
ಚಿತ್ರ: ಗೆಟ್ಟಿ
ವ್ಯಸನವೆಂಬುದು ತಾನಗಿಯೇ ಬರುವುದಲ್ಲ, ನಾವಾಗಿಯೇ ರೂಢಿಸಿಕೊಳ್ಳುವುದು ಎಂದು ಮನೋವಿಜ್ಞಾನ ಹೇಳುತ್ತದೆ. ಇಂದು ಧೂಮಪಾನ ಯುವಕರಲ್ಲಿ ಪ್ರಬಲ ವ್ಯಸನವಾಗಿ ಬದಲಾಗುತ್ತಿದೆ. ಈ ವ್ಯಸನದಿಂದ ಹೊರಬರಲು ಈ ತಂತ್ರಗಳನ್ನು ಪಾಲಿಸಬಹುದು ಎಂದು ಮನೋವಿಜ್ಞಾನ ಹೇಳುತ್ತದೆ.
ಧೂಮಪಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಮನಸ್ಸು ಹಗುರವಾಗುತ್ತದೆ ಎಂದು ಹೇಳಿದರೂ, ಇದು ಹೊಸ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.
ಧೂಮಪಾನ ವ್ಯಸನಕ್ಕೆ ಕಾರಣವೇನು?
ಒತ್ತಡ ನಿವಾರಕ ಎಂಬ ತಪ್ಪಾದ ಭಾವನೆ: ನಿಕೋಟಿನ್ ಒತ್ತಡವನ್ನು ಕೆಲವು ನಿಮಿಷಗಳ ವರೆಗೆ ಮಾತ್ರ ಕಡಿಮೆ ಮಾಡಬಹುದು. ಶಾಶ್ವತ ಪರಿಹಾರವಲ್ಲ.
ಸಾಮಾಜಿಕ ಪ್ರಭಾವ: ಗೆಳೆಯರ ಗುಂಪಿನ ಒತ್ತಾಯ ಅಥವಾ ಸಮಾಜದಲ್ಲಿ ವಿಭಿನ್ನವಾಗಿ ಕಾಣಬೇಕೆಂಬ ಬಯಕೆ ಕಾರಣವಾಗಬಹುದು.
ಧೂಮಪಾನ ವ್ಯಸನದಿಂದ ಹೊರಬರುವ ಪ್ರಾಯೋಗಿಕ ಮಾರ್ಗಗಳು:
ಸ್ವ-ಅರಿವು: ಧೂಮಪಾನ ಮಾಡಲು ಕಾರಣವೇನು, ಎಂಬುದನ್ನು ಮೊದಲು ಪತ್ತೆ ಮಾಡಿ. ಅದನ್ನು ಒಂದು ಲೇಖನ ರೂಪದಲ್ಲಿ ಬರೆದಿಡಿ.
ಮನಸ್ಸಿನ ಮಾತನ್ನು ನಿರ್ಲಕ್ಷ್ಯಿಸಿ : ಅಂದರೆ ಧೂಮಪಾನ ಮಾಡಬೇಕು ಎಂದು ಮನಸ್ಸು ಹೇಳಿದ ತಕ್ಷಣ ಧೂಮಪಾನ ಮಾಡದೆ ತಡವಾಗಿಸಿ. ಅಥವಾ ನೆನಪಾದಾಗ ಬೇರೆ ಕಡೆಗೆ ನಿಮ್ಮ ಗಮನ ಹರಿಸಿ.
ಹಂತ ಹಂತವಾಗಿ ಕಡಿಮೆ ಮಾಡಿ: ಒಂದೇ ಭಾರಿಗೆ ಧೂಮಪಾನ ಬೀಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಕಡಿಮೆ ಮಾಡಿ.
ಬೆಂಬಲ ಮುಖ್ಯ: ಕುಟುಂಬ ಹಾಗೂ ಸ್ನೇಹಿತರ ಜೊತೆ ತೆರೆದುಕೊಳ್ಳಿ. ಅವರಿಂದಲೂ ಸಲಹೆ ಪಡೆಯಿರಿ. ಇದರ ಜೊತೆಗೆ ಮದ್ಯವರ್ಜನ ಶಿಬಿರಗಳ ಸಹಾಯ ಪಡೆಯಬಹುದು.
ವೈದ್ಯಕೀಯ ಸಹಾಯ: ವೈದ್ಯರಿಂದ ಅಗತ್ಯ ಔಷಧಿ ಹಾಗೂ ಸಲಹೆ ಪಡೆಯುವುದು.
ವೈಯಕ್ತಿಕ ಬದಲಾವಣೆಗಳು: ವ್ಯಾಯಾಮ, ಆರೋಗ್ಯಕರ ಆಹಾರ, ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.