೇಂದ್ರಿಕರಿಸಲು ಸಹಕಾರಿಯಾಗಿದೆ. 

    ADVERTISEMENT
  • ತೂಕ ಕಡಿಮೆ ಮಾಡುವಲ್ಲಿ ಸಹಕಾರಿ: ಬ್ಲ್ಯಾಕ್ ಕಾಫಿ ಕಡಿಮೆ ಕ್ಯಾಲೋರಿ  ಹೊಂದಿರುತ್ತದೆ. ದೇಹದ ತೂಕ ಕಡಿಮೆ ಮಾಡಲು ಹಾಗೂ ಚಯಾಪಚಯ ವೃದ್ದಿಸಲು ಸಹಕಾರಿಯಾಗಿದೆ.

  • ಹೃದಯದ ಆರೋಗ್ಯಕ್ಕೆ ಸಹಕಾರಿ: ದಿನಕ್ಕೆ ಒಂದು ಅಥವಾ ಎರಡು ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸಿ, ಉರಿಯೂತ ಕಡಿಮೆಗೊಳಿಸುತ್ತದೆ. 

  • ಟೈಪ್ 2 ಮಧುಮೇಹದ ಅಪಾಯ ಕಡಿಮೆ: ಪ್ರತಿದಿನ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

  • ಸಂತೋಷದ ಹಾರ್ಮೋನ್: ಕೆಫೀನ್ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ಧಣಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಪಾರ್ಕಿನ್ಸನ್ಸ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದಿನಕ್ಕೆ ಎಷ್ಟು ಕಾಫಿ ಕುಡಿಯಬೇಕು?

ವಯಸ್ಕರು ದಿನಕ್ಕೆ 1 ರಿಂದ 2 ಕಪ್‌ ಬ್ಲ್ಯಾಕ್ ಕಾಫಿ ಕುಡಿಯುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಹೆಚ್ಚು ಸೇವಿಸಿದರೆ ನಡುಕ, ನಿದ್ರಾಹೀನತೆ ಅಥವಾ ವೇಗದ ಹೃದಯ ಬಡಿತಕ್ಕೆ ಕಾರಣವಾಗಬಹುದು. ಸಂಜೆ ಅಥವಾ ರಾತ್ರಿ ತಡವಾಗಿ ಕಪ್ಪು ಕಾಫಿ ಕುಡಿಯದಿರುವುದು ಸೂಕ್ತ.

ಯಾರು ಜಾಗರೂಕರಾಗಿರಬೇಕು?

ಗರ್ಭಿಣಿ ಮಹಿಳೆಯರು ಕೆಫೀನ್ ಇರುವ ಪಾನೀಯ ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

(ಡಾ. ಅದಿತಿ ಪ್ರಸಾದ್ ಆಪ್ಟೆ, ಹಿರಿಯ ಪೌಷ್ಟಿಕತಜ್ಞ, ಆಸ್ಟರ್ ಆರ್‌ವಿ ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.