ADVERTISEMENT

Breast Milk | ಎದೆಹಾಲು ವಿಷಯುಕ್ತವಾಗಲು ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 12:28 IST
Last Updated 9 ಡಿಸೆಂಬರ್ 2025, 12:28 IST
<div class="paragraphs"><p>ಎದೆಹಾಲು ವಿಷಯುಕ್ತವಾಗಲು ಕಾರಣವೇನು?</p></div>

ಎದೆಹಾಲು ವಿಷಯುಕ್ತವಾಗಲು ಕಾರಣವೇನು?

   

ಚಿತ್ರ: ಗೆಟ್ಟಿ

ಇತ್ತೀಚೆಗೆ ಎದೆಹಾಲು ವಿಷಯುಕ್ತವಾಗುತ್ತಿದೆ ಎಂಬ ವರದಿಗಳು ಬಂದಿವೆ. ಜೀವನ ಶೈಲಿಯ ತ್ವರಿತ ಬದಲಾವಣೆ ಇದಕ್ಕೆ ಕಾರಣವೆಂದು ವರದಿಗಳು ಹೇಳುತ್ತವೆ.

ADVERTISEMENT

‌ಔಷಧಿಗಳ ಸೇವನೆ: ತಾಯಿ ಔಷಧಿಗಳನ್ನು ಸೇವಿಸಿದಾಗ, ಅವು ಹಾಲಿನಲ್ಲಿ ಬೆರೆತು ಶಿಶುವಿಗೆ ಹಾನಿ ಮಾಡಬಹುದು. ಕ್ಯಾನ್ಸರ್ ಚಿಕಿತ್ಸೆಯ ಔಷಧಿ, ಪ್ರತಿ ಜೀವಕ ಔಷಧಿಗಳು ಅಪಾಯಕಾರಿಯಾಗಿವೆ.

ಮದ್ಯಪಾನ ಮತ್ತು ಧೂಮಪಾನ: ಮದ್ಯ ಸೇವನೆ ನೇರವಾಗಿ ಹಾಲಿಗೆ ವರ್ಗಾವಣೆಯಾಗುತ್ತದೆ. ಧೂಮಪಾನದಿಂದ ನಿಕೋಟಿನ್ ಮತ್ತು ಇತರೆ ರಾಸಾಯನಿಕಗಳು ಹಾಲಿನಲ್ಲಿ ಸೇರಿ ಶಿಶುವಿಗೆ ತೀವ್ರ ಹಾನಿ ಮಾಡುತ್ತವೆ.

ಪರಿಸರದ ವಿಷಗಳು: ಕೀಟನಾಶಕ, ಕೈಗಾರಿಕಾ ರಾಸಾಯನಿಕ, ಲೋಹಗಳಾದ ಸೀಸ, ಪಾದರಸ ಹಾಗೂ ಯುರೇನಿಯಂ, ಇವು ತಾಯಿಯ ದೇಹದಲ್ಲಿ ಸಂಗ್ರಹವಾಗಿ ಹಾಲಿನ ಮೂಲಕ ಶಿಶುವನ್ನು ತಲುಪಬಹುದು.

ಸೋಂಕು ಮತ್ತು ರೋಗಗಳು: ತಾಯಿಗೆ ಎಚ್‌ಐವಿ, ಎಚ್‌ಟಿಎಲ್‌ವಿ, ಸಕ್ರಿಯ ಕ್ಷಯರೋಗ, ಚಿಕನ್ ಪಾಕ್ಸ್ ಇತ್ಯಾದಿ ಸೋಂಕುಗಳಿದ್ದರೆ, ರೋಗಕಾರಕಗಳು ಹಾಲಿನ ಮೂಲಕ ಶಿಶುವಿಗೆ ವರ್ಗಾಯಿಸಬಹುದು.

ಆಹಾರ ಮಾಲಿನ್ಯ: ಕೀಟನಾಶಕಯುಕ್ತ ತರಕಾರಿ, ಮಾಲಿನ್ಯಗೊಂಡ ಮೀನು, ಅತಿಯಾದ ಕೆಫೀನ್ ಸೇವನೆ ಹಾಲಿನ ಗುಣಮಟ್ಟವನ್ನು ಕುಂದಿಸುತ್ತದೆ.

ಮೊಲೆ ತೊಟ್ಟಿನ ಸೋಂಕು: ಮಾಸ್ಟೈಟಿಸ್‌ ಅಥವಾ ಸ್ತನದ ಸೋಂಕು ಇದ್ದಾಗ, ಬ್ಯಾಕ್ಟಿರಿಯಾ ಹಾಲಿನಲ್ಲಿ ಬೆರೆತು ವಿಷಯುಕ್ತವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.