ADVERTISEMENT

ನಿಮ್ಮ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ: ಆರಂಭಿಕ ಪೋಷಣೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 10:18 IST
Last Updated 9 ಅಕ್ಟೋಬರ್ 2025, 10:18 IST
<div class="paragraphs"><p>ಎಐಚಿತ್ರ</p></div>

ಎಐಚಿತ್ರ

   

ಮನುಷ್ಯರ ಮನೋಲೈಂಗಿಕವು 5 ಹಂತಗಳಿಂದ ಕೂಡಿರುತ್ತದೆ ಎಂದು ಫ್ರಾಯ್ಡ್ ಅವರ ಮನೋ ವಿಶ್ಲೇಷಣಾ ಸಿದ್ಧಾಂತ ತಿಳಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸನದಲ್ಲಿ ನಮ್ಮ ಗುಣಲಕ್ಷಣ, ಹಾವಭಾವ ಹಾಗೂ ವರ್ತನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮನಃಶಾಸ್ತ್ರ ಹೇಳುತ್ತದೆ.

ಫ್ರಾಯ್ಡ್ ಅವರ ಪ್ರಕಾರ 5 ಹಂತಗಳಲ್ಲಿ ವ್ಯಕ್ತಿತ್ವ ರೂಪುಗೊಳ್ಳುವುದನ್ನು ನಾವು ಕಾಣಬಹುದು. ಅದರಲ್ಲಿ, ಮೊದಲನೇಯದು ಬಾಯಿಯ ಹಂತವಾಗಿದೆ. ಈ ಹಂತದಲ್ಲಿ ಆಗುವ  ಬದಲಾವಣೆಗಳು ಏನು? ಎಂಬುದನ್ನು ತಿಳಿಯೋಣ ಬನ್ನಿ.

ADVERTISEMENT

ಬಾಯಿಯ ಹಂತ ಜನನದಿಂದ ಹಲವು ವರ್ಷಗಳ ಕಾಲ ಇರುತ್ತದೆ ಎಂದು ಮನಃಶಾಸ್ತ್ರ ಹೇಳತ್ತದೆ. ಈ ಸಮಯದಲ್ಲಿ ಮಗುವಿನ ಮುಖ್ಯ ಆಸಕ್ತಿ ಕೇಂದ್ರ ಬಾಯಿ. ಮಗು ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಚಪ್ಪರಿಸುವುದು, ಹಾಲು ಸವಿಯುವುದು, ಬೊಟ್ಟನ್ನು ಚೀಪುವುದು ಹೀಗೆ ಮುಂತಾದ ಕ್ರಿಯೆಗಳ ಮೂಲಕ ಮಗುವಿನ ಕಲಿಕೆ ಆರಂಭವಾಗುತ್ತದೆ.

ತಾಯಿಯ ಎದೆ ಹಾಲು ಸವಿಯುವುದು ಮಗುವಿನ ಮೊದಲ ಸಂತೋಷದ ಅನುಭವವಾಗಿರುತ್ತದೆ. ಇದು ಮಗುವಿನಲ್ಲಿ ಭದ್ರತೆ ಮತ್ತು ಪ್ರೀತಿಯ ಭಾವನೆ ಬೇರುರುವಂತೆ ಮಾಡುತ್ತದೆ. ಮಗು ತಾಯಿಯಿಂದ ಭಾವನಾತ್ಮಕ ತೃಪ್ತಿಯನ್ನು ಪಡೆಯುತ್ತದೆ. ಒಂದು ವೇಳೆ ತಾಯಿಯಿಂದ ಕಾಳಜಿಯ ಕೊರತೆ ಅಥವಾ ಹಾಲು ನೀಡುವಲ್ಲಿ ಅಸಮರ್ಪಕತೆ ಕಂಡು ಬಂದರೆ ಮಗುವಿನಲ್ಲಿ ಅತೃಪ್ತಿ ಭಾವ ಉಂಟಾಗಬಹುದು. ಇಂತಹ ಅತೃಪ್ತತೆ ಮಗುವಿನ  ವ್ಯಕ್ತಿತ್ವದಲ್ಲಿ ಬಾಯಿಗೆ ಸಂಬಂಧಿಸಿದ ವರ್ತನೆಗಳಿಗೆ ಪೂರಕವಾಗುತ್ತದೆ ಎಂದು ಮನಃಶಾಸ್ತ್ರ ಹೇಳುತ್ತದೆ. 

ಈ ಹಂತದಲ್ಲಿ ಮಕ್ಕಳಲ್ಲಿ ಆಗುವ ಮಾನಸಿಕ ಬದಲಾವಣೆಗಳೇನು? 

ಈ ಹಂತದಲ್ಲಿ ತೃಪ್ತಿ ಪಡೆಯದ ಮಗುವು ಮುಂದಿನ ಹಂತದಲ್ಲಿ ಹೆಚ್ಚು ಆಹಾರ ಸೇವಿಸುವುದು, ಧೂಮಪಾನ ಮಾಡುವುದು, ಅತಿಯಾಗಿ ಮಾತನಾಡುವುದು, ಒಟ್ಟಾರೆ ಬಾಯಿಗೆ ಸಂಬಂಧಿತ ಚಟುವಟಿಕೆಯ ಮೇಲೆ ಅವಲಂಬನೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ಹಂತದಲ್ಲಿ ತೃಪ್ತಿ ಪಡೆದ ಮಗು ಮುಂದಿನ ಹಂತದಲ್ಲಿ ಭಾವನಾತ್ಮಕವಾಗಿ ಸಮತೋಲನ ಹಾಗೂ ನಂಬಿಕೆಯಿಂದ ಕೂಡಿದ ವ್ಯಕ್ತಿತ್ವ ವೃದ್ದಿಯಾಗುತ್ತದೆ. ಆದ್ದರಿಂದ ಬಾಯಿಯ ಹಂತವು ವ್ಯಕ್ತಿಯ ವ್ಯಕ್ತಿತ್ವದ ಮೊದಲ ನೆಲೆಯಾಗಿ ಪರಿಗಣಿಸಲಾಗಿದೆ.

ಈ ಹಂತದಲ್ಲಿ ತಾಯಿಯ ಪ್ರೀತಿ, ಕಾಳಜಿ, ಭಾವನಾತ್ಮಕ ಸ್ಪರ್ಶ, ಮಗುವಿನ ಆತ್ಮವಿಶ್ವಾಸ, ನಂಬಿಕೆ ಮತ್ತು ಭದ್ರತೆಯ ಭಾವನೆಗಳು ಬೆಳೆಯಲು ಸಹಾಯ ಮಾಡುತ್ತದೆ. ‌

ಈ ಹಂತದಲ್ಲಿ ಅತೃಪ್ತಿ ಅಥವಾ ಅತಿಯಾದ ತೃಪ್ತಿ ಪಡೆದ ಮಗು ಮುಂದಿನ ಹಂತದಲ್ಲಿ ಅಸಾಮಾನ್ಯ ವರ್ತನೆಗಳು ಕಾಣಿಸಿಕೊಳ್ಳುತ್ತವೆ.

ಮುಂದಿನ ಲೇಖನದಲ್ಲಿ ಈ ಹಂತದಲ್ಲಿ ಅತೃಪ್ತಗೊಂಡ ಮಗುವಿನ ಜೀವನದಲ್ಲಿ ಕಂಡುಬರುವಂತಹ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.