ADVERTISEMENT

ರಕ್ತಕ್ಯಾನ್ಸರ್‌: ಮಿಥ್ಯೆ ಅರಿಯಿರಿ..ಡಾ. ಅಭಿಷೇಕ್ ಧೂಧಾತ್ರ ಅವರ ಲೇಖನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 23:01 IST
Last Updated 13 ನವೆಂಬರ್ 2025, 23:01 IST
   

ರಕ್ತಕ್ಯಾನ್ಸರ್‌ ಎಂಬ ಹೆಸರು ಕೇಳಿದಾಕ್ಷಣ ಭೀತಿಗೆ ಒಳಗಾಗುವವರೇ ಹೆಚ್ಚು. ಸದಾ ಆಸ್ಪತ್ರೆಯ ವಾಸ, ಗಂಭೀರವಾದ ಚಿಕಿತ್ಸೆಯ ಕಾರಣದಿಂದ ದೇಹ ಹಾಗೂ ಮನಸ್ಸು ಜರ್ಜರಿತಗೊಳ್ಳುವ ಚಿತ್ರಣವೇ ಕಣ್ಮುಂದೆ ಬರುತ್ತದೆ. ಆದರೆ, ಈ ಗ್ರಹಿಕೆ ಸಂಪೂರ್ಣ ನಿಜವಲ್ಲ ಎಂಬುದನ್ನು ನೆನಪಿಡಿ.

ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾದಂಥ ರಕ್ತದ ಕ್ಯಾನ್ಸರ್‌ಗಳು ಮೂಳೆ, ಮಜ್ಜೆ, ದುಗ್ಧರಸ ಅಥವಾ ಪ್ಲಾಸ್ಮಾ ಕೋಶಗಳಲ್ಲಿ ಬೆಳೆಯುತ್ತವೆ. ಆರೋಗ್ಯಕರ ರಕ್ತವನ್ನು ಉತ್ಪಾದಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ಆಯಾ ಕಾಲಕ್ಕೆ ಪರೀಕ್ಷೆ, ಗುಣಮಟ್ಟದ ಚಿಕಿತ್ಸೆ, ಮೂಳೆ, ಮಜ್ಜೆಯ ಕಸಿ ಹಾಗೂ ಹೊಸ ಇಮ್ಯುನೊಥೆರಪಿಯಂತಹ ಕಾರಣಗಳಿಂದ, ರಕ್ತ
ಕ್ಯಾನ್ಸರ್‌ ಇರುವವರು ಹೆಚ್ಚು ಕಾಲ ಬದುಕುತ್ತಿರುವುದಲ್ಲದೆ ಗುಣಮಟ್ಟದ ಜೀವನ ನಡೆಸುತ್ತಿದ್ದಾರೆ. ಚಿಕಿತ್ಸೆಗಿಂತಲೂ  ರೋಗ ನಿರ್ಣಾಯಕ ಸರಿಯಾದ ಸಮಯಕ್ಕೆ ಆದರೆ, ಅದು ಚಿಕಿತ್ಸೆಯ ಗುಣಮಟ್ಟವನ್ನು ಮತ್ತು ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವಂತೆ ಮಾಡುತ್ತದೆ.

ADVERTISEMENT

ರಕ್ತಕ್ಯಾನ್ಸರ್ ಎಂಬುದು ಅದರ ಪ್ರಕಾರ, ಹಂತ, ವಯಸ್ಸು ಮತ್ತು ಒಟ್ಟಾರೆ ಆರೋಗ್ಯವನ್ನು ಅವಲಂಬಿಸಿರುತ್ತದೆ. ಹಾಗಾಗಿ, ರಕ್ತಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಮೂಳೆ ಮಜ್ಜೆ ಕಸಿಯ ಆಯ್ಕೆ ಮಾತ್ರ ಇರುವುದಿಲ್ಲ. ಇಮ್ಯುನೊಥೆರಪಿ (ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವುದು), ಕಾಂಡಕೋಶ ಕಸಿಯಂಥ ಆಧುನಿಕ ಚಿಕಿತ್ಸಾ ಕ್ರಮಗಳಿವೆ.

ಕಬ್ಬಿಣದ ಅಂಶದ ಕೊರತೆ, ಪೌಷ್ಟಿಕಾಂಶದ ಸಮಸ್ಯೆಗಳು, ದೀರ್ಘಕಾಲದ ಅನಾರೋಗ್ಯದಿಂದಾಗಿ ದೇಹವು ಆರೋಗ್ಯಕರ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ವಿಫಲವಾದಾಗ ಅದನ್ನು ರಕ್ತಹೀನತೆ ಎನ್ನಲಾಗುತ್ತದೆ. ಆದರೆ, ಮೂಳೆ ಮಜ್ಜೆಯಲ್ಲಿ ಅಸಹಜ ರಕ್ತಕಣಗಳು ಅನಿಯಂತ್ರಿತವಾಗಿ ಬೆಳೆದಾಗ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾದಂಥ ರಕ್ತದ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳಬಹುದು. ಮೂಳೆ ಮಜ್ಜೆಯ ಕಾರ್ಯಕ್ಕೆ ಅಡ್ಡಿಯಾಗುವ ರಕ್ತಹೀನತೆಯು ಕೆಲವೊಮ್ಮೆ ರಕ್ತ
ಕ್ಯಾನ್ಸರ್‌ನ ಲಕ್ಷಣವಾಗಬಹುದು.

ರಕ್ತಕ್ಯಾನ್ಸರ್‌ ಆನುವಂಶಿಕವಲ್ಲ. ಅಸಮರ್ಪಕ ಜೀವನಶೈಲಿ, ಮಲಿನಕಾರಕ ಪರಿಸರಕ್ಕೆ ಒಡ್ಡಿಕೊಳ್ಳುವುದು, ಕೋಶಗಳಲ್ಲಿ ಇರಬಹುದಾದ ದೋಷಗಳ ಕಾರಣಕ್ಕೆ ಉಂಟಾಗಬಹುದು. ಕೌಟುಂಬಿಕ ಕ್ಯಾನ್ಸರ್‌ ಇತಿಹಾಸವು ಕ್ಯಾನ್ಸರ್‌ ಬರುವ ಅಪಾಯವನ್ನು ಹೆಚ್ಚಿಸಬಹುದೇ ವಿನಾ ಅದೊಂದೇ ಕಾರಣಕ್ಕೆ ರಕ್ತಕ್ಯಾನ್ಸರ್‌ ಬರುವುದಿಲ್ಲ.

ಲ್ಯುಕೇಮಿಯಾವು ಮಕ್ಕಳಲ್ಲಿ ಅಷ್ಟೇ ಅಲ್ಲದೆ ವಯಸ್ಕರಲ್ಲಿಯೂ ಕಾಣಿಸಿಕೊಳ್ಳಬಹುದು. ವಯಸ್ಸು ಯಾವುದೇ ಇರಲಿ ಆಯಾಸ, ಬಿಟ್ಟು ಬಿಟ್ಟು ಬರುವ ಜ್ವರ, ಸುಲಭವಾಗಿ ಆಗಬಲ್ಲ ಮೂಗೇಟುಗಳು, ಊತದಂಥ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ.

ಲೇಖಕ: ಡಾ. ಅಭಿಷೇಕ್ ಧೂಧಾತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.