ADVERTISEMENT

ದಿನಕ್ಕೊಂದು ಸೇಬು ಸೇವನೆಯಿಂದ ಈ ಎಲ್ಲಾ ಲಾಭಗಳನ್ನು ಪಡೆಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 12:41 IST
Last Updated 11 ಫೆಬ್ರುವರಿ 2026, 12:41 IST
<div class="paragraphs"><p>ಸೇಬು</p></div>

ಸೇಬು

   

ಚಿತ್ರ ಕೃಪೆ; ಗೆಟ್ಟಿ

‘ದಿನಕ್ಕೊಂದು ಸೇಬು ಹಣ್ಣಿನ ಸೇವನೆ, ವೈದ್ಯರಿಂದ ದೂರವಿಡುತ್ತದೆ‘ ಎಂಬ ಮಾತು ಆಗಾಗ ಕೇಳುತ್ತಿರುತ್ತೇವೆ. ಸೇಬು ನೈಸರ್ಗಿಕವಾಗಿ ಪೋಷಕಾಂಶ ಭರಿತ ಹಣ್ಣಾಗಿದೆ. ದೇಹಕ್ಕೆ ಅನುಕೂಲಕರವಾದ ಫೈಬರ್, ಜೀವಸತ್ವಗಳು ಹಾಗೂ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಸೇಬಿನ ನಿಯಮಿತವಾದ ಸೇವನೆ ಆರೋಗ್ಯದ ಸ್ಥಿತಿಯನ್ನು ಸುಧಾರಿಸುತ್ತದೆ.

ADVERTISEMENT

ಸೇಬು

ಹೃದಯ ಆರೋಗ್ಯಕ್ಕೆ ಬೆಂಬಲ

ಸೇಬು ನಾರಿನಾಂಶಗಳಿಂದ ಸಮೃದ್ಧವಾಗಿರುತ್ತದೆ. ಸೇಬಿನಲ್ಲಿರುವ ‘ಪೆಕ್ಟಿನ್’ ಎಂಬ ಅಂಶ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೇಬು

ತೂಕ ನಿರ್ವಹಣೆ

ಸೇಬು ಶೇ 85ರಷ್ಟು ಫೈಬರ್ ಮತ್ತು ನೀರಿನಾಂಶದಿಂದ ಕೂಡಿದೆ. ಒಂದು ಮಧ್ಯಮ ಗಾತ್ರದ ಸೇಬು ಉತ್ತಮ ಕ್ಯಾಲೊರಿ ಅಂಶವನ್ನು ಹೊಂದಿರುತ್ತದೆ. ತೂಕ ಕಡಿಮೆ ಮಾಡಬೇಕು ಎನ್ನುವವರಿಗೆ ಸೇಬು ಉತ್ತಮ ಆಯ್ಕೆಯಾಗಿದೆ. ಹಸಿವನ್ನು ಕೂಡ ಸೇಬು ಕಡಿಮೆಗೊಳಿಸುತ್ತದೆ. 

ಸೇಬು

ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ

ಸೇಬಿನಲ್ಲಿ ‘ಪೆಕ್ಟಿನ್ ಪ್ರಿಬಯಾಟಿಕ್’ ಎಂಬ ನೈಸರ್ಗಿಕವಾಗಿ ಕರಗುವ ವಿಶೇಷ ಫೈಬರ್‌ ಅಂಶವಿರುತ್ತದೆ. ಇದು ಕರುಳಿನಲ್ಲಿರುವ ಆಹಾರ ಕರಗಿಸಲು ಸಹಕಾರಿಯಾಗಿದೆ. ಮುಖ್ಯವಾಗಿ ಕರುಳಿನ ಆರೋಗ್ಯ, ಅತಿಸಾರ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ.

ಸೇಬು

ಮಧುಮೇಹ ಅಪಾಯ ಕಡಿಮೆ

ಸೇಬು ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹಿಗಳು ಆರಾಮವಾಗಿ ಸೇವಿಸಬಹುದು. ದಿನಕ್ಕೆ ಕನಿಷ್ಠ ಒಂದು ಸೇಬನ್ನು ತಿನ್ನುವುದರಿಂದ ಟೈಪ್–2 ಮಧುಮೇಹ ಬರುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಹೇಳುತ್ತವೆ.

ಸೇಬು

ಕ್ಯಾನ್ಸರ್ ತಡೆಗಟ್ಟುವಿಕೆ

ಸೇಬಿನ ಸಿಪ್ಪೆಗಳಲ್ಲಿ ಕಂಡುಬರುವ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್‌ಗಳು ಕ್ಯಾನ್ಸರ್‌ ವಿರೋಧಿ ಗುಣವನ್ನು ಹೊಂದಿವೆ. ಸೇಬಿನ ನಿಯಮಿತ ಸೇವನೆಯಿಂದ ಶ್ವಾಸಕೋಶ, ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.