ಚಿತ್ರ ಕೃಪೆ: ಪಿಟಿಐ
ನವದೆಹಲಿ: ಆಧುನಿಕ ಜೀವನಶೈಲಿಯಲ್ಲಿ ಕ್ಯಾನ್ಸರ್ ಎಂಬ ರೋಗವು ಸರ್ವೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಬಡವ, ಬಲ್ಲಿದ ಹಾಗೂ ಆ ದೇಶ, ಈ ದೇಶ ಎಂಬುದಿಲ್ಲ. ಹೀಗಿದ್ದರೂ ಭಾರತದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಪ್ರಮಾಣ ಈಶಾನ್ಯ ಭಾಗದಲ್ಲೇ ಹೆಚ್ಚು ಎಂದು ಅಧ್ಯಯನವೊಂದು ತನ್ನ ವರದಿಯಲ್ಲಿ ತಿಳಿಸಿದೆ.
ಈಶಾನ್ಯ ಭಾರತದ ಐಜ್ವಾಲ್, ಪಾಪುಂಪರೆ, ಕಾಮ್ರೂಪ ಅರ್ಬನ್, ಮಿಜೋರಾಂನಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪತ್ತೆಯಾಗಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ದಾಖಲೆಗಳ ಪ್ರಕಾರ ಭಾರತದಲ್ಲಿ 2015 ರಿಂದ 2019 ರವರೆಗೆ 7.08 ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 2.06 ಲಕ್ಷಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ.
ಕ್ಯಾನ್ಸರ್ ಪತ್ತೆಯಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಿದ್ದರೂ, ಪುರುಷರು ಹೆಚ್ಚು ಮೃತಪಟ್ಟಿದ್ದಾರೆ ಎಂದು ಅಧ್ಯಯನ ಹೇಳಿದೆ.
ಭಾರತದಲ್ಲಿ ಮೊದಲು ಕ್ಯಾನ್ಸರ್ ಶೇ 11. ರಷ್ಟಿತ್ತು. ಆದರೆ ಇತ್ತಿಚೀನ ವರ್ಷಗಳಲ್ಲಿ ಮಿಜೋರಾಂನಲ್ಲಿ ಪುರುಷರಲ್ಲಿ ಶೇ. 21.1 ಮತ್ತು ಮಹಿಳೆಯರಲ್ಲಿ ಶೇ 18.9 ರಷ್ಟಿದೆ ಎಂದು AAIR ವರದಿ ಮಾಡಿದೆ.
ಪುರುಷರಲ್ಲಿ ಬಾಯಿ, ಶ್ವಾಸಕೋಶ, ಪ್ರಾಸ್ಟೇಟ್‌ಗಳಲ್ಲಿ ಕ್ಯಾನ್ಸರ್ ಕಂಡುಬಂದರೆ, ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಅಂಡಾಶಯಗಳಲ್ಲಿ ಹೆಚ್ಚು ಕಂಡುಬರುವುದೆಂದು ಅಧ್ಯಯನ ಹೇಳಿದೆ.
ವಿಶಾಖಪಟ್ಟಣ, ಬೆಂಗಳೂರು, ಮಲಬಾರ್, ಕೊಲ್ಲಂ, ತಿರುವನಂತಪುರಂ, ಚೆನ್ನೈ, ದೆಹಲಿ, ಹಾಗೂ ಶ್ರೀನಗರದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಿದ್ದರೇ, ಅಹಮದಾಬಾದ್,ಭೋಪಾಲ್, ನಾಗ್ಪುರ,ಬಾರ್ಶಿ ಗ್ರಾಮೀಣ, ಮುಂಬೈ, ಔರಂಗಾಬಾದ್, ಉಸ್ಮಾನಾಬಾದ್ ಮತ್ತು ಬೀಡ್, ಪುಣೆ, ಸಿಂಧುದುರ್ಗ,ಪ್ರಯಾಗರಾಜ್, ವಾರಣಾಸಿಯಲ್ಲಿ ಬಾಯಿಯ ಕ್ಯಾನ್ಸರ್ ಪತ್ತೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಕ್ಯಾನ್ಸರ್ ಪ್ರಕರಣದಲ್ಲಿ ಭಾರತವು ಏಷ್ಯಾದಲ್ಲಿ ಎರಡನೇ ಸ್ಥಾನ, ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ.
ಕೆಲವು ವರ್ಷಗಳಿಂದ ಆಗ್ನೇಯ ಏಷ್ಯಾ ಭಾಗದಲ್ಲಿ ಪುರುಷ– ಮಹಿಳೆ ಸೇರಿ 20 ಲಕ್ಷಕ್ಕೂ ಅಧಿಕ ಕ್ಯಾನ್ಸರ್ ಪತ್ತೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಸಂಶೋಧನೆ ಹೇಳಿದೆ.
ಪ್ರತಿವರ್ಷ ವಿಶ್ವದಾದ್ಯಂತ 2 ಕೋಟಿಗೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಕ್ರಮಗಳು
ತಂಬಾಕು ಮತ್ತು ಮದ್ಯ ಸೇವನೆಯಿಂದ ಕ್ಯಾನ್ಸರ್ ಪತ್ತೆಯಾಗಿರುವುದರಿಂದ ಇವುಗಳ ಬಗ್ಗೆ ಜಾಗೃತಿ ಹಾಗೂ ವ್ಯಾಪಕ ಶಿಕ್ಷಣ ನೀಡುವುದು.
ಕ್ಯಾನ್ಸರ್ ಪತ್ತೆಯಾದ ಆರಂಭದಿದಂಲೇ ನಿಯಂತ್ರಿಸಲು ಪ್ರಯತ್ನಿಸುವುದು.
ಕ್ಯಾನ್ಸರ್ ನಿಯಂತ್ರಣಕ್ಕೆ ಬೇಕಾದ ಸೇವೆಗಳನ್ನು ಒದಗಿಸುವುದು
ಗುಣಮಟ್ಟದ ಔಷಧಿಗಳನ್ನು ಕಡಿಮೆ ದರದಲ್ಲಿ ನೀಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.