
ಮುಖದ ಅಂದವನ್ನು ಹಾಳು ಮಾಡುವ ಅನೇಕ ಸಮಸ್ಯೆಗಳಲ್ಲಿ ಬಂಗು ಅಥವಾ ಮೆಲಾಸ್ಮ ಕೂಡ ಒಂದು. ಕೆನ್ನೆ, ಮೂಗು, ಗಲ್ಲದ ಮೇಲೆ ಕಂದು ಬಣ್ಣದ ಮಚ್ಚೆಗಳ ರೀತಿ ಆಗುತ್ತವೆ. ಈ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಬಂಗು ಆಗಲು ಕಾರಣಗಳು?
ಅನುವಂಶಿಕ
ಚರ್ಮದ ಅಲರ್ಜಿ
ಹಾರ್ಮೋನ್ ಸಮಸ್ಯೆ
ಸೌಂದರ್ಯ ವರ್ಧಕ ಉತ್ಪನ್ನಗಳ ಬಳಕೆ
ಮೊಡವೆಗಳು
ಮನೆ ಮದ್ದುಗಳು:
ಅರಶಿಣ ಕೊಂಬು, ಮಾವಿನ ಕಡ್ಡಿಯನ್ನು ಅರೆದು ಬಂಗು ಇರುವ ಜಾಗಕ್ಕೆ ಹಚ್ಚುಬೇಕು.
ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಹಚ್ಚಿ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು.
ಸೋರೆಕಾಯಿ ಅಥವಾ ಹೀರೆಕಾಯಿ ಹಾಗೂ ದೊಡ್ಡ ಪತ್ರೆಯನ್ನು ಸಣ್ಣದಾಗಿ ಅರೆದು ಬಂಗಿನ ಮೇಲೆ ಹಚ್ಚುವುದು ಅಥವಾ ಈ ಎಲೆಗಳ ರಸವನ್ನು ಜೇನುತುಪ್ಪದ ಜತೆ ಸೇವಿಸುವುದರಿಂದ ಬಂಗು ನಿವಾರಣೆ ಆಗುತ್ತದೆ.
ವಾರದಲ್ಲಿ 3 ದಿನವಾದರೂ ಪಪ್ಪಾಯ ಹಣ್ಣಿನ ಒಳ ಭಾಗವನ್ನು ಮುಖಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಬೇಕು.
ಗುಲಾಬಿ ಹೂವಿನ ರಸ ಹಾಗೂ ಮುಲ್ತಾನ್ ಮುಟ್ಟಿಯನ್ನು ಮಿಶ್ರಣ ಮಾಡಿ ಹಚ್ಚುಬೇಕು.
ದಿನಕ್ಕೆ 3–4 ಲೀ ನೀರು ಕುಡಿಯುವುದರಿಂದ ಈ ಬಂಗಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.