ನವಜಾತು ಶಿಶುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಜನಿಸುತ್ತಿರುವ ಶಿಶುಗಳಲ್ಲಿ ’ನಿಯೋನಾಟಲ್ ಟ್ರಾನ್ಸಿಯೆಂಟ್ ಹೈಪೊಗ್ಲಿಸಿಮಿಯಾ ’ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ’ಹೈಪೊಗ್ಲಿಸಿಮಿಯಾ ’ ಅಂದರೆ ನವಜಾತ ಶಿಶುಗಳ ರಕ್ಕದಲ್ಲಿ ಕಡಿಮೆ ಸಕ್ಕರೆ ಪ್ರಮಾಣವಿರುವುದಾಗಿದೆ. ಈ ಸಮಸ್ಯೆಯು ಪ್ರಾಥಮಿಕವಾಗಿ ಸಾಮಾನ್ಯವೆನಿಸಿದರೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
'ನಿಯೋನಾಟಲ್ ಟ್ರಾನ್ಸಿಯೆಂಟ್ ಹೈಪೊಗ್ಲಿಸಿಮಿಯಾ'
ಕಡಿಮೆ ತೂಕವಿರುವ ಶಿಶುಗಳಲ್ಲಿ, ಅವಧಿಗೂ ಮುನ್ನ ಜನಿಸಿದ ಶಿಶುವಿನಲ್ಲಿ ಅಥವಾ ಜನನ ಸಮಯದಲ್ಲಿ ಒತ್ತಡ ಅನುಭವಿಸಿದ ಮಕ್ಕಳ ರಕ್ಕದಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವು ಸಾಮಾನ್ಯ. ಆದರೆ ’ಹೈಪರ್ ಇನ್ಸುಲಿನಿಸಮ್’ ಎಂಬ ಅಪರೂಪದ ಸ್ಥಿತಿಯಲ್ಲಿ ಆಹಾರದ ಹೊರತಾಗಿಯೂ ಸಕ್ಕರೆ ಪ್ರಮಾಣ ಪದೇ ಪದೇ ಕುಸಿಯುವಂತೆ ಮಾಡುತ್ತದೆ. ಇದು ಎದೆ ನಡುಕು, ದೃಷ್ಟಿ ಹಾಗೂ ಶ್ರವಣ ದೋಷ, ಮಗುವಿನ ಬೆಳವಣಿಗೆ ಕುಂಟಿತ ಹಾಗೂ ಆಟಿಸಂನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಚಿಕಿತ್ಸೆ ವಿಳಂಬವಾದರೆ ಮೆದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಪ್ರತಿ ಐವತ್ತು ಸಾವಿರ ಶಿಶುಗಳ ಪೈಕಿ ಒಂದು ಶಿಶುವಿಗೆ ಮಾತ್ರ ಈ ಸಮಸ್ಯೆ ಇರುತ್ತದೆ.
ಇತ್ತೀಚಿನ ಪ್ರಕರಣದಲ್ಲಿ ಶಿಶುವಿನ ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಲಾಯಿತು. ಶಿಶುವು ಆಹಾರವನ್ನು ಸೇವಿಸುವುದರಿಂದ ರಕ್ತದ ಸಕ್ಕರೆ ಪ್ರಮಾಣದಲ್ಲಿ ಏರಿಕೆಯಾಗದ ಕಾರಣ ಶಿಶುವಿಗೆ ಗ್ಲೂಕೋಸ್ ಹಾಕಲಾಯಿತು. ಬಳಿಕ ಡಯಾಜಾಕ್ಸೈಡ್ ಎಂಬ ಔಷಧಿಯನ್ನು ಶಿಶುವಿಗೆ ನೀಡಿ ಚಿಕಿತ್ಸೆ ನೀಡಲಾಯಿತು. ಪರಿಶೀಲನೆಯಲ್ಲಿ ’ಹೈಪೊಗ್ಲಿಸಿಮಿಯಾ ’ ಅನುವಂಶೀಯವಾಗಿ ಕಾಡುವ ಸಮಸ್ಯೆಯಲ್ಲ ಎಂದು ವೈದ್ಯರ ತಂಡವು ಹೇಳಿದೆ.
ಪೋಷಕರು ಮಗುವಿನಲ್ಲಿ ಗಮನಿಸಬೇಕಾದ ಲಕ್ಷಣಗಳು:
ಶಿಶು ಸರಿಯಾಗಿ ತಿನ್ನದಿರುವುದು.
ಹೆಚ್ಚು ನಿದ್ರೆ ಅಥವಾ ಆಲಸ್ಯ ತೋರುವುದು.
ಕಿರಿಕಿರಿ ಅಥವಾ ಸಮಾಧಾನಪಡಿಸಲಾಗದ ಅಳು
ಅಸಹಜ ಚಲನೆಗಳು ಅಥವಾ ಮೂರ್ಚೆ ತಪ್ಪುವುದು.
ಶಿಶು ಹುಟ್ಟಿದ ಕ್ಷಣದಿಂದಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಮಿತವಾಗಿದೆಯೇ ಎಂದು ಪರೀಕ್ಷಿಸಬೇಕು.
ನವಜಾತ ಶಿಶುಗಳಲ್ಲಿ ಕಡಿಮೆ ಸಕ್ಕರೆ ಪ್ರಮಾಣವು ತಾತ್ಕಾಲಿಕ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಸಮಸ್ಯೆಗೂ ಕಾರಣವಾಗಬಹುದು. ಮಗುವಿನ ಭವಿಷ್ಯದ ದೃಷ್ಠಿಯಿಂದ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.