ADVERTISEMENT

ಬೊಜ್ಜು ಕರಗಿಸಲು ಇಂಟರ್‌ಮಿಟೆಂಟ್ ಉಪವಾಸ

ಮುರಲೀಧರ ಕುಲಕರ್ಣಿ
Published 14 ಫೆಬ್ರುವರಿ 2020, 19:30 IST
Last Updated 14 ಫೆಬ್ರುವರಿ 2020, 19:30 IST
   

ತೂಕ ಕಡಿಮೆ ಮಾಡಿಕೊಳ್ಳಲು ಸಾಮಾನ್ಯವಾಗಿ ಡಯಟ್‌ ಮಾಡುವುದು ರೂಢಿ. ಕೊಬ್ಬಿನ ಪದಾರ್ಥಗಳನ್ನು ಮತ್ತು ಸಿಹಿತಿಂಡಿಗಳನ್ನು ವರ್ಜಿಸುವುದು, ಅನ್ನವನ್ನು ತ್ಯಜಿಸುವುದು ಸಾಮಾನ್ಯ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಒಂದು ಸುಲಭ ವಿಧಾನ. ಅದೇ ಇಂಟರ್‌ಮಿಟೆಂಟ್ ಉಪವಾಸ.

ಇದು ನಮ್ಮ ತೂಕ ಕಡಿಮೆ ಮಾಡುವುದಲ್ಲದೆ ನಮ್ಮ ಪಚನ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಇಂಟರ್‌ಮಿಟೆಂಟ್ ಉಪವಾಸ ಎಂದರೆ ಒಂದು ದಿನದಲ್ಲಿ 16– 18 ಗಂಟೆಗಳ ಕಾಲ ಉಪವಾಸವಿರುವುದು; ಉಳಿದ6–8 ಗಂಟೆಗಳ ಅವಧಿಯಲ್ಲಿ ಆಹಾರವನ್ನು ಸೇವಿಸುವುದು; ಉಪವಾಸವಿರುವ ಸಮಯದಲ್ಲಿ ನೀರು ಮತ್ತು ಗ್ರೀನ್ ಟೀ ಮಾತ್ರ ಸೇವಿಸುವುದು. ರಾತ್ರಿ 9 ಗಂಟೆಗೆ ಊಟ ಮಾಡಿದರೆ ಮರುದಿನ ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡಬಹುದು. ಈ ಮಧ್ಯದಲ್ಲಿ ಯಾವ ಆಹಾರವನ್ನೂ ಸೇವಿಸುವಂತಿಲ್ಲ.

ಆದರೆ ಇಷ್ಟು ದೀರ್ಘಕಾಲ ಉಪವಾಸವಿರುವುದು ಹೇಗೆ ಸಾಧ್ಯ ಎಂದು ಕೆಲವರಿಗೆ ಅನಿಸಬಹುದು. ಆದರೆ ಅಭ್ಯಾಸದಿಂದ ಏನು ಬೇಕಾದರೂ ಸಾಧಿಸಬಹುದು. ಇದನ್ನು ಬಳಸಿಕೊಳ್ಳಬೇಕೆನ್ನುವವರು ಮೊದಲು 12 ಗಂಟೆಗಳ ಉಪವಾಸದಿಂದ ಆರಂಭಿಸಬೇಕು.

ADVERTISEMENT

ಇಂಟರ್‌ಮಿಟೆಂಟ್ ಉಪವಾಸವು ತೂಕ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿರುವುದರಿಂದ ಇತ್ತೀಚಿಗೆ ಅನೇಕ ಜನರು ಇದನ್ನು ಅನುಸರಿಸುತ್ತಿದ್ದಾರೆ.

ಈ ಉಪವಾಸದಿಂದ ಆಗುವ ಪ್ರಮುಖ ಲಾಭವೆಂದರೆ ಅದು ಪಚನ ಕ್ರಿಯೆಯನ್ನು ವೃದ್ಧಿಸುತ್ತದೆ. ನಾವು ದೀರ್ಘಕಾಲದವರೆಗೆ ಉಪವಾಸ ಮಾಡಿದಾಗ ನಮ್ಮ ಶರೀರದಲ್ಲಿ ಕೆಲವು ಬದಲಾವಣೆಯಾಗುತ್ತದೆ. ಈ ಸ್ಥಿತಿಯಲ್ಲಿ ನಮ್ಮ ಜೀರ್ಣಾಂಗಗಳಿಗೆ ಆಹಾರವನ್ನು ಪಚನ ಮಾಡಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಶ್ರಮ ಬೇಕಾಗುವುದಿಲ್ಲ. ಈ ಸ್ಥಿತಿಯಲ್ಲಿ ಜಠರದಲ್ಲಿ ಆಹಾರದ ಅಭಾವದಿಂದಾಗಿ ನಮ್ಮ ಶರೀರ ನಮ್ಮ ಕೊಬ್ಬನ್ನು ಕರಗಿಸುತ್ತದೆ. ವಿಶೇಷವಾಗಿ ನಾವು ಊಟ ಮಾಡಿದಾಗ ಮತ್ತು ಆಹಾರ ಜಠರದಲ್ಲಿ ಉಳಿದಾಗ ಈ ಸ್ಥಿತಿ ಉಂಟಾಗುತ್ತದೆ.

ಇಂಟರ್‌ಮಿಟೆಂಟ್ ಉಪವಾಸವು ಎರಡು ಊಟಗಳ ನಡುವಿನ ಸಮಯವನ್ನು ಹೆಚ್ಚಿಸುತ್ತದೆಯೇ ಹೊರತು ಊಟದ ಪ್ರಮಾಣವನ್ನು ಬದಲಾಯಿಸುವುದಿಲ್ಲ.

ಈ ಪದ್ಧತಿಯನ್ನು ಅನುಸರಿಸಿದಾಗ ನಾವು ಯಾವ ಆಹಾರ ಪದಾರ್ಥವನ್ನೂ ತ್ಯಜಿಸಬೇಕಾಗಿಲ್ಲ. ಇದರಿಂದ ನಾವು ಏನನ್ನಾದರೂ ಕಳೆದುಕೊಂಡಿದ್ದೇವೆ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.