ADVERTISEMENT

ಔಷಧಕ್ಕೇ ಸಡ್ಡು ಹೊಡೆಯುವ ಮಲೇರಿಯಾಕಾರಕ ಪರಾವಲಂಬಿ ಆಫ್ರಿಕಾದಲ್ಲಿ ಪತ್ತೆ

ಐಎಎನ್ಎಸ್
Published 25 ಸೆಪ್ಟೆಂಬರ್ 2021, 15:23 IST
Last Updated 25 ಸೆಪ್ಟೆಂಬರ್ 2021, 15:23 IST
ಮಲೇರಿಯಾ ಔಷಧ
ಮಲೇರಿಯಾ ಔಷಧ    

ಲಂಡನ್‌: ಮಲೇರಿಯಾ ಔಷಧಿಯ ಶಕ್ತಿಯನ್ನು ಕುಂದಿಸುವ ಪರಾವಲಂಬಿಗಳು ಆಫ್ರಿಕಾದಲ್ಲಿ ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಮಲೇರಿಯಾಕ್ಕೆ ಮೊದಲ ಹಂತದಲ್ಲಿ ಚಿಕಿತ್ಸಕವಾಗಿ ನೀಡಲಾಗುವ ಆರ್ಟೆಮಿಸಿನಿನ್ ನ ಉತ್ಪನ್ನಗಳಿಗೆ ಮಲೇರಿಯಾ ಕಾರಕ ಪರಾವಲಂಬಿ ‘ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್’ ಪ್ರತಿರೋಧ ಸೃಷ್ಟಿಸಿಕೊಂಡಿದೆ ಎಂದು ತಜ್ಞರ ತಂಡವೊಂದು ಹೇಳಿದೆ. ತಂಡವು ಅಧ್ಯಯನ ವರದಿಯನ್ನು ‘ನ್ಯೂ ಇಂಗ್ಲೇಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌’ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಔಷಧ ನಿರೋಧಕ ಪರಾವಲಂಬಿ ತಳಿಗಳಿಂದಾಗಿ ಆಫ್ರಿಕಾದಲ್ಲಿಯೂ ಮಲೇರಿಯಾ ಕಾರಕ ಪರಾವಲಂಬಿಗಳಲ್ಲಿ ಪ್ರತಿರೋಧ ಗುಣ ಅಭಿವೃದ್ಧಿಯಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ADVERTISEMENT

2017 ರಿಂದ 2019 ರವರೆಗೆ ಉಗಾಂಡಾದಲ್ಲಿ ಈ ಅಧ್ಯಯನ ನಡೆದಿದೆ. ಮಲೇರಿಯಾ ಕಾಯಿಲೆಗೆ ಒಳಗಾಗಿ, ಔಷಧ ನೀಡಲಾದ 240 ಜನರ ಮೇಲೆ ಈ ಅಧ್ಯಯನ ಕೇಂದ್ರೀಕರಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.