ADVERTISEMENT

ಟೆಕ್ಕಿಗಳಲ್ಲಿ ಹೆಚ್ಚುತ್ತಿರುವ ಫಿಟ್ನೆಸ್‌ ಕ್ರೇಜ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 6:02 IST
Last Updated 9 ಏಪ್ರಿಲ್ 2019, 6:02 IST
   

ರೀಬಾಕ್‌ ಕಂಪನಿ ನಡೆಸಿದ ಎರಡನೇ ‘ಫಿಟ್ನೆಸ್‌ ಇಂಡಿಯಾ’ ಸಮೀಕ್ಷೆಯಲ್ಲಿ ಬೆಂಗಳೂರು ಆರನೇ ಸ್ಥಾನ ಪಡೆದಿದೆ. 2017ರಲ್ಲಿ 6.34ರಷ್ಟಿದ್ದ ಬೆಂಗಳೂರು ಫಿಟ್ನೆಸ್‌ ಸೂಚ್ಯಂಕಈ ಬಾರಿ 6.43 ಕ್ಕೆ ಏರಿದೆ. ಬೆಂಗಳೂರಿನ ಯುವಕರಲ್ಲಿ ಫಿಟ್ನೆಸ್‌ ಕುರಿತು ಆಸಕ್ತಿ ಹೆಚ್ಚುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ, ಪೌಷ್ಠಿಕ ಮತ್ತು ಸಮತೋಲಿತ ಆಹಾರ ಸೇವನೆ, ದೈಹಿಕ ಕಸರತ್ತಿಗಾಗಿ ಮೀಸಲಿಡುವ ಅವಧಿಯನ್ನು ಪರಿಗಣಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ಬೆಂಗಳೂರಿಗರಲ್ಲಿ ಶೇ 90ರಷ್ಟುಐ.ಟಿ ಸಿಬ್ಬಂದಿ ಫಿಟ್ನೆಸ್‌ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ.ಕೋಲ್ಕತ್ತ, ಬೆಂಗಳೂರು ಮತ್ತು ಚೆನ್ನೈ ನಿವಾಸಿಗಳು ಆರೋಗ್ಯದ ದೃಷ್ಟಿಯಿಂದ ಹೋಟೆಲ್‌ ಊಟಕ್ಕಿಂತ ಮನೆಯೂಟಕ್ಕೆ ಆದ್ಯತೆ ನೀಡುತ್ತಾರೆ. ಮಧ್ಯಾಹ್ನದ ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತಾರೆ. ಹೋಟೆಲ್‌ ತಿಂಡಿ, ತಿನಿಸುಗಳನ್ನು ತಿನ್ನುವುದರಲ್ಲಿ ದೆಹಲಿ ಮತ್ತು ಮುಂಬೈಕರ್‌ಗಳು ಮುಂದಿದ್ದಾರೆ.

* ಶೇ 85ರಷ್ಟು ಬೆಂಗಳೂರು ವಾಸಿಗಳು ಫಿಟ್ನೆಸ್ ಬಗ್ಗೆ ಯೂಟ್ಯೂಬ್‌ ಅವಲಂಬಿಸಿದ್ದಾರೆ.

ADVERTISEMENT

* ಫಿಟ್ನೆಸ್‌ ಉತ್ಪನ್ನಗಳಿಗೂ ಬೆಂಗಳೂರು ಉತ್ತಮ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

* ಶೇ 81 ರಷ್ಟು ಬೆಂಗಳೂರಿಗರು ಯೋಗ ಮ್ಯಾಟ್‌ ಖರೀದಿಸಲು ಮುಂದಾಗಿದ್ದಾರೆ

**

ಫಿಟ್‌ ಸ್ಕೋರ್‌

*ಸಮೀಕ್ಷೆಯಲ್ಲಿ 9 ಫಿಟ್ನೆಸ್‌ ಸೂಚ್ಯಂಕಗಳೊಂದಿಗೆ ಕೋಲ್ಕತ್ತ ಮೊದಲ ಸ್ಥಾನದಲ್ಲಿದೆ.

* ದೆಹಲಿ (7.99) ಮುಂಬೈ (7.64) ಚಂಡಿಗಡ (6.60), ಹೈದರಾಬಾದ್‌ (6.60) ಬೆಂಗಳೂರು (6.43), ಚೆನ್ನೈ (6.02), ಪುಣೆ (5.73) ಮತ್ತು ಅಹಮದಾಬಾದ್‌ (5.32) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

* ಬೆಂಗಳೂರು ಆರನೇ ಸ್ಥಾನದಲ್ಲಿರೂ ಕಳೆದ ಬಾರಿಗಿಂತ ಹೆಚ್ಚಿನ ಅಂಕ ಗಳಿಸಿದೆ. ಪುಣೆ ಮತ್ತು ಚಂಡಿಗಡದ ಅಂಕಗಳು ಮಾತ್ರ ಕುಸಿದಿವೆ.

* ಒಂಬತ್ತು ಮಹಾನಗರಗಳ 18–35 ವರ್ಷ ವಯೋಮಾನದ 2200 ರೀಬಾಕ್‌ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಫಿಟ್ನೆಸ್‌ ಮಾರ್ಗಗಳು

ವಾಕಿಂಗ್‌, ಜಾಗಿಂಗ್‌,ರನ್ನಿಂಗ್‌, ಯೋಗ, ಜಿಮ್‌

**
ಮಹಿಳೆಯರು ಮುಂದೆ

ಮಹಾನಗರಗಳ ಮಹಿಳೆಯರು ಫಿಟ್ನೆಸ್‌ ಬಗ್ಗೆ ಭಾರಿ ವ್ಯಾಮೋಹ ಹೊಂದಿದ್ದಾರೆ. ಶೇ 45ರಷ್ಟು ಮಹಿಳೆಯರು ಕರಾಟೆ, ಜುಡೋ, ಬಾಕ್ಸಿಂಗ್‌ನಂತಹ ಆತ್ಮರಕ್ಷಣೆ ಕಲೆಗಳನ್ನು ಕಲಿಯುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹಿಳೆಯರು ಕೂಡ ಜಿಮ್‌ನಲ್ಲಿ ವರ್ಕೌಟ್‌ ಮೂಲಕ ಬೆವರು ಹರಿಸುತ್ತಿದ್ದಾರೆ. ಸುಂದರವಾಗಿ ಕಾಣಿಸಿಕೊಳ್ಳಲು ಮತ್ತು ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಶೇ 68ರಷ್ಟು ಮಹಿಳೆಯರು ಜಿಮ್‌ಗಳ ಮೊರೆ ಹೋಗಿದ್ದಾರೆ.

ಫಿಟ್‌ ಇಂಡಿಯಾ ಸರ್ವೆ 2.0

ದೇಶದ 9 ಮಹಾನಗರ ವಾಸಿಗಳು ಆರೋಗ್ಯಕರ ಜೀವನಶೈಲಿಗೆ ಮೊರೆ ಹೋಗಿದ್ದಾರೆ. ಫಿಟ್ನೆಸ್‌ಗಾಗಿ ವಾಕಿಂಗ್‌, ಜಾಗಿಂಗ್‌ ಮತ್ತು ರನ್ನಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ53ರಷ್ಟು ಜನರು ಕನಿಷ್ಠ ಐದು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

84% ವಾಕಿಂಗ್‌

64% ಜಾಗಿಂಗ್‌

63% ರನ್ನಿಂಗ್‌

56% ಯೋಗ

53% ಜಿಮ್‌

40%ರಷ್ಟು ಜನರು ವರ್ಕಔಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಹೋಟೆಲ್‌ ತಿಂಡಿ, ತಿನಿಸು

ದೆಹಲಿ, ಮುಂಬೈ ನಿವಾಸಿಗಳು ಪ್ರತಿನಿತ್ಯ ಮನೆಯೂಟಕ್ಕಿಂತ ಹೊರಗಿನ ಹೋಟೆಲ್‌ ಊಟವನ್ನು ಹೆಚ್ಚಾಗಿ ಸೇವಿಸುತ್ತಾರೆ.

ಮನೆಯೂಟ

ಕೋಲ್ಕತ್ತ, ಬೆಂಗಳೂರು ಮತ್ತು ಚೆನ್ನೈ ನಿವಾಸಿಗಳು ಮಧ್ಯಾಹ್ನದ ಊಟಕ್ಕೆ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರ ಇಷ್ಟಪಡುತ್ತಾರೆ.

* * *

ಫಿಟ್ನೆಸ್‌ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ

89% - ಆರೋಗ್ಯ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಪೋಸ್ಟಿಂಗ್‌ಗಳಿಗೆ ಇನ್‌ಸ್ಟಾಗ್ರಾಂಗಿಂತ (ಶೇ 68) ಹೆಚ್ಚಾಗಿ ಫೇಸ್‌ಬುಕ್‌ ಬಳಸುವ ಬಳಕೆದಾರರ ಸಂಖ್ಯೆ

83% - ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಯೂಟ್ಯೂಬ್‌ ಜಾಲಾಡುವ ಜನರು

52% - ಫಿಟ್ನೆಸ್‌ಗೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳಿಂಗಿಂತ ಗ್ರಾಹಕರ ಮೇಲೆ ಪ್ರಭಾವ ಬೀರುವ ಫಿಟ್ನೆಸ್ ಬ್ಲಾಗರ್‌ಗಳು

73 % -ಆಕರ್ಷಕವಾಗಿ ಕಾಣಲು ದೈಹಿಕ ಕಸತ್ತಿನ ಮೊರೆ ಹೋದವರು

23–31 - ಫಿಟ್ನೆಸ್‌ ಸಾಧನಗಳನ್ನು ಹೆಚ್ಚಾಗಿ ಬಳಸುವವರ ವಯೋಮಾನ

67% - ಕೆಲಸದ ಸ್ಥಳಗಳಲ್ಲಿ ಫಿಟ್ನೆಸ್‌ ಸಾಧನ ಬಳಸುವ ಜನರು

* * *

ಮಹಿಳಾ ಶಕ್ತಿ

45% - ಸ್ವ ಆತ್ಮರಕ್ಷಣೆ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರು ಕಳೆದ ಹಲವು ವರ್ಷಗಳಿಂದ ಮಹಿಳೆಯರಲ್ಲಿ ಜಿಮ್‌ ವರ್ಕೌಟ್‌ ಹೆಚ್ಚಾಗುತ್ತಿದೆ

68% ಸುಂದರವಾಗಿ ಕಾಣಲು ವ್ಯಾಯಾಮ ಮತ್ತಿತರ ದೈಹಿಕ ಕಸರತ್ತಿನಲ್ಲಿ ತೊಡಗಿಕೊಂಡಿರುವ ಮಹಿಳೆಯರು

**

ದೇಶದಲ್ಲಿ ಅದರಲ್ಲೂ ಮಹಾನಗರಗಳ ಯುವ ಜನಾಂಗದಲ್ಲಿ ಫಿಟ್ನೆಸ್‌ ಜಾಗೃತಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಜನರ ಈ ಮನೋಭಾವಕ್ಕೆ ರೀಬಾಕ್‌ ಕೈಜೋಡಿಸಿದೆ. ದೇಶದ ಯುವ ಜನಾಂಗ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎಂದು ಈ ವರ್ಷದ ಸಮೀಕ್ಷೆ ಸೂಚಿಸುತ್ತದೆ
– ಸುನೀಲ್‌ ಗುಪ್ತಾ, ಬ್ರ್ಯಾಂಡ್‌ ನಿರ್ದೇಶಕ, ರೀಬಾಕ್‌ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.