ADVERTISEMENT

ಅಪ್ಪಿ ತಪ್ಪಿಯೂ ಗರ್ಭಿಣಿಯರು ಈ ಚಪ್ಪಲಿಯನ್ನು ಹಾಕಲೇಬೇಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 7:55 IST
Last Updated 6 ಫೆಬ್ರುವರಿ 2026, 7:55 IST
   

ಗರ್ಭಾವಸ್ಥೆಯಲ್ಲಿರುವ ಅನೇಕ ಮಹಿಳೆಯರು ತಮ್ಮ ಮಗುವಿಗೆ ಸರಿಯಾದ ಪೋಷಣೆಯನ್ನು ಒದಗಿಸಲು ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದು ಅಗತ್ಯವಾಗಿರುತ್ತದೆ. ಅದರ ಜೊತೆಗೆ ಗರ್ಭಾವಸ್ಥೆಯಲ್ಲಿ ಧರಿಸುವ ಚಪ್ಪಲಿಯ ಕಡೆಯು ನಿಗಾ ವಹಿಸಬೇಕು.

ಹೈ ಹೀಲ್ಸ್‌ ಧರಿಸುವುದರಿಂದ ಎರೆಕ್ಟರ್ ಬೆನ್ನುಮೂಳೆಯ ಸ್ನಾಯುಗಳು, ಹಿಮ್ಮಡಿಯ ಮೂಳೆಯಿಂದ ಪಾದದ ಬೆರಳುಗಳವರೆಗೆ (ಪ್ಲಾಂಟರ್ ಫ್ಯಾಸಿಯಾ) ಮತ್ತು ಮೊಣಕಾಲಿನ ಕೀಲಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಹೈ ಹೀಲ್ಸ್, ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ ಭ್ರೂಣದ (ಮಗುವಿನ) ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಧರಿಸುವುದರಿಂದ ದೇಹದೊಳಗಿನ ರಚನೆಗಳಲ್ಲಿ ವ್ಯತ್ಯಾಸ ಕಂಡುಬರುವುದರಿಂದ ಬೆನ್ನುಮೂಳೆಯಿಂದ ಕಾಲಿನ ಬೆರಳುಗಳವರೆಗೆ ಬದಲಾವಣೆ ಕಂಡುಬರುತ್ತದೆ.

ಹೈ ಹೀಲ್ಸ್

ADVERTISEMENT

ಸದಾ ಹೈ ಹೀಲ್ಸ್‌ ಧರಿಸುವುದರಿಂದ ಕೆಳ ಕಾಲಿನ ಹಿಂಭಾಗದಲ್ಲಿರುವ ಪ್ರಮುಖ ಸ್ನಾಯುಗಳು, ಬೆನ್ನು ಮತ್ತು ಮೊಣಕಾಲು ಕೀಲುಗಳಲ್ಲಿ ನೋವು ಕಾಡಬಹುದು. ಮೊಣಕಾಲಿನ ಕೀಲುಗಳ ಮೇಲೆ ಹೆಚ್ಚು ಒತ್ತಡ ಉಂಟಾಗುವ ಕಾರಣದಿಂದ ಪಾದದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ದೇಹ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಬೀಳುವ ಅಪಾಯ ಕಾಡಬಹುದು.

ಗರ್ಭಾವಸ್ಥೆಯಲ್ಲಿ ನಿಧಾನಗತಿಯ ರಕ್ತ ಪರಿಚಲನೆಯಿಂದಾಗಿ 2ನೇ ಮತ್ತು 3ನೇ ತ್ರೈಮಾಸಿಕದಲ್ಲಿ ಹೈ ಹೀಲ್ಸ್ ಬಳಸುವುದರಿಂದ ಅಪಾಯ ಹೆಚ್ಚು. ಗರ್ಭಾವಸ್ಥೆಯಲ್ಲಿ ಸೊಂಟದ ಮೇಲೆ ಭಾರ ಹೆಚ್ಚಾಗಿರುವುದರಿಂದ ಹೈಹೀಲ್ಸ್‌ ಧರಿಸುವುದು ಭ್ರೂಣಕ್ಕೆ ಅಪಾಯ ಉಂಟು ಮಾಡಬಹುದು.

ಹೈ ಹೀಲ್ಸ್ ಧರಿಸುವ ಅನಿವಾರ್ಯತೆ ಇದ್ದರೆ ಅಂತಹ ಸಂದರ್ಭಗಳಲ್ಲಿ, ಅದನ್ನು ತೆಗೆದ ನಂತರ ಕಾಲುಗಳನ್ನು 10 ರಿಂದ 15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟುಕೊಳ್ಳುವುದು ಉತ್ತಮ. ಇದರಿಂದ ಕಾಲು ನೋವನ್ನು ನಿವಾರಿಸಬಹುದು.

(ಲೇಖಕರು: ಡಾ.ಶಿಲ್ಪರಾಣಿ ಎ, ಸಹಾಯಕ ಪ್ರಾಧ್ಯಾಪಕರು, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ ಎಸ್‌ಡಿಎಂ ಆಯುರ್ವೇದ ಮತ್ತು ಆಸ್ಪತ್ರೆ, ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.