ADVERTISEMENT

ಮುಟ್ಟಿನ ನೋವು ನಿವಾರಣೆಗೆ ಸೂಪರ್‌ಫುಡ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:30 IST
Last Updated 5 ಏಪ್ರಿಲ್ 2019, 19:30 IST
   

ಯುವತಿಯರು ಅದರಲ್ಲೂ ಹದಿಹರೆಯದ ಹುಡುಗಿಯರು ಮುಟ್ಟಿನ ನೋವಿನಿಂದ ಬಾಧೆಪಡುವುದು ಸಾಮಾನ್ಯ. ಪ್ರತಿಯೊಬ್ಬ ಯುವತಿಗೂ ಒಂದಲ್ಲ ಒಂದು ಬಾರಿ ಹೊಟ್ಟೆನೋವು, ಕಾಲುಗಳ ಸೆಳೆತದ ಅನುಭವವಾಗಿರುತ್ತದೆ. ಋತುಚಕ್ರದ ಅವಧಿಯಲ್ಲಿ ಆಹಾರ ಸೇವನೆ ಬಗ್ಗೆ ಗಮನ ನೀಡಿದರೆ ಹೊಟ್ಟೆಶೂಲೆ, ಹೊಟ್ಟೆಯುಬ್ಬರವಲ್ಲದೇ ಭಾವನೆಗಳ ಏರುಪೇರನ್ನೂ ಕಡಿಮೆ ಮಾಡಿಕೊಳ್ಳಬಹುದು.

* ಈ ಸಮಯದಲ್ಲಿ ಸಾಕಷ್ಟು ನೀರು ಸೇವಿಸುವುದನ್ನು ಮರೆಯಬೇಡಿ. ಇದು ಹೊಟ್ಟೆಯುಬ್ಬರ ಹಾಗೂ ಹೊಟ್ಟೆನುಲಿತವನ್ನು ಕಡಿಮೆ ಮಾಡಬಲ್ಲದು.

* ಮುಟ್ಟಿನ ಸಂದರ್ಭದಲ್ಲಿ ಚಾಕೊಲೇಟ್‌ ತಿನ್ನುವ ಆಸೆಯಾಗುವುದು ಸಹಜ ಎನ್ನುತ್ತಾರೆ ತಜ್ಞರು. ಆದರೆ ಇದರ ಆಯ್ಕೆಯಲ್ಲಿ ಎಚ್ಚರಿಕೆ ಇರಲಿ. ಡಾರ್ಕ್‌ ಚಾಕೊಲೇಟ್‌ ನಿಮ್ಮ ತಿನ್ನುವ ಬಯಕೆಯನ್ನು ಕಡಿಮೆ ಮಾಡುವುದಲ್ಲದೇ ಸ್ನಾಯುಗಳನ್ನು ಸಡಿಲಗೊಳಿಸಿ ಆರಾಮದಾಯಕ ಅನುಭವ ನೀಡುತ್ತದೆ.

ADVERTISEMENT

* ಅನಾನಸ್‌ ಹಣ್ಣು ಕೂಡ ಸ್ನಾಯುಗಳನ್ನು ಸಡಿಲಗೊಳಿಸಿ ಮುಟ್ಟಿನ ಶೂಲೆ ಕಡಿಮೆ ಮಾಡುತ್ತದೆ. ನಿಮ್ಮ ಮೂಡ್‌ ಅನ್ನೂ ಬದಲಾಯಿಸಿ ಆರಾಮದಾಯಕ ಅನುಭವ ನೀಡಬಲ್ಲದು.

* ಹಾಗೆಯೇ ಬಾಳೆಹಣ್ಣು ಕೂಡ ಮುಟ್ಟಿನ ನೋವು ಕಡಿಮೆ ಮಾಡುತ್ತದೆ. ಬೆಳಿಗ್ಗೆ ವ್ಯಾಯಾಮ ಅಥವಾ ಬಿರುಸಿನ ಓಟದ ನಂತರ ಸ್ನಾಯು ಹಿಡಿದುಕೊಳ್ಳುವುದನ್ನು ನಿವಾರಿಸಲು ಬಾಳೆಹಣ್ಣು ತಿನ್ನುವ ಪರಿಪಾಠವಿದೆ. ಈ ಹಣ್ಣು ಮುಟ್ಟಿನ ನೋವನ್ನೂ ಕಡಿಮೆ ಮಾಡಬಲ್ಲದು. ಇದನ್ನು ಮುಟ್ಟಿನ ದಿನಗಳಲ್ಲದೇ, 2–3 ದಿನಗಳ ಮೊದಲೂ ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.