
ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಪಟಾಕಿಗಳ ಭರಾಟೆ ಶುರುವಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹುತೇಕರು ಪಟಾಕಿ ಹಚ್ಚಲು ಇಷ್ಟಪಡುತ್ತಾರೆ. ಆದರೆ, ಪಟಾಕಿ ಸಿಡಿಸುವಾಗ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಳ್ಳುತ್ತಾರೆ. ಪಟಾಕಿಯಿಂದ ಗಾಯಗೊಂಡರೆ ತಕ್ಷಣ ಏನು ಮಾಡಬೇಕು ಎಂಬುದನ್ನು ವೈದ್ಯರಾದ ಡಾ.ರಾಜೀವ್ ಜೈನ್ ಸಲಹೆ ನೀಡಿದ್ದಾರೆ.
ಸುಟ್ಟ ಜಾಗವನ್ನು ತಂಪಾಗಿಸಿ:
ಮೊದಲನೇಯದಾಗಿ ಹೆಚ್ಚು ಅಪಾಯಕಾರಿ ಪಟಾಕಿಗಳಿಂದ ದೂರವಿರಿ. ಸಾಧ್ಯವಾದಷ್ಟು ಕಡಿಮೆ ಸ್ಪೋಟಕವುಳ್ಳ ಪಟಾಕಿಗಳನ್ನು ಬಳಸುವುದು ಉತ್ತಮವಾಗಿದೆ.
ಒಂದು ವೇಳೆ ಪಟಾಕಿ ಸುಟ್ಟರೇ ಆ ಸ್ಥಳವನ್ನು ಒದ್ದೆ ಬಟ್ಟೆಯಿಂದ 10 ರಿಂದ 15 ನಿಮಿಷಗಳ ವರೆಗೆ ತಂಪು ಮಾಡಿ.
ಟೂಥ್ ಪೇಸ್ಟ್, ಬೆಣ್ಣೆ ಅಥವಾ ಪೌಡರ್‌ಗಳಂತಹ ಮನೆ ಮದ್ದುಗಳನ್ನು ಬಳಸಬೇಡಿ. ಅವು ಬಿಸಿಯನ್ನು ಹಿಡಿದಿಟ್ಟುಕೊಂಡು ಸೋಂಕಿಗೆ ಕಾರಣವಾಗಬಹುದು.
ಗಾಯ ತಂಪಾದ ನಂತರ ಆ ಜಾಗವನ್ನು ತೆಳು ಬಟ್ಟೆ ಅಥವಾ ಬ್ಯಾಂಡೇಜ್‌ನಿಂದ ಸುತ್ತುವುದರಿಂದ ನೋವು ಕಡಿಮೆಯಾಗುತ್ತದೆ.
ಕಣ್ಣಿನ ಗಾಯಗಳಿಗೆ ಹೆಚ್ಚಿನ ಕಾಳಜಿ ವಹಿಸಿ:
ಪಟಾಕಿ ಸಿಡಿಸುವಾಗ ಕಣ್ಣಿಗೆ ಪಟಾಕಿಯ ಕಿಡಿ ಅಥವಾ ರಾಸಾಯನಿಕಗಳು ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿ.
ಪಟಾಕಿ ಕಣ್ಣಿಗೆ ಸಿಡಿದರೆ ಸ್ವಚ್ಛ ನೀರು ಅಥವಾ ಸಲೈನ್‌ನಿಂದ ಮೃದುವಾಗಿ ತೊಳೆಯಿರಿ.
ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ಹಿಂಡುವುದು ಅಥವಾ ಕಣ್ಣಿನೊಳಗೆ ಸೇರಿಸುವ ವಸ್ತುವನ್ನು ಹೊರ ತೆಗೆಯಲು ಪ್ರಯತ್ನ ಮಾಡದಿರಿ.
ಎರಡೂ ಕಣ್ಣುಗಳನ್ನು ನಿಧನವಾಗಿ ಮುಚ್ಚಿಕೊಂಡು ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವುದು ಒಳ್ಳೆಯದು.
ಸಾಧ್ಯವಾದರೇ ಪಟಾಕಿ ಹಚ್ಚುವಾಗ ಒಂದು ಬಕೆಟ್ ನೀರು ಅಥವಾ ಮಣ್ಣನ್ನು ಹತ್ತಿರದಲ್ಲಿರಿಸಿಕೊಳ್ಳುವುದು ಉತ್ತಮ. ಸರಳ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ದೂರದಿಂದ ಪಟಾಕಿಗಳನ್ನು ಹಚ್ಚಿ.
(ಲೇಖಕರು: ಡಾ.ರಾಜೀವ್ ಜೈನ್, ಎಚ್.ಒಡಿ. ಮತ್ತು ಕನ್ಸಲೆಂಟ್, ಎಮರ್ಜೆನ್ಸಿ ಮೆಡಿಸಿನ್, ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ, ಕೆಂಗೇರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.