ADVERTISEMENT

ಒತ್ತಡ ನಿರ್ವಹಣೆಗೆ ಈ 5 ಸರಳ ಅಭ್ಯಾಸಗಳನ್ನು ಪಾಲಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 11:50 IST
Last Updated 13 ಫೆಬ್ರುವರಿ 2026, 11:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ; ಗೆಟ್ಟಿ

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯವಾಗಿದೆ. ಒತ್ತಡ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಎರಡರ ಮೇಲೂ ವ್ಯತಿರಿಕ್ತ ಪ್ರಭಾವ ಬೀರುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ. ದೀರ್ಘಕಾಲದ ಒತ್ತಡವು ಖಿನ್ನತೆ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಇತರೆ ವ್ಯಾದಿಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವು ಉತ್ತಮ ಅಭ್ಯಾಸಗಳನ್ನು ಪಾಲಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ADVERTISEMENT

ಸಾಂದರ್ಭಿಕ ಚಿತ್ರ

ಧ್ಯಾನ

ಪ್ರತಿ ದಿನ 10 ರಿಂದ 20 ನಿಮಿಷ ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ದೀರ್ಘ ಉಸಿರಾಟ ದೇಹದ ಭಾಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯ ಜತೆಗೆ ತಾಳ್ಮೆ ಹಾಗೂ ಸಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ. ಈ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಕೆಲಸದಲ್ಲಿ ಬದ್ಧತೆ ಹೆಚ್ಚಿಸುತ್ತದೆ. 

ಸಾಂದರ್ಭಿಕ ಚಿತ್ರ

ದೈಹಿಕ ವ್ಯಾಯಾಮ

ಪ್ರತಿ ದಿನ ದೇಹಕ್ಕೆ ವ್ಯಾಯಾಮ ಮಾಡುವುದು ಅಗತ್ಯ. ವ್ಯಾಯಾಮ ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಲಘು ನಡಿಗೆ, ಯೋಗ ಅಥವಾ ದೈಹಿಕ ಶ್ರಮವೆನಿಸುವ ಕೆಲಸವನ್ನು ನಿತ್ಯ 30 ನಿಮಿಷ ಮಾಡಿದರೆ ಒತ್ತಡವನ್ನು ನಿಭಾಯಿಸಬಹುದು. ದೈಹಿಕ ಚಟುವಟಿಕೆಗಳು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. 

ಸಾಂದರ್ಭಿಕ ಚಿತ್ರ

 ಸಮಯ ನಿರ್ವಹಣೆ 

ಸಮಯ ನಿರ್ವಹಣೆ ಮಾಡುವ ಒತ್ತಡವೇ ನಮ್ಮನ್ನು ಕಿರಿಕಿರಿ ಉಂಟಾಗುವಂತೆ ಮಾಡುತ್ತದೆ. ಪ್ರತಿ ದಿನ ಮಾಡಬೇಕಾದ ಒಂದು ಸಣ್ಣ ಪಟ್ಟಿ ಮಾಡಿಕೊಂಡು, ಆದ್ಯತೆ ಮೇರೆಗೆ ಆ ಕೆಲಸಗಳನ್ನು ಮುಗಿಸಿ. ನಿಗದಿತ ಗಡುವುಗಳೊಂದಿಗೆ ಕೆಲಸ ಮಾಡಿ ಮುಗಿಸಲು ಇದು ಸಹಕಾರಿಯಾಗುತ್ತದೆ. 

ಸಾಂದರ್ಭಿಕ ಚಿತ್ರ

ಆರೋಗ್ಯಕರ ಜೀವನಶೈಲಿ

ನಮ್ಮ ಜೀವನ ಶೈಲಿಯೂ ಒತ್ತಡಕ್ಕೆ ಕಾರಣವಾಗಬಹುದು. ಜಂಕ್‌ಪುಡ್‌, ಹೆಚ್ಚು ಎಣ್ಣೆ ಭರಿತ ಆಹಾರ ಪ‍ದಾರ್ಥಗಳ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆದ್ದರಿಂದ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸುವುದರಿಂದ ದೇಹ ಹಾಗೂ ಮನಸ್ಸು ಎರಡನ್ನು ಆರೋಗ್ಯಕರವಾಗಿಡಬಹುದು. ಜತೆಗೆ ಸಾಕಷ್ಟು ನಿದ್ದೆಯೂ ಅಗತ್ಯ.

ಸಾಂದರ್ಭಿಕ ಚಿತ್ರ

ತಜ್ಞರೊಂದಿಗೆ ಆಪ್ತಸಮಾಲೋಚನೆ

ಅತಿಯಾದ ಒತ್ತಡ ಅಥವಾ ಮಾನಸಿಕ ಅಶಾಂತಿ ಹೆಚ್ಚಾದರೆ ತಜ್ಞರ ಆಪ್ತಸಮಾಲೋಚನೆ ಪಡೆಯಬಹುದು. ಇದು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜತೆಗೆ ಅಗತ್ಯವಿದ್ದರೆ ಚಿಕಿತ್ಸೆಯನ್ನೂ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.